ಮುಂಬೈ : ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ ಕಳೆದ ನಾಲ್ಕು ಪಂದ್ಯಗಳಲ್ಲಿ ಆರ್‌ಸಿಬಿ ಹೀರಾ ಆಗಿದ್ದ ಹರ್ಷಲ್ ಪಟೇಲ್ರ ಒಂದೇ ಓವರ್ನಲ್ಲಿ 37 ರನ್ ಸಿಡಿಸಿದಾರೆ. ಆ ಮೂಲಕ ಒಂದೇ ಓವರ್ನಲ್ಲಿ ಹೆಚ್ಚುರನ್ ಸಿಡಿಸಿದ ವಿಂಡೀಸ್ ದೈತ್ಯ ಕ್ರಿಸ್ ಗೇಲ್‌ರ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ.
28 ಎಸೆತಗಳಲ್ಲಿ 62 ರನ್ಗಳಿಸಿದ ಜಡೇಜಾ, ಹರ್ಷಲ್ ಪಟೇಲ್ 20ನೇ ಓವರ್ನಲ್ಲಿ(6,6,6+no,6,2,6,4) 5 ಸಿಕ್ಸರ್ ಮತ್ತು ಒಂದು ಬೌಂಡರಿ ಸೇರಿದಂತೆ 37 ರನ್ ಚಚ್ಚಿದರು.
ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಒಂದೇ ಓವರ್ನಲ್ಲಿ ಹೆಚ್ಚು ರನ್ ಸಿಡಿಸಿದ ದಾಖಲೆಯನ್ನು ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಜೊತೆ ಹಂಚಿಕೊಂಡರು.
2011ರ ಐಪಿಎಲ್ನಲ್ಲಿ ಆರ್‌ಸಿಬಿ ತಂಡದಲ್ಲಿದ್ದ ಕ್ರಿಸ್ ಗೇಲ್ ಕೊಚ್ಚಿ ಟಸ್ಕರ್ಸ್ ಕೇರಳ ತಂಡದ ಪ್ರಶಾಂತ್ ಪರಮೇಶ್ವರನ್ ಓವರ್ನಲ್ಲಿ 37 ರನ್ ಸಿಡಿಸಿದ್ದರು. ಗೇಲ್ 4 ಸಿಕ್ಸರ್ ಮತ್ತು 3 ಬೌಂಡರಿ ಬಾರಿಸಿದ್ದರು. ಆ ಓವರ್ನ 2ನೇ ಎಸೆತ ನೋಬಾಲ್ ಆಗಿತ್ತು.
ಒಂದೇ ಓವರ್ನಲ್ಲಿ 5 ಸಿಕ್ಸರ್ ಸಿಡಿಸಿದ 3ನೇ ಬ್ಯಾಟ್ಸ್ಮನ್ : ಜಡೇಜಾ ಗರಿಷ್ಠ ರನ್ ಅಲ್ಲದೆ ಒಂದೇ ಓವರ್ನಲ್ಲಿ 5 ಸಿಕ್ಸರ್ ಸಿಡಿಸಿದ 3ನೇ ಬ್ಯಾಟ್ಸ್ಮನ್ ಎನಿಸಿಕೊಂಡರು.
ಈ ಮೊದಲು ಕ್ರಿಸ್ ಗೇಲ್ 2012ರಲ್ಲಿ ಪುಣೆ ವಾರಿಯರ್ಸ್ ತಂಡದ ರಾಹುಲ್ ಶರ್ಮಾ ಅವರ ಓವರ್ನಲ್ಲಿ ಸತತ 5 ಸಿಕ್ಸರ್ ಸಿಡಿಸಿದ್ದರು. ಆ ಓವರ್ನ ಮೊದಲ ಎಸೆತದಲ್ಲಿ ಸೌರಬ್ ತಿವಾರಿ ಸಿಂಗಲ್ಸ್ ತೆಗೆದುಕೊಂಡಿದ್ದರು.
ಕಳೆದ ವರ್ಷ ರಾಜಸ್ಥಾನ್ ರಾಯಲ್ಸ್ನ ರಾಹುಲ್ ತೆವಾಟಿಯಾ ಪಂಜಾಬ್ ಕಿಂಗ್ಸ್ ತಂಡ ಕಾಟ್ರೆಲ್ ಬೌಲಿಂಗ್ನಲ್ಲಿ 5 ಸಿಕ್ಸರ್ ಸಿಡಿಸಿ 224 ರನ್ಗಳ ದಾಖಲೆಯ ರನ್ ಚೇಸ್ ಮಾಡಲು ನೆರವಾಗಿದ್ದರು.