ETV Bharat / sports

ರಾವಲ್ಪಿಂಡಿಯಲ್ಲಿ ಪಾಕ್-ಆಸೀಸ್ ಮುಖಾಮುಖಿ: ಐತಿಹಾಸಿಕ ಟೆಸ್ಟ್​ ಪಂದ್ಯದಲ್ಲಿ ಗೆಲುವು ಯಾರಿಗೆ?

ಆಸ್ಟ್ರೇಲಿಯಾ 1998ರ ನಂತರ ಮೊದಲ ಬಾರಿಗೆ ಪಾಕಿಸ್ತಾನ ಪ್ರವಾಸ ಕೈಗೊಂಡಿದೆ. ಈ ಬಾರಿ ಕಾಂಗರೂಗಳು ತಲಾ ಮೂರು ಟೆಸ್ಟ್​ ಮತ್ತು ಏಕದಿನ ಪಂದ್ಯ ಹಾಗೂ ಏಕೈಕ ಟಿ20 ಪಂದ್ಯಗಳನ್ನಾಡಲಿದ್ದಾರೆ.

Australia to play first Test in Pakistan after 24 years
ಆಸ್ಟ್ರೇಲಿಯಾ vs ಪಾಕಿಸ್ತಾನ ಟೆಸ್ಟ್​ ಪಂದ್ಯ
author img

By

Published : Mar 3, 2022, 7:24 PM IST

ರಾವಲ್ಪಿಂಡಿ: ಆಸ್ಟ್ರೇಲಿಯಾ ಕ್ರಿಕೆಟ್‌ ತಂಡವು ಶುಕ್ರವಾರ ರಾವಲ್ಪಿಂಡಿಯಲ್ಲಿ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. 24 ವರ್ಷಗಳ ನಂತರ ಕಾಂಗರೂ ಬಳಗ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದು ಐತಿಹಾಸಿಕ ಪಂದ್ಯದ ಎಲ್ಲಾ ಟಿಕೆಟ್​ಗಳು ಈಗಾಗಲೆ ಮಾರಾಟವಾಗಿವೆ.

ಲೆಜೆಂಡರಿ ಆಸ್ಟ್ರೇಲಿಯನ್ ಆಲ್​ರೌಂಡರ್​ ರಿಚಿ ಬೆನೌಡ್​ ಮತ್ತು ಪಾಕಿಸ್ತಾನಿ ಲೆಗ್​ ಸ್ಪಿನ್ನರ್​ ಅದ್ಭುಲ್ ಖಾದಿರ್​ ಅವರಿಗೆ ಗೌರವ ಸಲ್ಲಿಸಲು ಪಾಕಿಸ್ತಾನ vs ಆಸ್ಟ್ರೇಲಿಯಾ ನಡುವಿನ ಈ ಟೆಸ್ಟ್​ ಸರಣಿಯನ್ನು ಬೆನೌಟ್​-ಖಾದಿರ್​ ಟ್ರೋಫಿ ಎಂದು ನಾಮಕರಣ ಮಾಡಲಾಗಿದೆ. ಆಸ್ಟ್ರೇಲಿಯಾ 1998ರ ನಂತರ ಮೊದಲ ಬಾರಿಗೆ ಪಾಕಿಸ್ತಾನ ಪ್ರವಾಸ ಕೈಗೊಂಡಿದೆ.

ದೀರ್ಘ ವಿರಾಮದ ನಂತರ ಪಾಕಿಸ್ತಾನ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಆತಿಥ್ಯ ವಹಿಸಿಕೊಳ್ಳುವುದಕ್ಕೆ ಶುರು ಮಾಡಿದ ಮೇಲೆ ರಾವಲ್ಪಿಂಡಿಯಲ್ಲಿ ಕೇವಲ 4 ಟೆಸ್ಟ್​ ಪಂದ್ಯಗಳು ಮಾತ್ರ ನಡೆದಿವೆ.

ಆಸ್ಟ್ರೇಲಿಯಾ ಇತ್ತೀಚೆಗೆ ಟಿ20 ವಿಶ್ವಕಪ್ ಮತ್ತು ಆ್ಯಶಸ್ ಸರಣಿಯನ್ನು 4-0ಯಲ್ಲಿ ಗೆದ್ದು ಅತ್ಯುತ್ತಮ ಲಯದಲ್ಲಿದೆ. ಆದರೆ 2016ರಲ್ಲಿ ನ್ಯೂಜಿಲ್ಯಾಂಡ್​ನಲ್ಲಿ ಟೆಸ್ಟ್​ ಸರಣಿಯನ್ನು ಗೆದ್ದದ್ದು ಬಿಟ್ಟರೆ ಇಲ್ಲಿಯವರೆಗೆ ವಿದೇಶಿ ನೆಲದಲ್ಲಿ ಟೆಸ್ಟ್​ ಸರಣಿ ಗೆಲ್ಲಲು ವಿಫಲವಾಗಿದೆ. ಆಸ್ಟ್ರೇಲಿಯಾ ತಂಡ ವೇಗಿಗಳಿಗಳಿಂದ ತುಂಬಿದೆ, ಆದರೆ ಪಾಕಿಸ್ತಾನದಲ್ಲಿನ ಟರ್ನಿಂಗ್​ ವಿಕೆಟ್​ಗಳಿಗೆ ಒಗ್ಗಿಕೊಳ್ಳಬೇಕಿದೆ ಮತ್ತು ತಂಡದಲ್ಲಿ 2 ಅಥವಾ 3 ಸ್ಪಿನ್ನರ್​ಗಳ ಜೊತೆಯಲ್ಲಿ ಕಣಕ್ಕಿಳಿಯಬೇಕಿದೆ.

ಆಸ್ಟ್ರೇಲಿಯಾ ಬ್ಯಾಟಿಂಗ್ ಬಳಗ ಬಲಿಷ್ಠವಾಗಿದೆ ನಿಜ. ಆದರೆ ಉಪಖಂಡದ ಪರಿಸ್ಥಿತಿಯಲ್ಲಿ ಡೇವಿಡ್ ವಾರ್ನರ್, ಮಾರ್ನಸ್​ ಲಾಬುಶೇನ್, ಸ್ಟೀವ್​ ಸ್ಮಿತ್ ಮತ್ತು ಟ್ರಾವಿಸ್ ಹೆಡ್​ರಂತಹ ಬ್ಯಾಟರ್​ಗಳು ವಿಭಿನ್ನವಾದ ಸವಾಲುಗಳನ್ನು ಎದುರಿಸಬೇಕಿದೆ.

ನಾಯಕ ಪ್ಯಾಟ್​ ಕಮಿನ್ಸ್, ಮಿಚೆಲ್ ಸ್ಟಾರ್ಕ್​, ಜೋಶ್ ಹೇಜಲ್​ವುಡ್ ಜೊತೆಗೂಡಿ ವೇಗದ ಬೌಲಿಂಗ್ ನಿರ್ವಹಿಸಿದರೆ, 400 ವಿಕೆಟ್​ ಪಡೆದಿರುವ ನೇಥನ್ ಲಿಯಾನ್, ಸ್ಪಿನ್ನ​ರ್ ವಿಭಾಗದ ದೊಡ್ಡ ಜವಾಬ್ದಾರಿ ನಿರ್ವಹಿಸಬೇಕಿದೆ. ಅವರು ಏಷ್ಯನ್ ಪಿಚ್​ನಲ್ಲಿ 95 ವಿಕೆಟ್ ಪಡೆದಿದ್ದಾರೆ.

ಪಾಕಿಸ್ತಾನ ತಂಡದ ಬಗ್ಗೆ ಚರ್ಚಿಸುವುದಾದರೆ, ಬ್ಯಾಟಿಂಗ್ ವಿಭಾಗದ ಜವಾಬ್ದಾರಿ ಹೆಚ್ಚು ನಾಯಕ ಬಾಬರ್ ಅಜಮ್ ಮತ್ತು ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಹೆಗಲ ಮೇಲಿದೆ. ಇನ್ನು ಆತಿಥೇಯ ತಂಡಕ್ಕೆ ಪ್ರಮುಖ ಬೌಲರ್​ಗಳಾದ ಹಸನ್​ ಅಲಿ ಮತ್ತು ಹ್ಯಾರಿಸ್ ರೌಫ್ ಅವರಿಗೆ ಕೋವಿಡ್​ ಸೋಂಕು ತಗುಲಿರುವುದು ದೊಡ್ಡ ಹೊಡೆತವಾಗಿದೆ. ಅನನುಭವಿಗಳಾದ ನಸೀಮ್ ಶಾ ಮತ್ತು ಶಾಹೀನ್ ಶಾ ಅಫ್ರಿದಿ ಪಾಕಿಸ್ತಾನ ಬೌಲಿಂಗ್ ವಿಭಾಗವನ್ನು ನಿರ್ವಹಿಸಬೇಕಾಗಿದೆ.

ಇದನ್ನೂ ಓದಿ:ಭಾರತದ ಟೆಸ್ಟ್​ ಕ್ರಿಕೆಟ್​ ಯಶಸ್ಸಿಗೆ ಕೊಹ್ಲಿ ಕಾರಣ: ರೋಹಿತ್ ಶರ್ಮಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.