ETV Bharat / sports

Ravindra Jadeja records : ಬಿಷನ್ ಸಿಂಗ್ ಬೇಡಿ ದಾಖಲೆ ಹಿಂದಿಕ್ಕಿದ ಟೆಸ್ಟ್​ನ ನಂ.1 ಆಲ್​ರೌಂಡರ್​ ಜಡೇಜಾ​

author img

By

Published : Jun 10, 2023, 5:16 PM IST

ಟೆಸ್ಟ್​ ಆಲ್​ರೌಂಡರ್​ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಜಡೇಜ ಚಾಂಪಿಯನ್​ಶಿಪ್​ನಲ್ಲಿ ಎರಡು ವಿಕೆಟ್​ ಉರುಳಿಸಿ ದಾಖಲೆ ನಿರ್ಮಾಣ ಮಾಡಿದ್ದಾರೆ.

ICC World Test Championship Final 2023 ravindra records in wtc final
ಜಡೇಜಾ​

ಓವೆಲ್​ (ಲಂಡನ್) : ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಎನಿಸಿಕೊಂಡಿರುವ ರವೀಂದ್ರ ಜಡೇಜಾ, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಫೈನಲ್​ನಲ್ಲಿ ಪಂದ್ಯದ ಮೂರನೇ ದಿನ ವಿಶೇಷ ಸಾಧನೆ ಮಾಡಿದರು.

ಈ ಸಾಧನೆ ಮಾಡಿದ ದೇಶದ ಅತ್ಯುತ್ತಮ ಎಡಗೈ ಸ್ಪಿನ್ನರ್ ಎನಿಸಿಕೊಂಡಿದ್ದಾರೆ. ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ಅವರನ್ನು ಔಟ್ ಮಾಡುವ ಮೂಲಕ ದೊಡ್ಡ ದಾಖಲೆ ನಿರ್ಮಿಸಿದ ದೇಶದ ಖ್ಯಾತ ಆಟಗಾರ ಬಿಷನ್ ಸಿಂಗ್ ಬೇಡಿ ಅವರನ್ನು ಹಿಂದಿಕ್ಕಿದ್ದಾರೆ.

ಭಾರತ ತಂಡದ ಹಿರಿಯ ಆಟಗಾರ ಬಿಶನ್ ಸಿಂಗ್ ಬೇಡಿ ಅವರ ದಾಖಲೆಯನ್ನು ರವೀಂದ್ರ ಜಡೇಜಾ ಮುರಿದಿದ್ದಾರೆ. ಬಿಶನ್ ಸಿಂಗ್ ಬೇಡಿ 67 ಪಂದ್ಯಗಳಲ್ಲಿ 266 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ ಈಗ 65 ಪಂದ್ಯಗಳಲ್ಲಿ 267 ವಿಕೆಟ್ ಪಡೆದಿದ್ದಾರೆ.

ಇದುವರೆಗೆ 65 ಟೆಸ್ಟ್​ ಪಂದ್ಯದಲ್ಲಿ 124 ಇನ್ನಿಂಗ್ಸ್​ ಆಡಿರುವ ರವೀಂದ್ರ ಜಡೇಜ 6476 ರನ್​​ಗಳನ್ನು ಬಿಟ್ಟುಕೊಟ್ಟು, 2.45 ಎಕಾನಮಿಯನ್ನು ಬಾಲ್​ ಮಾಡಿದ್ದಾರೆ. ಅದರಂತೆ ಅವರು 24.25ರ ಸರಾಸರಿಯನ್ನು ಕಾಯ್ದುಕೊಂಡಿದ್ದಾರೆ. ಅವರು ಅತ್ಯುತ್ತಮ ಬೌಲಿಂಗ್​ನಲ್ಲಿ 42 ರನ್​ ಕೊಟ್ಟು 7 ವಿಕೆಟ್​ ಪಡೆದದ್ದಾಗಿದೆ.

ಇದರ ಜೊತೆಗೆ, ಅವರು ಎಕದಿನ ಮತ್ತು ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎಡಗೈ ಸ್ಪಿನ್ ಬೌಲರ್ ಆಗಿದ್ದಾರೆ. ಎಡಗೈ ಸ್ಪಿನ್ ಬೌಲರ್ ರವೀಂದ್ರ ಜಡೇಜಾ 174 ಏಕದಿನ ಪಂದ್ಯಗಳಲ್ಲಿ 168 ಇನ್ನಿಂಗ್ಸ್​ಗಳನ್ನು ಆಡಿದ್ದು 191 ವಿಕೆಟ್​ ಕಬಳಿಸಿದ್ದಾರೆ.

ಇದನ್ನೂ ಓದಿ: WTC Final: ರಹಾನೆ ಇನ್ನಿಂಗ್ಸ್ ಹೊಗಳಿದ ಆಸೀಸ್​ ವೇಗಿ ಸ್ಟಾರ್ಕ್​, ಸಂಕಷ್ಟದಲ್ಲಿ ಭಾರತ

64 ಟಿ20 ಪಂದ್ಯಗಳಲ್ಲಿ 62 ಇನ್ನಿಂಗ್ಸ್​ ಆಡಿದ್ದು 51 ವಿಕೆಟ್ ಪಡೆದಿದ್ದಾರೆ. ಹಾಗೆ ನೋಡಿದರೆ ಮೂರೂ ಮಾದರಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎಡಗೈ ಸ್ಪಿನ್ ಬೌಲರ್ ಎನಿಸಿಕೊಂಡಿದ್ದಾರೆ.

ಮೂರನೇ ದಿನದಾಟದವರೆಗೆ ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್ ಕಳೆದುಕೊಂಡಿರುವ ಆಸ್ಟ್ರೇಲಿಯಾ ಭಾರತದ ವಿರುದ್ಧ 296 ರನ್‌ಗಳ ಪ್ರಬಲ ಮುನ್ನಡೆ ಸಾಧಿಸಿದೆ. ಭಾರತ ಆಸ್ಟ್ರೇಲಿಯಾವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಲು ಚಿಂತಿಸುತ್ತಿದೆ. ಇದರ ಜೊತೆಗೆ ಪಂದ್ಯ ಗೆಲ್ಲಲು ಭಾರತ ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್​ ಸುಧಾರಿಸಿಕೊಳ್ಳಬೇಕಿದೆ. ಈ ಬಗ್ಗೆ ಮಾತನಾಡಿದುವ ಶಾರ್ದೂಲ್​ 450 + ಗುರಿಯನ್ನು ಕೊನೆಯ ದಿನ ಭಾರತ ಸಾಧಿಸ ಬಹುದು ಎಂದು ಹೇಳಿದ್ದಾರೆ.

ಪಂದ್ಯದಲ್ಲಿ: ನಾಲ್ಕನೇ ದಿನದಾಟ ಆರಂಭವಾಗಿದ್ದು, ಮೊದಲ ಸೆಷನ್​ನಲ್ಲಿ ಈ ವರೆಗೆ ಎರಡು ವಿಕೆಟ್​ಗಳನ್ನು ಕಬಳಿಸಿದೆ. ನಿನ್ನೆ ಕ್ರೀಸ್​ನಲ್ಲಿದ್ದ ಮಾರ್ನಸ್​ ಲಬುಶೇನ್​ (41) ಮತ್ತು ಕ್ಯಾಮರಾನ್​ ಗ್ರೀನ್​ (25) ವಿಕೆಟ್​ ಕೊಟ್ಟಿದ್ದಾರೆ. ಜಡೇಜಾಗೆ ಇಂದೊಂದು ವಿಕೆಟ್​ ಸಿಕ್ಕಿದ್ದು, ಅವರು ಎರಡನೇ ಸೆಷನ್​ನಲ್ಲಿ ಮೂರನೇ ವಿಕೆಟ್​ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ICC WTC Final: ನಾಲ್ಕನೇ ದಿನ ನಡೆಯುತ್ತಾ ಜಡೇಜಾ ಜಾದು.. 200 ಒಳಗೆ ಆಸಿಸ್ ಕಟ್ಟಿಹಾಕಿದಲ್ಲಿ ಭಾರತಕ್ಕೆ ಗೆಲುವು ಸನಿಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.