ETV Bharat / sports

100 ಕಿಮೀ ವೇಗದಲ್ಲಿ ಸ್ಪಿನ್​ ಬೌಲ್​ ಮಾಡುವ ರಶೀದ್​ ಖಾನ್​! - ಅಫ್ಘಾನಿಸ್ತಾನದ ಸ್ಪಿನ್​ ಬೌಲರ್​ ರಶೀದ್​ ಖಾನ್​

ಐಪಿಎಲ್​ನಲ್ಲಿ ಹೊಸದಾಗಿ ಸೇರಿಕೊಂಡಿರುವ ಗುಜರಾತ್​ ಟೈಟಾನ್ಸ್​ ತಂಡದಲ್ಲಿ ಆಡುತ್ತಿರುವ ಅಫ್ಘಾನಿಸ್ತಾನದ ಸ್ಪಿನ್​ ಬೌಲರ್​ ರಶೀದ್ ಖಾನ್​ ತಮ್ಮ ವೇಗ ಮತ್ತು ಸ್ಪಿನ್​ ಬೌಲಿಂಗ್​ ಕೌಶಲ್ಯದ ಬಗ್ಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

Rashid Khan
ರಶೀದ್​ ಖಾನ್
author img

By

Published : Apr 1, 2022, 10:42 PM IST

ನವದೆಹಲಿ: ಸ್ಪಿನ್​ ಬೌಲರ್​ಗಳು ಸರಾಸರಿ 75 ರಿಂದ 80 ಕಿಮೀ ವೇಗದಲ್ಲಿ ಬೌಲ್​ ಮಾಡುತ್ತಾರೆ. ಆದರೆ, ಅಫ್ಘಾನಿಸ್ತಾನದ ಲೆಗ್​ ಸ್ಪಿನ್ನರ್​ ರಶೀದ್​ ಖಾನ್​ 100 ಕಿಮೀ ವೇಗದಲ್ಲಿ 'ಸ್ಪಿನ್​ ಬೌಲ್​' ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಇದು ಸ್ಪಿನ್ನರ್​ವೊಬ್ಬ ಈ ವೇಗದಲ್ಲಿ ಬೌಲ್​ ಮಾಡುವುದು ಕಷ್ಟಸಾಧ್ಯ.

ತಮ್ಮ ವೇಗದ ಸ್ಪಿನ್​ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ರಶೀದ್​ ಖಾನ್​, ನಾನು ಬೌಲ್ ಮಾಡುವ ವೇಗದಿಂದಾಗಿ ಸ್ಪಿನ್ ಮತ್ತು ವೇಗದ ಬೌಲರ್ ಆಗಿದ್ದೇನೆ. ಹೆಚ್ಚಿನ ವೇಗದಲ್ಲಿ ಚೆಂಡನ್ನು ಸ್ಪಿನ್ ಮಾಡುವುದು ಕಷ್ಟ. ಅದಕ್ಕೆ ವಿಭಿನ್ನ ರೀತಿಯ ಕೌಶಲ್ಯ ಹೊಂದಿರಬೇಕು. ಅದನ್ನು ನಾನು ರೂಢಿಸಿಕೊಂಡಿದ್ದೇನೆ. ನನ್ನ ಬೌಲಿಂಗ್​ 96 kmph ನಿಂದ 100 kmph ನಡುವೆ ಇರುತ್ತದೆ. ಇದನ್ನು ನಾನು 70 ರಿಂದ 75 kmphಗೆ ಇಳಿಸುವುದಕ್ಕಿಂತ ಅದೇ ವೇಗದಲ್ಲಿ ಬೌಲ್​ ಮಾಡಬೇಕೆಂದು ಬಯಸಿದ್ದೇನೆ ಎಂದಿದ್ದಾರೆ.

ಲೆಗ್​ ಸ್ಪಿನ್ನರ್​ ಅಲ್ಲ ಫಿಂಗರ್​ ಸ್ಪಿನ್ನರ್​: ಲೆಗ್​ ಸ್ಪಿನ್ನರ್​ಗಳು ಸಾಮಾನ್ಯವಾಗಿ ಮಣಿಕಟ್ಟನ್ನು ಬಳಸಿಕೊಂಡು ಬೌಲ್​ ಮಾಡುತ್ತಾರೆ. ಆದರೆ, ನಾನು ಲೆಗ್​ ಸ್ಪಿನ್​ ಮಾಡುವಾದ ಮಣಿಕಟ್ಟನ್ನು ಹೆಚ್ಚಾಗಿ ಬಳಸುವುದಿಲ್ಲ. ಇದರಿಂದ ವೇಗ ಕಡಿತಗೊಳ್ಳುತ್ತದೆ. ಅದಕ್ಕಾಗಿ ಬೆರಳುಗಳನ್ನೇ ಬಳಸಿ ವೇಗದ ಜೊತೆಗೆ ಸ್ಪಿನ್​ ಮಾಡುತ್ತೇನೆ. ಹೀಗಾಗಿ ನನ್ನನ್ನು ಲೆಗ್​ ಸ್ಪಿನ್ನರ್​ ಅಲ್ಲದೇ 'ಫಿಂಗರ್​ ಸ್ಪಿನ್ನರ್​' ಎನ್ನಬಹುದು ಎಂದು ಹೇಳಿದ್ದಾರೆ.

ಅಫ್ಘಾನಿಸ್ತಾನ ತಂಡ ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಥಾನ ಪಡೆದ ಬಳಿಕ ರಶೀದ್ ಈವರೆಗೂ ಕೇವಲ 5 ಟೆಸ್ಟ್‌ಗಳನ್ನು ಮಾತ್ರ ಆಡಿದ್ದಾರೆ. ಅದರಲ್ಲಿ ಅವರು 34 ವಿಕೆಟ್‌ಗಳನ್ನು ಕಿತ್ತಿದ್ದಾರೆ. ಅಲ್ಲದೇ, 23 ವರ್ಷದ ಆಫ್ಘಾನ್ ಸ್ಪಿನ್ನರ್ 312 ಏಕದಿನ ಮತ್ತು ಟಿ-20 ಪಂದ್ಯಗಳಲ್ಲಿ 436 ವಿಕೆಟ್‌ಗಳನ್ನು ಕಿತ್ತಿದ್ದು, ಜಾಗತಿಕವಾಗಿ ಸದ್ಯ ಅತಿ ಹೆಚ್ಚು ಬೇಡಿಕೆಯಿರುವ ಟಿ- 20 ಸ್ಪೆಷಲಿಸ್ಟ್​ ಬೌಲರ್​ ಆಗಿದ್ದಾರೆ. ಐಪಿಎಲ್​ನಲ್ಲಿ ಹೊಸದಾಗಿ ಸ್ಥಾನ ಪಡೆದಿರುವ ಹಾರ್ದಿಕ್​ ಪಾಂಡ್ಯಾ ನೇತೃತ್ವದ ಗುಜರಾತ್​ ಟೈಟಾನ್ಸ್​ನಲ್ಲಿ ಆಡುತ್ತಿದ್ದಾರೆ.

ಓದಿ: ಉಮೇಶ್​ ಯಾದವ್ ಮಿಂಚು... 137 ರನ್​ಗಳಿಗೆ ಪಂಜಾಬ್​ ಕಿಂಗ್ಸ್​ ಆಲೌಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.