ETV Bharat / sports

ರಣಜಿಯಲ್ಲಿ ಘರ್ಜಿಸಿದ ಬಂಗಾಳ: 9 ಮಂದಿಯಿಂದ ಅರ್ಧಶತಕ! 129 ವರ್ಷಗಳ ಹಿಂದಿನ ದಾಖಲೆ ಉಡೀಸ್!​

ರಣಜಿ ಟ್ರೋಫಿಯಲ್ಲಿ ಬಂಗಾಳ ತಂಡ ವಿಶ್ವದಾಖಲೆ ನಿರ್ಮಿಸಿದೆ. ಬ್ಯಾಟ್​ ಮಾಡಿದ 9 ದಾಂಡಿಗರು ಅರ್ಧ ಶತಕ ಸಿಡಿಸಿದ್ದಾರೆ. 1893ರಲ್ಲಿ ಆಸ್ಟ್ರೇಲಿಯಾ​ ತಂಡದ ಆಟಗಾರರ ಹೆಸರಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

ranji-trophy-world-record
ರಣಜಿ ಟ್ರೋಫಿಯಲ್ಲಿ ಬಂಗಾಳ ತಂಡ ವಿಶ್ವದಾಖಲೆ
author img

By

Published : Jun 8, 2022, 10:14 PM IST

ಕೋಲ್ಕತ್ತಾ: ರಣಜಿ ಟ್ರೋಫಿಯಲ್ಲಿ ಬಂಗಾಳ ತಂಡದ ಆಟಗಾರರು ವಿಶ್ವದಾಖಲೆ ನಿರ್ಮಾಣ ಮಾಡಿದ್ದಾರೆ. ಜಾರ್ಖಂಡ್​ ವಿರುದ್ಧದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಎರಡು ಶತಕ ಸೇರಿದಂತೆ 9 ಮಂದಿ ಅರ್ಧಶತಕ ಸಿಡಿಸಿ 129 ವರ್ಷಗಳ ಹಿಂದಿನ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

1893ರಲ್ಲಿ ಆಸ್ಟ್ರೇಲಿಯಾದ​ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಆಕ್ಸ್‌ಫರ್ಡ್ ಮತ್ತು ಕೇಂಬ್ರಿಡ್ಜ್ ತಂಡಗಳ ಮಧ್ಯೆ ನಡೆದ ಪಂದ್ಯದಲ್ಲಿ ಆಕ್ಸಫರ್ಡ್​ ತಂಡದ 8 ಬ್ಯಾಟ್ಸ್​ಮನ್​​ಗಳು 50+ ರನ್​ ಬಾರಿಸಿದ್ದರು. ಒಟ್ಟಾರೆ 833 ರನ್​ ಬಾರಿಸಿದ್ದರು. ಇದೀಗ ಆ ದಾಖಲೆಯನ್ನು ಬಂಗಾಳ ತಂಡ ಮೀರಿಸಿದೆ.

ರಣಜಿಯ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಬಂಗಾಳ ತಂಡದ 9 ಬ್ಯಾಟರ್‌​ಗಳು 50ಕ್ಕೂ ಅಧಿಕ ರನ್​ ಬಾರಿಸಿದ್ದಾರೆ. ಇದರಲ್ಲಿ ಸುದೀಪ್​ ಘರಾಮಿ(186), ಮಜುಂದಾರ್​ (117) ಶತಕ ಸಿಡಿಸಿದ್ದಾರೆ. ತಂಡ 7 ವಿಕೆಟ್​ ನಷ್ಟಕ್ಕೆ 773 ರನ್​ಗಳ ಬೃಹತ್​ ಮೊತ್ತವನ್ನು ಪೇರಿಸಿದೆ.

ಅರುಣ್ ಲಾಲ್ ಪ್ರಶಂಸೆ: ಬಂಗಾಳ ತಂಡದ ಈ ಸಾಧನೆಗೆ ಬಂಗಾಳ ಕ್ರಿಕೆಟ್​ ಮುಖ್ಯಸ್ಥ ಅರುಣ್ ಲಾಲ್ ಪ್ರಶಂಸೆಯ ಸುರಿಮಳೆಗೈದಿದ್ದಾರೆ. 'ತಂಡ ದಾಖಲೆಗಾಗಿ ಆಡುತ್ತಿಲ್ಲ. ಅದು ಆಟದ ಮಧ್ಯೆ ಸಂಭವಿಸಿದೆ. ಬೌಲರ್​ ಆಗಿದ್ದರೂ 9 ಸ್ಥಾನದಲ್ಲಿ ಆಡಲು ಬಂದ ಆಕಾಶ್ ದೀಪ್ 18 ಎಸೆತಗಳಲ್ಲಿ 53 ರನ್​ ಸಿಡಿಸಿದ್ದಾರೆ. ಇದರಲ್ಲಿ 8 ಸಿಕ್ಸರ್​​ಗಳಿವೆ. ಇದು ತಂಡದ ಶಕ್ತಿಯನ್ನು ಇಮ್ಮಡಿಗೊಳಿಸಿದೆ. ಅಸಾಧಾರಣ ಕ್ರಿಕೆಟಿಗರ ಗುಂಪು ಇದಾಗಿದೆ. ಇವರ ಸಾಧನೆ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ದಕ್ಷಿಣ ಆಫ್ರಿಕಾ-ಭಾರತ ಕ್ರಿಕೆಟ್‌ ಸರಣಿಯಿಂದ ರಾಹುಲ್, ಕುಲದೀಪ್ ಔಟ್; ಪಂತ್​ಗೆ ನಾಯಕತ್ವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.