ಹೈದರಾಬಾದ್: ಭಾರತ ತಂಡದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಮೈದಾನದಲ್ಲಿ ತಮ್ಮ ಚುರುಕಿನ ಫೀಲ್ಡಂಗ್, ಚಾಣಾಕ್ಷ್ಯ ಸ್ಪಿನ್ ಬೌಲಿಂಗ್ ಹಾಗೂ ಸ್ಫೋಟಕ ಬ್ಯಾಟಿಂಗ್ನಿಂದ ಮನರಂಜನೆ ನೀಡುವಂತೆಯೇ ಮೈದಾನದ ಹೊರೆಗೂ ತಮ್ಮ ಪ್ರತಿಭೆಯಿಂದ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.
ಈ ಹಿಂದೆ ಕುದುರೆ ಸವಾರಿ, ಕತ್ತಿ ವರಸೆಯಂತಹ ಕಲೆಗಳ ಪ್ರದರ್ಶನ ನೀಡುತ್ತಿದ್ದ ಜಡ್ಡು ಇದೀಗ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗೆ ಪಕ್ಕ ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿರುವ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರದ ಕಳೆದ ವಾರ ಬಿಡುಗಡೆಯಾಗಿ ರಾಷ್ಟ್ರಾದ್ಯಂತ ಯಶಸ್ವಿ ಪ್ರದರ್ಶನ ಕಂಡು ಮುನ್ನುಗ್ಗುತ್ತಿದೆ. ಈ ಚಿತ್ರದ ಹಲವು ಡೈಲಾಗ್ಗಳು ಸಾಮಾಜಿಕ ಜಾಲಾತಾಣದಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ.
-
Pushpa...
— Pushpa (@PushpaMovie) December 23, 2021 " class="align-text-top noRightClick twitterSection" data="
Pushpa Raj...
Ni yavva Thaggedhe Le...🔥🤙#ThaggedheLe #Pushpa @imjadeja 🤩💥#PushpaTheRise pic.twitter.com/skt0RmitkM
">Pushpa...
— Pushpa (@PushpaMovie) December 23, 2021
Pushpa Raj...
Ni yavva Thaggedhe Le...🔥🤙#ThaggedheLe #Pushpa @imjadeja 🤩💥#PushpaTheRise pic.twitter.com/skt0RmitkMPushpa...
— Pushpa (@PushpaMovie) December 23, 2021
Pushpa Raj...
Ni yavva Thaggedhe Le...🔥🤙#ThaggedheLe #Pushpa @imjadeja 🤩💥#PushpaTheRise pic.twitter.com/skt0RmitkM
ಸ್ಟೈಲಿಸ್ಟ್ ಸ್ಟಾರ್ ಎಂದೇ ಖ್ಯಾತರಾಗಿರುವ ಅರ್ಜುನ್ ಈ ಚಿತ್ರದಲ್ಲಿ ರಕ್ತಚಂದನ ಸ್ಮಗ್ಲರ್ ಆಗಿ ಭಾರಿ ಮಾಸ್ ಲುಕ್ನಲ್ಲಿ ನಟಿಸಿದ್ದಾರೆ. ಇದೀಗ ಜಡೇಜಾ ಕೂಡ ಅಲ್ಲು ಅರ್ಜುನ್ರಂತೆಯೇ ದಾಡಿ ಬಿಟ್ಟು ಹೆಚ್ಚು ಕಡಿಮೆ ಪುಷ್ಪ ಚಿತ್ರದಲ್ಲಿರುವ ಪುಷ್ಪರಾಜ್ನಂತೆಯೇ ಕಾಣಿಸುತ್ತಿದ್ದಾರೆ. ಸಿನಿಮಾನದ ಜನಪ್ರಿಯ ಡೈಲಾಗ್ ಆದ ' ಪುಷ್ಪ... ಪುಷ್ಪರಾಜ್..., ನೀ ಯವ್ವ ತಗ್ಗೆದೇ ಲೇ...' ಎಂದು ರೀಲ್ಸ್ ಮಾಡಿ ತಮ್ಮ ಸಾಮಾಜಿಕ ಜಾಲಾತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋವನ್ನು ಸುಮಾರು 7.5 ಲಕ್ಷ ಮಂದಿ ಲೈಕ್ ಮಾಡಿದ್ದು, 14.2 ಸಾವಿರ ಮಂದಿ ಕಮೆಂಟ್ ಮಾಡಿದ್ದಾರೆ.
ಈ ವಿಡಿಯೋಗೆ ಅಲ್ಲು ಅರ್ಜುನ್ ಸೂಪರ್ ಎಂದು ಕಮೆಂಟ್ ಮಾಡಿದ್ದು, ಇದಕ್ಕೆ ಜಡೇಜಾ ಈಗಲೂ ನಾನು ನಿಮ್ಮಷ್ಟು ಚೆನ್ನಾಗಿ ಮಾಡಿಲ್ಲ ಎಂದು ಉತ್ತರಿಸಿದ್ದಾರೆ. ಇನ್ನು ಸ್ವತಃ ಪುಷ್ಪ ತಂಡ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ.
ಭಾರತದ ಸಹ ಆಟಗಾರ ಕುಲ್ದೀಪ್ ಯಾದವ್ ನಿಮ್ಮ ಮುಂದಿನ ಸಿನಿಮಾಗೆ ಕಾಯುತ್ತಿದ್ದೇನೆ ಎಂದು ಕಮೆಂಟ್ ಮಾಡಿದ್ದು, ಇದಕ್ಕೆ ಜಡೇಜಾ, ಹೌದು, ಎನ್ಸಿಎದಲ್ಲಿ ಶೂಟಿಂಗ್ ನಡೆಯುತ್ತಿದೆ ಎಂದು ತಮಾಷೆಯ ಉತ್ತರ ಕೊಟ್ಟಿದ್ದಾರೆ.
ಪ್ರಸ್ತುತ ರವೀಂದ್ರ ಜಡೇಜಾ ಹಾಗೂ ರೋಹಿತ್ ಶರ್ಮಾ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿಯಲ್ಲಿ ಪುನಶ್ಚೇತನಕ್ಕೆ ಒಳಗಾಗಿದ್ದಾರೆ. ಈ ಇಬ್ಬರು ಆಟಗಾರರು ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಭಾಗವಾಗುತ್ತಿಲ್ಲ.
ಇದನ್ನೂ ಓದಿ:ಟೆಸ್ಟ್ ಕ್ರಿಕೆಟ್ ನಿವೃತ್ತಿಯ ಊಹಾಪೋಹಗಳಿಗೆ ತೆರೆ ಎಳೆದ ರವಿಂದ್ರ ಜಡೇಜಾ