ಮುಂಬೈ: ಐಪಿಎಲ್ 15ನೇ ಅವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫಲವಾಗಿದೆ. 5 ಬಾರಿಯ ಚಾಂಪಿಯನ್ಸ್ ಆಡಿರುವ 5 ಪಂದ್ಯಗಳಲ್ಲೂ ಸೋಲು ಕಂಡರೂ ಕೂಡಾ ತಂಡದ ಸಂಯೋಜನೆಯಲ್ಲಿ ಎಡವುತ್ತಿದೆ. ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಕ್ರಿಕೆಟಿಗ ವಸೀಂ ಜಾಫರ್ ದುಬಾರಿ ಬೆಲೆ ತೆತ್ತು ಖರೀದಿಸಿದ ಟಿಮ್ ಡೇವಿಡ್ರನ್ನು ಬೆಂಚ್ ಕಾಯಿಸುತ್ತಿರುವುದನ್ನು ಪ್ರಶ್ನಿಸಿದ್ದಾರೆ.
ಸಿಂಗಾಪುರ್ನ ಆಲ್ರೌಂಡರ್ ಟಿಮ್ ಡೇವಿಡ್ ಸ್ಪೋಟಕ ಆಟಕ್ಕೆ ಹೆಸರಾದವರು. ಈಗಾಗಲೇ ಬಿಗ್ಬ್ಯಾಶ್, ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಅವರ ಆಟವನ್ನು ನೋಡಿದ್ದರಿಂದ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಭಾರಿ ಪೈಪೋಟಿ ನೀಡಿ 8.25 ಕೋಟಿ ರೂ ನೀಡಿ ಖರೀದಿಸಿತ್ತು.
ಆದರೆ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಗಳಲ್ಲಿ ಕ್ರಮವಾಗಿ 12 ಮತ್ತು 1 ರನ್ಗಳಿಸಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಕ್ಕೆ ಅವರನ್ನು ಮುಂದಿನ ಮೂರು ಪಂದ್ಯಗಳಲ್ಲಿ ಬೆಂಚ್ ಕಾಯ್ದಿರಿಸಲಾಗಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ಆತನಿಗೆ ಅವಕಾಶ ನೀಡಿದಿದ್ದಕ್ಕೆ ಮಾಜಿ ಕ್ರಿಕೆಟಿಗ ವಸೀಂ ಜಾಫರ್ ಟ್ವೀಟ್ ಮೂಲಕ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.
-
When you've bought someone for 8.25cr, surely he's good enough to play more than a couple of games. Really surprised to see MI not showing faith in Tim David. #MIvPBKS #IPL2022
— Wasim Jaffer (@WasimJaffer14) April 13, 2022 " class="align-text-top noRightClick twitterSection" data="
">When you've bought someone for 8.25cr, surely he's good enough to play more than a couple of games. Really surprised to see MI not showing faith in Tim David. #MIvPBKS #IPL2022
— Wasim Jaffer (@WasimJaffer14) April 13, 2022When you've bought someone for 8.25cr, surely he's good enough to play more than a couple of games. Really surprised to see MI not showing faith in Tim David. #MIvPBKS #IPL2022
— Wasim Jaffer (@WasimJaffer14) April 13, 2022
"ನೀವು ಒಬ್ಬ ಆಟಗಾರನನ್ನು 8.25 ಕೋಟಿ ರೂ ನೀಡಿ ಖರೀದಿಸಿದ್ದೀರೆಂದರೆ, ಖಂಡಿತ ಆತ ಒಂದೆರಡು ಪಂದ್ಯಗಳಿಗಿಂತ ಹೆಚ್ಚು ಆಡುವಷ್ಟು ಉತ್ತಮನಾಗಿರುತ್ತಾನೆ. ಟಿಮ್ ಡೇವಿಡ್ ಅವರ ಮೇಲೆ ಭರವಸೆಯಿಡದಿರುವ ಮುಂಬೈ ಇಂಡಿಯನ್ಸ್ ನಡೆ ನಿಜಕ್ಕೂ ನನಗೆ ಆಶ್ಚರ್ಯ ತಂದಿದೆ" ಎಂದು ಮುಂಬೈ ಮಾಜಿ ಕ್ರಿಕೆಟರ್ ಟ್ವೀಟ್ ಮಾಡಿದ್ದಾರೆ.
ಮುಂಬೈ ಸತತ 4 ಅಥವಾ 5 ಪಂದ್ಯಗಳನ್ನು ಸೋತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2014 ಮತ್ತು 2015 ಕ್ರಮವಾಗಿ 5 ಮತ್ತು 4 ಸೋಲು ಕಂಡಿತ್ತು. ಆದರೂ ನಂತರದ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ 2014ರಲ್ಲಿ ಪ್ಲೇ ಆಫ್ ಪ್ರವೇಶಿಸಿದರೆ, 2015ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ 2022ರಲ್ಲೂ ಅದೇ ಪರಿಸ್ಥಿತಿ ಎದುರಾಗಿದ್ದು, 5 ಬಾರಿಯ ಚಾಂಪಿಯನ್ ತಿರುಗಿ ಬೀಳುವುದೇ ಕಾದುನೋಡಬೇಕಿದೆ.
ಇದನ್ನೂ ಓದಿ:ಸದ್ದಿಲ್ಲದೇ ಸುದ್ದಿಯಲ್ಲಿದ್ದಾರೆ ಜಿತೇಶ್ ಶರ್ಮಾ: ಪಂಜಾಬ್‌ಗೆ ಬಲ ತಂದುಕೊಟ್ಟ ವಿದರ್ಭ ಸ್ಟಾರ್