ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ರವೀಂದ್ರ ಜಡೇಜಾ ನೂತನ ನಾಯಕರಾಗಿ ಆಯ್ಕೆಯಾಗಿದ್ದಾರೆ. ಐಪಿಎಲ್ ಹಾಲಿ ಚಾಂಪಿಯನ್ ತಂಡದ ಹೊಣೆ ಹೊತ್ತಿರುವ ಜಡ್ಡು, 'ಮಹತ್ತರ ಜವಾಬ್ದಾರಿ ನೀಡಿದ್ದಕ್ಕೆ ಭಾರಿ ಖುಷಿ ಇದೆ. ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ದಾರಿಯಲ್ಲಿ ಮುನ್ನಡೆಯುವೆ' ಎಂದು ಹೇಳಿದ್ದಾರೆ.
ಜಡೇಜಾ ನಾಯಕನಾದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿರುವ ವಿಡಿಯೋವನ್ನು ಚೆನ್ನೈ ತಂಡ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ತಮಗೆ ಸಿಕ್ಕ ಈ ಗೌರವ ತುಂಬಾ ದೊಡ್ಡದು. ಧೋನಿ ಭಾಯ್ ರೂಪಿಸಿರುವ ಪರಂಪರೆ ಮುಂದುವರಿಸಿಕೊಂಡು ಹೋಗಬೇಕಿದೆ. ಈ ಜವಾಬ್ದಾರಿ ಚಿಕ್ಕದಲ್ಲ ಎಂದರು.
-
📹 First reactions from the Man himself!#ThalaivanIrukindran 🦁💛 @imjadeja pic.twitter.com/OqPVIN3utS
— Chennai Super Kings (@ChennaiIPL) March 24, 2022 " class="align-text-top noRightClick twitterSection" data="
">📹 First reactions from the Man himself!#ThalaivanIrukindran 🦁💛 @imjadeja pic.twitter.com/OqPVIN3utS
— Chennai Super Kings (@ChennaiIPL) March 24, 2022📹 First reactions from the Man himself!#ThalaivanIrukindran 🦁💛 @imjadeja pic.twitter.com/OqPVIN3utS
— Chennai Super Kings (@ChennaiIPL) March 24, 2022
ಅಲ್ಲದೇ, ಧೋನಿ ತಂಡದಲ್ಲಿರುವ ಕಾರಣ ಅವರ ಸಹಾಯ ಇದ್ದೇ ಇರುತ್ತದೆ. ಹೀಗಾಗಿ ನಾನು ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಏನಾದರೂ ಸಮಸ್ಯೆಯಾದಲ್ಲಿ ಅವರ ಮಾರ್ಗದರ್ಶನ ಸಿಗಲಿದೆ ಎಂದಿದ್ದಾರೆ.
ಭಾರತ ತಂಡದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಚೆನ್ನೈ ನಾಯಕತ್ವ ತ್ಯಜಿಸಿದ್ದು, ಇದೀಗ 'ಸರ್ ರವೀಂದ್ರ ಜಡೇಜಾ' ಹೆಗಲಿಗೆ ಜವಾಬ್ದಾರಿ ನೀಡಲಾಗಿದೆ. ಇದೇ 26 ರಂದು ಮುಂಬೈನಲ್ಲಿ ಕೋಲ್ಕತ್ತಾ ವಿರುದ್ಧ ನಡೆಯುವ ಮೊದಲ ಪಂದ್ಯದಲ್ಲಿ ಜಡೇಜಾ ತಂಡ ಮುನ್ನಡೆಸಲಿದ್ದಾರೆ.
ಇದನ್ನೂ ಓದಿ: ಸಿಎಸ್‌ಕೆ ನಾಯಕತ್ವ ತೊರೆದ 'ಕ್ಯಾಪ್ಟನ್ ಕೂಲ್' ಧೋನಿ: 'ಸರ್.ಜಡೇಜಾ' ಹೆಗಲಿಗೆ ಮಹತ್ವದ ಜವಾಬ್ದಾರಿ!