ETV Bharat / sports

ಕುಂಬ್ಳೆ ಸಾಲಿಗೆ ಸೇರಲಿದ್ದಾರೆ ರವಿಚಂದ್ರನ್ : ಹರಿಣಗಳ ವಿರುದ್ಧ ಟೆಸ್ಟ್​​ನಲ್ಲಿ ಅಶ್ವಿನ್ ತಲುಪುವರೇ ಈ ಮೈಲಿಗಲ್ಲು?

Most Wickets in Test: ಅನಿಲ್ ಕುಂಬ್ಳೆ ನಂತರ ಭಾರತ ತಂಡದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ದೊಡ್ಡ ದಾಖಲೆ ನಿರ್ಮಿಸುವ ಅವಕಾಶ ಹೊಂದಿದ್ದಾರೆ.

ravichandran ashwin
ravichandran ashwin
author img

By ETV Bharat Karnataka Team

Published : Dec 18, 2023, 9:47 PM IST

ಹೈದರಾಬಾದ್​: ಐಸಿಸಿ ಟೆಸ್ಟ್​ ಶ್ರೇಯಾಂಕದ ನಂ.1 ಬೌಲರ್​ ರವಿಚಂದ್ರನ್ ಅಶ್ವಿನ್ ದಾಖಲೆ ನಿರ್ಮಾಣದ ಹೊಸ್ತಿಲಿನಲ್ಲಿದ್ದಾರೆ. ಅಶ್ವಿನ್​ ಬೌಲಿಂಗ್​ನಲ್ಲಿ ಇನ್ನು 11 ವಿಕೆಟ್​ಗಳು ಉರುಳಿದರೆ ಟೆಸ್ಟ್​ನಲ್ಲಿ 500 ವಿಕೆಟ್​ ಪಡೆದ ದಾಖಲೆ ಮಾಡಲಿದ್ದಾರೆ. ಭಾರತದ ಪರ ಟೆಸ್ಟ್​ ಒಂದರಲ್ಲೇ 500 ವಿಕೆಟ್​ ಪಡೆದ ಎರಡನೇ ಆಟಗಾರ ಎಂಬ ಖ್ಯಾತಿಗೆ ಆಶ್ವಿನ್​ ಒಳಗಾಗುತ್ತಾರೆ. ಈ ಮೊದಲು ಕನ್ನಡಿಗ ಅನಿಲ್​ ಕುಂಬ್ಳೆ ಈ ಸಾಧನೆ ಮಾಡಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾದ ಆಫ್ ಸ್ಪಿನ್ನರ್ ನಾಥನ್ ಲಿಯಾನ್ ಭಾನುವಾರ ಪಾಕಿಸ್ತಾನದ ವಿರುದ್ಧ ತಮ್ಮ 500 ಟೆಸ್ಟ್ ವಿಕೆಟ್‌ಗಳನ್ನು ಪೂರೈಸಿದರು. ಅವರು ವಿಶ್ವದ 8 ನೇ ಬೌಲರ್ ಆಗಿದ್ದಾರೆ ಮತ್ತು ಆಸ್ಟ್ರೇಲಿಯಾದ ಮೂರನೇ ಬೌಲರ್ ಆಗಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. ಈ ಪಟ್ಟಿಯಲ್ಲಿರುವ ಏಕೈಕ ಭಾರತೀಯ ಬೌಲರ್ ಅನಿಲ್ ಕುಂಬ್ಳೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪೈಕಿ ಆಸ್ಟ್ರೇಲಿಯಾದ ಮೂವರು ಬೌಲರ್‌ಗಳು ಸೇರಿದ್ದಾರೆ. ಅದರಲ್ಲಿ ಇಬ್ಬರು ಸ್ಪಿನ್ ಬೌಲರ್‌ಗಳಾಗಿದ್ದರೆ, ಒಬ್ಬರು ವೇಗದ ಬೌಲರ್. ದಿವಂಗತ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಆಸ್ಟ್ರೇಲಿಯಾ ಪರ 708 ವಿಕೆಟ್ ಪಡೆದಿದ್ದಾರೆ. ಆಫ್ ಸ್ಪಿನ್ನರ್ ನಾಥನ್ ಲಿಯಾನ್ 500 ವಿಕೆಟ್ ಪಡೆದ ಆಸ್ಟ್ರೇಲಿಯಾದ ಎರಡನೇ ಸ್ಪಿನ್ ಬೌಲರ್ ಆಗಿದ್ದಾರೆ. ವೇಗದ ಬೌಲರ್ ಗ್ಲೆನ್ ಮೆಕ್‌ಗ್ರಾತ್ ಆಸ್ಟ್ರೇಲಿಯಾ ಪರ 563 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಮೆಕ್‌ಗ್ರಾತ್ 500ಕ್ಕೂ ಹೆಚ್ಚು ವಿಕೆಟ್ ಪಡೆದ ಆಸ್ಟ್ರೇಲಿಯಾದ ಮೊದಲ ವೇಗದ ಬೌಲರ್ ಆಗಿದ್ದಾರೆ.

ಸ್ಪಿನ್​ ಮಾಂತ್ರಿಕ ಕುಂಬ್ಳೆ: ಟೆಸ್ಟ್‌ನಲ್ಲಿ 500 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್‌ಗಳ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ ಹೆಸರು ಮಾತ್ರ ಸೇರಿದೆ. ಅನಿಲ್ ಕುಂಬ್ಳೆ 132 ಟೆಸ್ಟ್ ಪಂದ್ಯಗಳ 236 ಇನ್ನಿಂಗ್ಸ್‌ಗಳಲ್ಲಿ 619 ವಿಕೆಟ್ ಪಡೆದಿದ್ದಾರೆ. 500 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಭಾರತದ ಏಕೈಕ ಬೌಲರ್ ಇವರು. ಅಶ್ವಿನ್​ 500 ವಿಕೆಟ್​ ಪಡೆದವರ ಪಟ್ಟಿ ಸೇರುವ ಸನಿಹದಲ್ಲಿದ್ದಾರೆ. ಅಶ್ವಿನ್ ಈ ಸಾಧನೆ ಮಾಡಿದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ 500 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದ ಭಾರತದ ಎರಡನೇ ಮತ್ತು ವಿಶ್ವದ 9 ನೇ ಬೌಲರ್ ಆಗಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್‌ಗಳನ್ನು ಪೂರೈಸಲು ಅಶ್ವಿನ್‌ಗೆ 11 ವಿಕೆಟ್‌ಗಳ ಅಗತ್ಯವಿದೆ.

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಆಗಲಿದೆಯಾ ರೆಕಾರ್ಡ್​: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತ ಹರಿಣಗಳ ವಿರುದ್ಧ 2 ಟೆಸ್ಟ್​ ಪಂದ್ಯಗಳನ್ನು ಆಡಲಿದೆ. ಜುಲೈನಲ್ಲಿ ಭಾರತ ವೆಸ್ಟ್​ ಇಂಡೀಸ್​ ವಿರುದ್ಧ ಆಡಿದ್ದ ಎರಡು ಟೆಸ್ಟ್​ ಪಂದ್ಯದಲ್ಲಿ ಆರ್​ ಅಶ್ವಿನ್​ 15 ವಿಕೆಟ್​ ಪಡೆದಿದ್ದರು. ಈಗ ಹರಿಣಗಳ ನಾಡಿನಲ್ಲಿ ಎರಡು ಟೆಸ್ಟ್​ನಿಂದ 11 ವಿಕೆಟ್​ ತೆಗೆದಲ್ಲಿ ಹೊಸ ಮೈಲಿಗಲ್ಲು ಅವರ ಹೆಸರಿಗಾಗಲಿದೆ.

ಭಾರತ ತಂಡ ಡಿಸೆಂಬರ್ 26 ರಿಂದ ಜನವರಿ 7 ರವರೆಗೆ ದಕ್ಷಿಣ ಆಫ್ರಿಕಾದೊಂದಿಗೆ 2 ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ಇದಾದ ಬಳಿಕ ಭಾರತದಲ್ಲಿ ಇಂಗ್ಲೆಂಡ್​ ವಿರುದ್ಧ 2024ರ ಜನವರಿಯಲ್ಲಿ 5 ಟೆಸ್ಟ್​ ಪಂದ್ಯಗಳ ಸರಣಿ ನಡೆಯಲಿದೆ. ಹರಿಣಗಳ ನಾಡಿನಲ್ಲಿ ಆಗದಿದ್ದರೂ ತವರು ಮೈದಾನದಲ್ಲಿ ಅಶ್ವಿನ್​ ಕಮಾಲ್​ ಮಾಡಲಿದ್ದಾರೆ.

ಇದನ್ನೂ ಓದಿ:ಎರಡು ಟೆಸ್ಟ್​ ಗೆದ್ದಿದ್ದರೂ ಅಗ್ರಪಟ್ಟ ಕಳೆದುಕೊಂಡ ಪಾಕ್​: ನಿಧಾನಗತಿ ಬೌಲಿಂಗ್​​ಗೆ​ ದಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.