ಬರ್ಮಿಂಗ್ಹ್ಯಾಮ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಶತಕ ಸಿಡಿಸಿ ಮಿಂಚಿದ್ದಾರೆ. 7ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಕಣಕ್ಕಿಳಿದ ಈ ಪ್ಲೇಯರ್, ವಿಕೆಟ್ ಕೀಪರ್ ಕಮ್ ಬ್ಯಾಟರ್ ಪಂತ್ ಜೊತೆ ಉತ್ತಮ ಜೊತೆಯಾಟ ನೀಡುವ ಮೂಲಕ ಪಂದ್ಯದ ಎರಡನೇ ದಿನ ಸೆಂಚುರಿ ಬಾರಿಸಿದ್ದಾರೆ.
-
CENTURY for @imjadeja 👏👏
— BCCI (@BCCI) July 2, 2022 " class="align-text-top noRightClick twitterSection" data="
This is his third 💯 in Test cricket 👌👌
LIVE - https://t.co/LL20D1K7si #ENGvIND pic.twitter.com/10LrrWiuVB
">CENTURY for @imjadeja 👏👏
— BCCI (@BCCI) July 2, 2022
This is his third 💯 in Test cricket 👌👌
LIVE - https://t.co/LL20D1K7si #ENGvIND pic.twitter.com/10LrrWiuVBCENTURY for @imjadeja 👏👏
— BCCI (@BCCI) July 2, 2022
This is his third 💯 in Test cricket 👌👌
LIVE - https://t.co/LL20D1K7si #ENGvIND pic.twitter.com/10LrrWiuVB
ತಾವು ಎದುರಿಸಿದ 194 ಎಸೆತಗಳಲ್ಲಿ 13 ಬೌಂಡರಿ ಸಮೇತವಾಗಿ 104ರನ್ಗಳಿಸಿದ ಜಡೇಜಾ, ತಂಡದ ರನ್ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ಇದರ ಜೊತೆಗೆ ಒಂದೇ ವರ್ಷದಲ್ಲಿ ಎರಡು ಶತಕ ಸಾಧನೆ ದಾಖಲೆ ಬರೆದರು. 7ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಮೈದಾನಕ್ಕಿಳಿದು ಈ ಸಾಧನೆ ಮಾಡಿರುವ ಸಾಲಿನಲ್ಲಿ ಈಗಾಗಲೇ ಕಪಿಲ್ ದೇವ್, ಧೋನಿ, ಹರ್ಭಜನ್ ಸಿಂಗ್ ಇದ್ದು, ಇದೀಗ ರವೀಂದ್ರ ಜಡೇಜಾ ಸಹ ಆ ಸಾಲಿಗೆ ಸೇರ್ಪಡೆಯಾಗಿದ್ದಾರೆ.
ವಿದೇಶಿ ಅಂಗದಲ್ಲಿ ಮೊದಲ ಶತಕ ಸಾಧನೆ: ಆಲ್ರೌಂಡರ್ ರವೀಂದ್ರ ಜಡೇಜಾ ವಿದೇಶಿ ಅಂಗಳದಲ್ಲಿ ಇದೇ ಮೊದಲ ಸಲ ಟೆಸ್ಟ್ ಶತಕ ಸಿಡಿಸಿರುವ ಸಾಧನೆ ಮಾಡಿದ್ದಾರೆ. ಜೊತೆಗೆ ಟೆಸ್ಟ್ ಕ್ರಿಕೆಟ್ನಲ್ಲಿ ಮೂರನೇ ಶತಕ ಸಿಡಿಸಿದ್ದಾರೆ. ಈ ಹಿಂದೆ 2018ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ರಾಜ್ಕೋಟ್ನಲ್ಲಿ ಹಾಗೂ ಕಳೆದ ಮಾರ್ಚ್ ತಿಂಗಳಲ್ಲಿ ಶ್ರೀಲಂಕಾ ವಿರುದ್ಧ ಮೊಹಾಲಿಯಲ್ಲಿ ಶತಕ ಸಿಡಿಸಿದ್ದರು.
ಇದನ್ನೂ ಓದಿ: ಶತಕ ಸಿಡಿಸಿ ಆರ್ಭಟಿಸಿದ ಪಂತ್.. ಕೋಚ್ ದ್ರಾವಿಡ್ ಸಂಭ್ರಮಿಸಿದ್ದು ಹೀಗೆ
98ರನ್ಗಳಿಸುವಷ್ಟರಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಂಡಿದ್ದ ವೇಳೆ ಒಂದಾದ ಪಂತ್-ಜಡೇಜಾ ಜೋಡಿ ಬರೋಬ್ಬರಿ 222ರನ್ಗಳ ಜೊತೆಯಾಟವಾಡಿತು. ಮೊದಲ ದಿನದ ಅಂತ್ಯಕ್ಕೆ 83ರನ್ಗಳಿಕೆ ಮಾಡಿ, ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದ ಜಡೇಜಾ ಇಂದು ಶತಕ(104ರನ್) ಸಿಡಿಸಿದ ಬಳಿಕ ವಿಕೆಟ್ ಒಪ್ಪಿಸಿದ್ದಾರೆ.