ಮುಂಬೈ: ಎಂಎಸ್ ಧೋನಿಯಿಂದ ತೆರವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ಆಲ್ರೌಂಡರ್ ರವೀಂದ್ರ ಜಡೇಜಾ ವಹಿಸಿಕೊಂಡಿದ್ದಾರೆ. ಆದರೆ, ಮೊದಲ ಬಾರಿ ಐಪಿಎಲ್ನಲ್ಲಿ ನಾಯಕನಾಗಿರುವ ಜಡೇಜಾ ಉತ್ತಮ ಆರಂಭ ಪಡೆಯುವಲ್ಲಿ ವಿಫಲರಾಗಿದ್ದಾರೆ. ಸಿಎಸ್‌ಕೆ ತಂಡದ ಸ್ಟಾರ್ ಬ್ಯಾಟರ್ ಅಂಬಾಟಿ ರಾಯುಡು, ನಾಯಕನಾಗಿ ರವೀಂದ್ರ ಜಡೇಜಾ ದಿನದಿಂದ ದಿನಕ್ಕೆ ಉತ್ತಮವಾಗುತ್ತಿದ್ದಾರೆ.
ಅವರಿಗೆ ತಂಡವನ್ನು ಮುನ್ನೆಸುವ ಸಾಮರ್ಥ್ಯವಿದೆ, ಕೇವಲ ಸಿಎಸ್‌ಕೆ ಮಾತ್ರವಲ್ಲ ಮುಂದೊಂದು ದಿನ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಸಿಎಸ್‌ಕೆ ಯೂಟ್ಯೂಬ್ ಚಾನೆಲ್ನಲ್ಲಿ ಹೈದರಾಬಾದ್ ಬ್ಯಾಟರ್ ಹೇಳಿದ್ದಾರೆ. ಎಂಎಸ್ ಧೋನಿ ಸ್ಥಾನವನ್ನು ತುಂಬುವುದಕ್ಕೆ ಸಾಧ್ಯವಿಲ್ಲ. ಆದರೆ ಜಡ್ಡು ಆ ಸಾಮರ್ಥ್ಯವನ್ನು ಹೊಂದಿದ್ದಾರೆ.
ಧೋನಿ ಮಾರ್ಗದರ್ಶನದಲ್ಲಿ ಮತ್ತು ಮೈದಾನದಲ್ಲಿ ಅವರ ಉಪಸ್ಥಿತಿಯಲ್ಲಿ ಜಡೇಜಾ ಈ ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸುವುದು ಸುಲಭವಾಗಲಿದೆ. ಅವರಿಗೆ ಕೇವಲ ಸಿಎಸ್‌ಕೆ ಮುನ್ನಡೆಸುವ ಸಾಮರ್ಥ್ಯ ಮಾತ್ರವಲ್ಲ, ಮುಂದೊಂದು ದಿನ ಅವರು ಭಾರತವನ್ನು ಮುನ್ನಡೆಸುವ ಸಾಮರ್ಥ್ಯ ಅವರಲ್ಲಿದೆ ಎಂದು ಕಳೆದ 5 ಆವೃತ್ತಿಗಳಿಂದ ಸಿಎಸ್‌ಕೆ ಪ್ರತಿನಿಧಿಸುತ್ತಿರುವ ರಾಯುಡು ಹೇಳಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಆಡಿರುವ 7 ಪಂದ್ಯಗಳಲ್ಲಿ 5 ರಲ್ಲಿ ಸೋಲು ಕಂಡಿದೆ. ಆದರೆ, ಕಳೆದ ಮೂರು ಪಂದ್ಯಗಳಲ್ಲಿ 2 ರಲ್ಲಿ ಜಯಿಸಿದೆ. ಮತ್ತೊಂದು ಪಂದ್ಯವನ್ನು ಕಳಪೆ ಫೀಲ್ಡಿಂಗ್ನಿಂದ ಕಳೆದುಕೊಂಡಿದ್ದ ಚೆನ್ನೈ ಸೋಮವಾರ ಪಂಜಾಬ್ ವಿರುದ್ಧ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ.
ಇದನ್ನೂ ಓದಿ:ಪ್ರತಿ ದಿಗ್ಗಜ ತಂಡವೂ ವೈಫಲ್ಯ ಅನುಭವಿಸಿವೆ: ರೋಹಿತ್ ಭಾವನಾತ್ಮಕ ಟ್ವೀಟ್