ETV Bharat / sports

ಮ್ಯಾಂಚೆಸ್ಟರ್​ನಿಂದ ದುಬೈಗೆ ಬರಲು ಕೊಹ್ಲಿ​, ಸಿರಾಜ್​ಗೋಸ್ಕರ RCBಯಿಂದ ವಿಶೇಷ ಚಾರ್ಟರ್​! - ರಾಯಲ್ ಚಾಲೆಂಜರ್ಸ್ ಬೆಂಗಳೂರು

ಇಂದು ರಾತ್ರಿ ಲಂಡನ್​ನಿಂದ ಪ್ರಯಾಣ ಬೆಳೆಸಲಿರುವ ಆರ್​ಸಿಬಿ ಪ್ಲೇಯರ್ಸ್​ಗಳಾದ ವಿರಾಟ್​ ಕೊಹ್ಲಿ ಹಾಗೂ ಮೊಹಮ್ಮದ್ ಸಿರಾಜ್​​​ ನಾಳೆ ಬೆಳಗ್ಗೆ ದುಬೈಗೆ ಬಂದಿಳಿಯಲಿದ್ದಾರೆ..

Virat, siraj
Virat, siraj
author img

By

Published : Sep 11, 2021, 3:12 PM IST

ದುಬೈ : ಭಾರತ-ಇಂಗ್ಲೆಂಡ್​ ನಡುವಿನ ಫೈನಲ್​ ಟೆಸ್ಟ್​ ಪಂದ್ಯ ರದ್ಧುಗೊಳ್ಳುತ್ತಿದ್ದಂತೆ ಮ್ಯಾಂಚೆಸ್ಟರ್​​​​ನಲ್ಲಿರುವ ವಿವಿಧ ಪ್ಲೇಯರ್ಸ್​ ಐಪಿಎಲ್​​​ನಲ್ಲಿ ಭಾಗಿಯಾಗಲು ದುಬೈಗೆ ಬರಲು ಸಿದ್ಧರಾಗಿದ್ದಾರೆ. ಹೀಗಾಗಿ, ಐಪಿಎಲ್​​ ಪ್ರಾಂಚೈಸಿಗಳು ಖಾಸಗಿ ಚಾರ್ಟರ್​​​​ನಲ್ಲಿ ಅವರನ್ನ ಕರೆತರುವ ಪ್ರಯತ್ನದಲ್ಲಿ ಮಗ್ನವಾಗಿವೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಕ್ಯಾಪ್ಟನ್​​ ವಿರಾಟ್​​ ಕೊಹ್ಲಿ ಹಾಗೂ ಬೌಲರ್​ ಮೊಹಮ್ಮದ್​ ಸಿರಾಜ್​ ಅವರನ್ನ ಕರೆತರಲು ಆರ್​​ಸಿಬಿ ವಿಶೇಷ ಚಾರ್ಟರ್ ವಿಮಾನದ​ ವ್ಯವಸ್ಥೆ ಮಾಡಿದೆ ಎಂದು ವರದಿಯಾಗಿದೆ.

RCB
ರಾಯಲ್​ ಚಾಲೆಂಜರ್ಸ್ ಬೆಂಗಳೂರು

ಸೆಪ್ಟೆಂಬರ್​ 19ರಿಂದ ಇಂಡಿಯನ್​ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಗೊಳ್ಳಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್​ ಸೆಣಸಾಟ ನಡೆಸಲಿವೆ. ಪಂದ್ಯ ಆರಂಭಗೊಳ್ಳಲು ಕೇವಲ 8 ದಿನ ಮಾತ್ರ ಬಾಕಿ ಉಳಿದ ಕಾರಣ, ಇಂದು ರಾತ್ರಿ ವೇಳೆಗೆ ಮ್ಯಾಂಚೆಸ್ಟರ್​ನಲ್ಲಿರುವ ವಿವಿಧ ಪ್ಲೇಯರ್ಸ್​​ ದುಬೈಗೆ ಬಂದಿಳಿಯುವ ಸಾಧ್ಯತೆ ದಟ್ಟವಾಗಿದೆ.

ಆರ್​ಸಿಬಿ ತಿಳಿಸಿರುವ ಮಾಹಿತಿ ಪ್ರಕಾರ ಇಂದು ರಾತ್ರಿ 11:30ಕ್ಕೆ ಲಂಡನ್​ನಿಂದ ವಿಶೇಷ ವಿಮಾನವಿದೆ. ಅದರಲ್ಲಿ ನಮ್ಮ ಪ್ಲೇಯರ್ಸ್​ ದುಬೈಗೆ ಬಂದಿಳಿಯಲಿದ್ದಾರೆ ಎಂದಿದೆ. ಸೆಪ್ಟೆಂಬರ್​ 20ರಂದು ನಡೆಯಲಿರುವ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಆರ್​ಸಿಬಿ-ಕೋಲ್ಕತ್ತಾ ನೈಟ್​ ರೈಡರ್ಸ್ ಮುಖಾಮುಖಿಯಾಗಲಿವೆ.

ಇದನ್ನೂ ಓದಿರಿ: ನಾಳೆ ಮ್ಯಾಂಚೆಸ್ಟರ್‌ನಿಂದ ದುಬೈಗೆ ಸಿಎಸ್‌ಕೆ ಆಟಗಾರರ ಪ್ರಯಾಣ?: ಸಿಇಒ ಹೇಳಿದ್ದೇನು..

ಇದೇ ವಿಷಯಕ್ಕೆ ಸಂಬಂಧಿಸಿದಂತೆ ನಿನ್ನೆ ಮಾತನಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಸಿಇಒ ಕಾಶಿ ವಿಶ್ವನಾಥನ್​, ಮ್ಯಾಂಚೆಸ್ಟರ್​​ನಲ್ಲಿರುವ ಸಿಎಸ್​ಕೆ ಪ್ಲೇಯರ್ಸ್​ ಕರೆತರಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ಇಂದು ರಾತ್ರಿ ವೇಳೆಗೆ ಪ್ಲೇಯರ್ಸ್​ ದುಬೈ ತಲುಪಲಿದ್ದಾರೆ ಎಂದು ತಿಳಿಸಿದ್ದರು.

ಆರು ದಿನಗಳ ಕಾಲ ಕ್ವಾರಂಟೈನ್​

ಮ್ಯಾಂಚೆಸ್ಟರ್​ನಿಂದ ದುಬೈಗೆ ಆಗಮಿಸುವ ಎಲ್ಲ ಪ್ಲೇಯರ್ಸ್​ ಆರು ದಿನಗಳ ಕಾಲ ಕ್ವಾರಂಟೈನ್​ಗೊಳಗಾಲಿದ್ದಾರೆ. ಇದಾದ ಬಳಿಕ ತಂಡ ಸೇರಿಕೊಳ್ಳಲಿದ್ದಾರೆ. ಮ್ಯಾಂಚೆಸ್ಟರ್​ನಲ್ಲಿ ಪ್ರಮುಖವಾಗಿ ರೋಹಿತ್ ಶರ್ಮಾ, ವಿರಾಟ್​ ಕೊಹ್ಲಿ, ರಿಷಬ್ ಪಂತ್​, ಪೃಥ್ವಿ ಶಾ, ಮಯಾಂಕ್​ ಅಗರವಾಲ್​, ಇಶಾಂತ್​ ಶರ್ಮಾ, ಮೊಹಮ್ಮದ್ ಶಮಿ, ಮೊಹಮ್ಮದ್​ ಸಿರಾಜ್​​ ಜೊತೆಗೆ ಮೊಯಿನ್​ ಅಲಿ, ಸ್ಯಾಮ್​ ಕರ್ರನ್​ ಸೇರಿ ಅನೇಕ ಪ್ಲೇಯರ್‌​ಗಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.