ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಟಾರ್ ಸ್ಪಿನ್ನರ್ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಹೊಸ ಮೈಲಿಗಲ್ಲು ತಲುಪಿದ್ದಾರೆ. ಆಸೀಸ್ ವಿರುದ್ಧ ಅಶ್ವಿನ್ ನೂರು ಟೆಸ್ಟ್ ವಿಕೆಟ್ಗಳನ್ನು ಪಡೆದ ಸಾಧನೆ ಮಾಡಿದರೆ, ಇನ್ನೊಂದೆಡೆ, ಜಡೇಜಾ ಟೆಸ್ಟ್ ವೃತ್ತಿ ಜೀವನದಲ್ಲಿ 250 ವಿಕೆಟ್ಗಳನ್ನು ಕಬಳಿಸಿ ಹೊಸ ದಾಖಲೆ ಸೃಷ್ಟಿಸಿದರು.
ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಪಡೆ ಉತ್ತಮ ಆರಂಭ ಪಡೆಯಿತು. ಓಪನರ್‌ಗಳಾದ ಡೇವಿಡ್ ವಾರ್ನರ್ ಮತ್ತು ಉಸ್ಮಾನ್ ಖವಾಜಾ ಮೊದಲ ವಿಕೆಟ್ಗೆ 50 ರನ್ಗಳ ಜೊತೆಯಾಟ ನೀಡಿದರು. ಆದರೆ, 44 ಎಸೆತಗಳಲ್ಲಿ ಮೂರು ಬೌಂಡರಿಗಳೊಂದಿಗೆ 15 ರನ್ಗಳು ಗಳಿಸಿದ್ದ ವಾರ್ನರ್ ಅವರನ್ನು ಮೊಹಮ್ಮದ್ ಶಮಿ ಪೆವಿಲಿಯನ್ಗಟ್ಟಿದರು.
ಪ್ರಮುಖ ವಿಕೆಟ್ ಉರುಳಿಸಿದ ಆಶ್ವಿನ್: ರವಿಚಂದ್ರನ್ ಅಶ್ವಿನ್ 23ನೇ ಓವರ್‌ನಲ್ಲಿ ವಿಶ್ವದ ನಂ.1 ಟೆಸ್ಟ್ ಬ್ಯಾಟರ್ ಮಾರ್ನಸ್ ಲ್ಯಾಬುಶಾನೆ ಹಾಗೂ ನಂ.2 ಬ್ಯಾಟರ್ ಸ್ಟೀವ್ ಸ್ಮಿತ್ ಅವರ ವಿಕೆಟ್ ಉರುಳಿಸಿ ಆಸೀಸ್ ತಂಡಕ್ಕೆ ಶಾಕ್ ನೀಡಿದರು. 25 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ಸಮೇತ 18 ರನ್ಗಳು ಬಾರಿಸಿದ್ದ ಲ್ಯಾಬುಶಾನೆ ಅವರನ್ನು ತಮ್ಮ ನಾಲ್ಕನೇ ಎಸೆತದಲ್ಲಿ ಅಶ್ವಿನ್ ಎಲ್ಬಿ ಬಲೆಗೆ ಕೆಡವಿದರು. ಅದೇ ಓವರ್‌ನ ಕೊನೆಯ ಎಸೆತದಲ್ಲಿ ಸ್ಟೀವ್ ಸ್ಮಿತ್ ಅವರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಶೂನ್ಯ ಸುತ್ತಿ ಪೆವಿಲಿಯನತ್ತ ಹೆಜ್ಜೆ ಹಾಕಿದರು.
-
Another day at office and another milestone for @ashwinravi99 👏👏
— BCCI (@BCCI) February 17, 2023 " class="align-text-top noRightClick twitterSection" data="
Do you reckon Australia is his favourite opponent?#INDvAUS pic.twitter.com/Oxohqv9HQi
">Another day at office and another milestone for @ashwinravi99 👏👏
— BCCI (@BCCI) February 17, 2023
Do you reckon Australia is his favourite opponent?#INDvAUS pic.twitter.com/Oxohqv9HQiAnother day at office and another milestone for @ashwinravi99 👏👏
— BCCI (@BCCI) February 17, 2023
Do you reckon Australia is his favourite opponent?#INDvAUS pic.twitter.com/Oxohqv9HQi
47ನೇ ಓವರ್‌ನ ಕೊನೆಯ ಎಸೆತದಲ್ಲಿ ಅಲೆಕ್ಸ್ ಕ್ಯಾರಿ ಅವರನ್ನೂ ಅಶ್ವಿನ್ ಶೂನ್ಯಕ್ಕೆ ಔಟ್ ಮಾಡಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಮಾತ್ರವೇ ಶತಕ ವಿಕೆಟ್‌ಗಳ ದಾಖಲೆಯನ್ನು ಟೀಂ ಇಂಡಿಯಾದ ಆಫ್ ಸ್ಪಿನ್ನರ್ ಬರೆದರು. ಜೊತೆಗೆ ಭಾರತದ ಸ್ಪಿನ್ ದಂತಕಥೆ ಅನಿಲ್ ಕುಂಬ್ಳೆ ಅವರ ನಂತರ 100 ವಿಕೆಟ್ ಪಡೆದ ಎರಡನೇ ಭಾರತೀಯ ಬೌಲರ್ ಎಂಬ ಶ್ರೇಯಕ್ಕೂ ಪಾತ್ರರಾಗಿದ್ದಾರೆ.
ಆಶ್ವಿನ್ ತಮ್ಮ 89ನೇ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯ ಆಡುತ್ತಿದ್ದು, ಇದುವರೆಗೆ 457 ವಿಕೆಟ್ಗಳನ್ನು ಪಡೆದಿದ್ದಾರೆ. ನಾಗ್ಪುರದಲ್ಲಿ ನಡೆದ ಮೊದಲ ಪಂದ್ಯದಲ್ಲಿ 450 ವಿಕೆಟ್ಗಳನ್ನು ಪಡೆದ ಸಾಧನೆ ಮಾಡಿದ್ದರು. ಆ ಪಂದ್ಯದಲ್ಲಿ ಅಶ್ವಿನ್ 8 ವಿಕೆಟ್ಗಳನ್ನು ಕಬಳಿಸಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಒಟ್ಟಾರೆ 31 ಬಾರಿ ಇವರು 5 ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ.
-
Milestone 🚨 - @imjadeja becomes the fastest Indian and second fastest in world cricket to 250 Test wickets and 2500 Test runs 🫡🫡#INDvAUS pic.twitter.com/FjpuOuFbOK
— BCCI (@BCCI) February 17, 2023 " class="align-text-top noRightClick twitterSection" data="
">Milestone 🚨 - @imjadeja becomes the fastest Indian and second fastest in world cricket to 250 Test wickets and 2500 Test runs 🫡🫡#INDvAUS pic.twitter.com/FjpuOuFbOK
— BCCI (@BCCI) February 17, 2023Milestone 🚨 - @imjadeja becomes the fastest Indian and second fastest in world cricket to 250 Test wickets and 2500 Test runs 🫡🫡#INDvAUS pic.twitter.com/FjpuOuFbOK
— BCCI (@BCCI) February 17, 2023
ಜಡೇಜಾ 250 ವಿಕೆಟ್, 2,500 ರನ್ ಸಾಧನೆ: ಇದೇ ಟೆಸ್ಟ್ ಪಂದ್ಯದಲ್ಲಿ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಹೊಸ ದಾಖಲೆ ಬರೆದಿದ್ದಾರೆ. ಟೆಸ್ಟ್ ಮಾದರಿಯಲ್ಲಿ 2500 ರನ್ಗಳನ್ನು ಬಾರಿಸುವುದೊಂದಿಗೆ 250 ವಿಕೆಟ್ಗಳು ಪಡೆದ ಸಾಧನೆಯನ್ನು ಜಡ್ಡು ಮಾಡಿದ್ದಾರೆ. ಆಸೀಸ್ ಆಟಗಾರರ ವಿಕೆಟ್ ಉರುಳುತ್ತಿದ್ದರೂ, ಗಟ್ಟಿ ನೆಲೆ ನಿಂತು ಆಡುತ್ತಿದ್ದ ಉಸ್ಮಾನ್ ಖವಾಜಾ (81) ಅವರನ್ನು ಪೆವಿಲಿಯನ್ಗೆ ಕಳುಹಿಸುವ ಮೂಲಕ ಜಡ್ಡು 250 ವಿಕೆಟ್ ಗಡಿ ತಲುಪಿದರು.
ಇದರೊಂದಿಗೆ ಟೆಸ್ಟ್ನಲ್ಲಿ 2500 ರನ್ಗಳು ಬಾರಿಸಿ ಮತ್ತು 250 ವಿಕೆಟ್ಗಳನ್ನು ಪಡೆದ ಭಾರತದ ಅತಿವೇಗದ ಆಟಗಾರ ಎಂಬ ಹೆಗ್ಗಳಿಕೆಗೂ ಜಡೇಜಾ ಪಾತ್ರರಾಗಿದ್ದಾರೆ. ಈ ಸಾಧನೆ ಮಾಡಿದ ಮೊದಲ ಸ್ಥಾನದಲ್ಲಿ ರವಿಚಂದ್ರನ್ ಅಶ್ವಿನ್ ಇದ್ದು, ಜಡೇಜಾ ಎರಡನೇ ಸ್ಥಾನ ಪಡೆದಿದ್ದಾರೆ. ಜೊತೆಗೆ ದಿಗ್ಗಜ ಆಟಗಾರರಾದ ಕಪಿಲ್ ದೇವ್, ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಅಪರೂಪದ ಸಾಧನೆ ಮಾಡಿದ ಐದನೇ ಭಾರತೀಯನೂ ಹೌದು.
ಇದನ್ನೂ ಓದಿ: ರಹಸ್ಯ ಕಾರ್ಯಾಚರಣೆ: ಬಿಸಿಸಿಐ ಮುಖ್ಯ ಆಯ್ಕೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ ಚೇತನ್ ಶರ್ಮಾ