ರಾಜ್ಕೋಟ್: 2021ರ ಐಪಿಎಲ್ ರದ್ದಾಗಿದ್ದು, ಎಲ್ಲ ಆಟಗಾರರು ತಮ್ಮ ತಮ್ಮ ಮನೆಗಳಿಗೆ ಸೇರಿಕೊಂಡಿದ್ದಾರೆ. ಅಹ್ಮದಾಬಾದ್ನಲ್ಲಿದ್ದ ರವೀಂದ್ರ ಜಡೇಜಾ ಡಲ್ಲಾ ಆಟಗಾರರಿಗಿಂತ ಬೇಗ ಮನೆ ಸೇರಿದ್ದು, ಇದನ್ನು ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿದ್ದಾರೆ.
ಗುಜರಾತ್ನ ಜಾಮ್ನಗರದಲ್ಲಿ ತಮ್ಮ ನಿವಾಸಕ್ಕೆ ತೆರಳಿರುವ ಜಡೇಜಾ ತಮ್ಮ ಫಾರ್ಮ್ಹೌಸ್ಗೆ ತೆರಳಿದ್ದು, ಅಲ್ಲಿ ತಮ್ಮ ಪ್ರೀತಿಯ ಕುದುರೆಗಳೊಂದಿಗೆ ಫೋಟೋಗಳ ಜೊತೆಗೆ ಭಾವನಾತ್ಮಕ ಸಂದೇಶವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
-
Back to the place where I feel safe!!🐎 #farmhouse #staysafe pic.twitter.com/17l9eNnw0b
— Ravindrasinh jadeja (@imjadeja) May 5, 2021 " class="align-text-top noRightClick twitterSection" data="
">Back to the place where I feel safe!!🐎 #farmhouse #staysafe pic.twitter.com/17l9eNnw0b
— Ravindrasinh jadeja (@imjadeja) May 5, 2021Back to the place where I feel safe!!🐎 #farmhouse #staysafe pic.twitter.com/17l9eNnw0b
— Ravindrasinh jadeja (@imjadeja) May 5, 2021
ನಾನು ಎಲ್ಲಿ ಸುರಕ್ಷಿತವಾಗಿರುತ್ತೇನೆ ಎಂದು ಭಾವಿಸುವ ಸ್ಥಳಕ್ಕೆ ಮರಳಿದ್ದೇನೆ ಎಂದು ಫಾರ್ಮ್ಹೌಸ್ನಿಂದ ಜಡೇಜಾ ಟ್ವೀಟ್ ಮಾಡಿದ್ದಾರೆ. ಕುದುರೆಗಳನ್ನು ತುಂಬಾ ಪ್ರೀತಿಸುವ ಜಡೇಜಾ ತಮ್ಮ ಫಾರ್ಮ್ ಹೌಸ್ನಲ್ಲಿ ಮೂರು ಕುದುರೆಗಳನ್ನು ಸಾಕಿದ್ದಾರೆ.
ಗಾಯದಿಂದ ಚೇತರಿಸಿಕೊಂಡು ಐಪಿಎಲ್ಗೆ ಮರಳಿದ್ದ ಜಡೇಜಾ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಅವರು ಈ ಆವೃತ್ತಿಯಲ್ಲಿ 131ರನ್ ಮತ್ತು 6 ವಿಕೆಟ್ ಪಡೆದಿದ್ದಾರೆ. ಅಲ್ಲದೇ ಆರ್ಸಿಬಿಯ ಹರ್ಷೆಲ್ ಪಟೇಲ್ ಓವರ್ನಲ್ಲಿ 37 ಸಿಡಿಸಿದ್ದರು. ಕಳೆದ ವರ್ಷದ ವೈಫಲ್ಯದಿಂದ ಮರಳಿದ್ದ ಸಿಎಸ್ಕೆ ಕೂಡ 7 ಪಂದ್ಯಗಳಲ್ಲಿ 5 ಗೆಲುವು 2 ಸೋಲುಗಳ ಸಹಿತ 10 ಅಂಕ ಪಡೆದು 2ನೇ ಸ್ಥಾನ ಪಡೆದಿದ್ದರು.
ಇದನ್ನು ಓದಿ:ಐಪಿಎಲ್ 2021: ಪಡಿಕ್ಕಲ್, ಎಬಿಡಿ, ಪೊಲಾರ್ಡ್ ಸೇರಿದಂತೆ ಟಾಪ್ 5 ಇನ್ನಿಂಗ್ಸ್ ಇಲ್ಲಿದೆ