ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂಬರುವ ದೇಶೀಯ ಕ್ರಿಕೆಟ್ ಋತುವಿನ (2023-24) ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರಥಮ ದರ್ಜೆ ಸ್ಪರ್ಧೆಯಲ್ಲಿ ಅತಿ ಹೆಚ್ಚು ಗಮನ ಸೆಳೆಯುವ ರಣಜಿ ಟ್ರೋಫಿ ಜನವರಿ 5, 2024ರಂದು ಪ್ರಾರಂಭವಾಗುತ್ತದೆ. ಟೂರ್ನಿ 70 ದಿನಗಳವರೆಗೆ ನಡೆಯುತ್ತದೆ. ಪಂದ್ಯಾವಳಿಯು ಮಾರ್ಚ್ 14ರಂದು ಮುಕ್ತಾಯಗೊಳ್ಳಲಿದೆ. ಲೀಗ್ ಹಂತವು ಫೆಬ್ರವರಿ 19ರಂದು ಕೊನೆಗೊಳ್ಳುತ್ತದೆ. ನಾಕೌಟ್ ಪಂದ್ಯಗಳು ಫೆಬ್ರವರಿ 23ರಂದು ಪ್ರಾರಂಭವಾಗುತ್ತದೆ.
ಜೂನ್ 28ರಿಂದ ಜುಲೈ 16ರವರೆಗೆ ದುಲೀಪ್ ಟ್ರೋಫಿಯೊಂದಿಗೆ ಋತು ಪ್ರಾರಂಭವಾಗುತ್ತದೆ. ದಿಯೋಧರ್ ಟ್ರೋಫಿ ಜುಲೈ 24ರಿಂದ ಆಗಸ್ಟ್ 4ರವರೆಗೆ ನಡೆಯುತ್ತದೆ. ರಣಜಿ ಚಾಂಪಿಯನ್ಸ್ (ಸೌರಾಷ್ಟ್ರ) ಮತ್ತು ಶೇಷ ಭಾರತ ಒಳಗೊಂಡ ಸಾಂಪ್ರದಾಯಿಕ ಇರಾನಿ ಕಪ್ ಅಕ್ಟೋಬರ್ 1-5 ರಂದು ನಿಗದಿಯಾಗಿದೆ.
-
Irani Cup returns as BCCI announced the schedule of India’s domestic season 2022-23 which will commence in the first week of September 2022#IraniCup #BCCI #DomesticSeason #IndianCricketTeam #Cricket #CricTracker #DuleepTrophy pic.twitter.com/6nRHm34LLk
— CricTracker (@Cricketracker) August 8, 2022 " class="align-text-top noRightClick twitterSection" data="
">Irani Cup returns as BCCI announced the schedule of India’s domestic season 2022-23 which will commence in the first week of September 2022#IraniCup #BCCI #DomesticSeason #IndianCricketTeam #Cricket #CricTracker #DuleepTrophy pic.twitter.com/6nRHm34LLk
— CricTracker (@Cricketracker) August 8, 2022Irani Cup returns as BCCI announced the schedule of India’s domestic season 2022-23 which will commence in the first week of September 2022#IraniCup #BCCI #DomesticSeason #IndianCricketTeam #Cricket #CricTracker #DuleepTrophy pic.twitter.com/6nRHm34LLk
— CricTracker (@Cricketracker) August 8, 2022
ವೇಳಾಪಟ್ಟಿಯ ಪ್ರಕಾರ, ಸೈಯದ್ ಮುಷ್ತಾಕ್ ಅಲಿ ಟಿ20 ಸ್ಪರ್ಧೆ ಅಕ್ಟೋಬರ್ 16ರಿಂದ ನವೆಂಬರ್ 6 ರವರೆಗೆ ನಡೆಯಲಿದೆ. ವಿಜಯ್ ಹಜಾರೆ ಟ್ರೋಫಿ 50-ಓವರ್ ಚಾಂಪಿಯನ್‌ಶಿಪ್ ನವೆಂಬರ್ 23 ರಿಂದ ಡಿಸೆಂಬರ್ 15 ರವರೆಗೆ ನಿಗದಿಯಾಗಿದೆ. ಎರಡೂ ವೈಟ್- ಬಾಲ್ ಪಂದ್ಯಾವಳಿಗಳು ಎರಡು ವಿಭಾಗಗಳನ್ನು ಒಳಗೊಂಡಿರುತ್ತವೆ. ಪ್ರೀಮಿಯರ್ ವಿಭಾಗವು ಎಂಟು ತಂಡಗಳ ಮೂರು ಗುಂಪುಗಳನ್ನು ಒಳಗೊಂಡಿರುತ್ತದೆ. ಮತ್ತೊಂದು ವಿಭಾಗವು ಏಳು ತಂಡಗಳ ಎರಡು ಗುಂಪುಗಳನ್ನು ಒಳಗೊಂಡಿರುತ್ತದೆ. ಸ್ಪರ್ಧೆಯು ಎರಡು ಪ್ರಿ-ಕ್ವಾರ್ಟರ್‌ಫೈನಲ್‌ಗಳು, ನಾಲ್ಕು ಕ್ವಾರ್ಟರ್‌ಫೈನಲ್‌ಗಳು, ಎರಡು ಸೆಮಿಫೈನಲ್‌ಗಳ ಮೂಲಕ ಮುಂದುವರಿಯುತ್ತದೆ ಮತ್ತು ಫೈನಲ್‌ನಲ್ಲಿ ಕೊನೆಗೊಳ್ಳುತ್ತದೆ.
ಇದನ್ನೂ ಓದಿ: Virat Kohli: ಸಾವಿರ ಕೋಟಿಗೆ ಒಡೆಯ ವಿರಾಟ್.. ಕೊಹ್ಲಿ ಇನ್ಸ್ಟಾಗ್ರಾಮ್ ಪೋಸ್ಟ್ಗೆ ಸಿಗುವ ಹಣವೆಷ್ಟು ಗೊತ್ತಾ?
ರಣಜಿ ಟ್ರೋಫಿಯಲ್ಲಿ ಎಲೈಟ್ ಮತ್ತು ಪ್ಲೇಟ್ ಎಂಬ ಎರಡು ವಿಭಾಗಗಳು ಸಹ ಇರುತ್ತವೆ. ಎಲೈಟ್ ವಿಭಾಗದಲ್ಲಿ ಎಂಟು ತಂಡಗಳ ನಾಲ್ಕು ಗುಂಪುಗಳು ಮತ್ತು ಪ್ಲೇಟ್ ವಿಭಾಗದಲ್ಲಿ ಆರು ತಂಡಗಳ ಒಂದು ಗುಂಪು. ಎಲೈಟ್ ತಂಡವು 10 ಪಂದ್ಯಗಳನ್ನು ಆಡುವ ಅವಕಾಶ ಹೊಂದಿರುತ್ತದೆ. ಏಳು ಲೀಗ್ ಪಂದ್ಯಗಳು, ನಂತರ ಕ್ವಾರ್ಟರ್ ಫೈನಲ್, ಸೆಮಿಫೈನಲ್ ಮತ್ತು ಫೈನಲ್. ವೈಟ್-ಬಾಲ್ ಸ್ಪರ್ಧೆಗಳಂತೆ, ರಣಜಿ ಟ್ರೋಫಿ ನಾಕೌಟ್ ಹಂತದಲ್ಲಿ ಎಲೈಟ್ ಮತ್ತು ಪ್ಲೇಟ್ ತಂಡಗಳ ಏಕೀಕರಣ ಇರುವುದಿಲ್ಲ.
ಮಹಿಳಾ ಪಂದ್ಯಗಳು ಹೀಗಿವೆ..: ಮಹಿಳೆಯರ ಟಿ 20 ಟ್ರೋಫಿಯು ಈ ವರ್ಷದ ಅಕ್ಟೋಬರ್ 19 ರಂದು ಆರಂಭ ಆಗಲಿದೆ. ನವೆಂಬರ್ 9ರಂದು ಮುಕ್ತಾಯಗೊಳ್ಳಲಿದೆ. ಏಕದಿನ ಕ್ರಿಕೆಟ್ ಟ್ರೋಫಿಯು ಮುಂದಿನ ವರ್ಷ ಜನವರಿ 4ರಂದು ಪ್ರಾರಂಭವಾಗುತ್ತದೆ. ಅಂತಿಮ ಪಂದ್ಯ ಜನವರಿ 26ರಂದು ನಡೆಯಲಿದೆ.
ಇದನ್ನೂ ಓದಿ: ODI World Cup: ಏಕದಿನ ವಿಶ್ವಕಪ್ ಕ್ರಿಕೆಟ್- ಚೆನ್ನೈ, ಬೆಂಗಳೂರಿನಲ್ಲಿ ಪಂದ್ಯ ಆಡಲ್ಲ ಎಂದ ಪಾಕಿಸ್ತಾನ!