ETV Bharat / sports

ಟಿ20 ಕ್ರಿಕೆಟ್​ನಲ್ಲಿ ವೇಗವಾಗಿ 400 ವಿಕೆಟ್: ದಾಖಲೆ ಬರೆದ ರಶೀದ್ ಖಾನ್

author img

By

Published : Nov 7, 2021, 10:13 PM IST

23 ವರ್ಷದ ಸ್ಪಿನ್ನರ್​ ಮಾರ್ಟಿನ್ ಗಪ್ಟಿಲ್​ ವಿಕೆಟ್​ ಪಡೆಯುವ ಮೂಲಕ ಚುಟುಕು ಕ್ರಿಕೆಟ್​ನಲ್ಲಿ 289 ಪಂದ್ಯಗಳಲ್ಲಿ ಈ ವಿಶೇಷ ಮೈಲುಗಲ್ಲು ತಲುಪಿದ್ದಾರೆ. ವೆಸ್ಟ್​ ಇಂಡೀಸ್​ನ ಡ್ವೇನ್ ಬ್ರಾವೋ ಈ ಮೈಲುಗಲ್ಲು ಸ್ಥಾಪಿಸಲು 364 ಪಂದ್ಯಗಳನ್ನು ತೆಗೆದುಕೊಂಡಿದ್ದರು.

Rashid Khan becomes fastest bowler to take 400 wickets in T20 cricket
ರಶೀದ್ ಖಾನ್ 400 ವಿಕೆಟ್ಸ್

ಅಬುಧಾಬಿ: ಟಿ20 ವಿಶ್ವಕಪ್​​ನ ಸೂಪರ್​ 12ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ​ಅಫ್ಘಾನಿಸ್ತಾನ ಸ್ಟಾರ್​ ಲೆಗ್ ಸ್ಪಿನ್ನರ್​ ರಶೀದ್ ಖಾನ್ ಟಿ20 ಕ್ರಿಕೆಟ್​ನಲ್ಲಿ 400 ವಿಕೆಟ್​ ಪೂರ್ಣಗೊಳಿಸಿದ್ದಾರೆ.

23 ವರ್ಷದ ಸ್ಪಿನ್ನರ್​ ಮಾರ್ಟಿನ್ ಗಪ್ಟಿಲ್​ ವಿಕೆಟ್​ ಪಡೆಯುವ ಮೂಲಕ ಚುಟುಕು ಕ್ರಿಕೆಟ್​ನಲ್ಲಿ 289 ಪಂದ್ಯಗಳಲ್ಲಿ ಈ ಮೈಲುಗಲ್ಲು ತಲುಪಿದ್ದಾರೆ. ವೆಸ್ಟ್​ ಇಂಡೀಸ್​ನ ಡ್ವೇನ್ ಬ್ರಾವೋ ಈ ಮೈಲುಗಲ್ಲು ಸ್ಥಾಪಿಸಲು 364 ಪಂದ್ಯಗಳನ್ನು ತೆಗೆದುಕೊಂಡಿದ್ದರು. ಆದರೂ ಬ್ರಾವೋ ಟಿ20 ಪಂದ್ಯಗಳಲ್ಲಿ 500 ವಿಕೆಟ್ ಪಡೆದಿರುವ ವಿಶ್ವದ ಏಕೈಕ ಬೌಲರ್​ ಆಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಶನಿವಾರ ನಿವೃತ್ತಿ ಘೋಷಿಸಿದ ಬ್ರಾವೋ 512 ಪಂದ್ಯಗಳಿಂದ 553 ವಿಕೆಟ್​ ಪಡೆದಿದ್ದಾರೆ.

ಬ್ರಾವೋ ಹೊರತುಪಡಿಸಿದರೆ ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹೀರ್​ 320 ಪಂದ್ಯಗಳಲ್ಲಿ ಮತ್ತು ವೆಸ್ಟ್​ ಇಂಡೀಸ್​ನ ಸುನಿಲ್ ನರೈನ್ 362 ಪಂದ್ಯಗಳಲ್ಲಿ 400 ವಿಕೆಟ್​ ಪಡೆದಿದ್ದರು. ನರೈನ್ ಒಟ್ಟು ಟಿ20ಯಲ್ಲಿ 425 ವಿಕೆಟ್ ಮತ್ತು ತಾಹೀರ್ 420 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ: 9 ವರ್ಷಗಳ ಬಳಿಕ ಐಸಿಸಿ ಟೂರ್ನಮೆಂಟ್​ನಲ್ಲಿ ನಾಕೌಟ್ ಪ್ರವೇಶಿಸಲು ಭಾರತ ವಿಫಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.