ಭುವನೇಶ್ವರ್: ಅಂಡರ್ 19 ವಿಶ್ವಕಪ್ನಲ್ಲಿ ತಮ್ಮ ಆಲ್ರೌಂಡರ್ ಆಟದ ಮೂಲಕ ಮನೆಮಾತಾಗಿದ್ದ ಕ್ರೀಡಾ ಕುಟುಂಬದಿಂದ ಬಂದಿರುವ ಯುವ ಆಲ್ರೌಂಡರ್ ರಣಜಿ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲಿ ತಮ್ಮ ಮೊದಲ ಎಸೆತದಲ್ಲೇ ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.
ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ 5 ವಿಕೆಟ್ ಮತ್ತು ಬೌಲಿಂಗ್ನಲ್ಲಿ 5 ವಿಕೆಟ್ ಪಡೆದು ಭಾರತ 5ನೇ ವಿಶ್ವಕಪ್ ಗೆಲ್ಲುವುದಕ್ಕೆ ಪ್ರಮುಖ ಪಾತ್ರವಹಿಸಿದ್ದರು. ಅವರು ಒಟ್ಟಾರೆ ಟೂರ್ನಿಯಲ್ಲಿ 9 ವಿಕೆಟ್ ಮತ್ತು 252 ರನ್ಗಳಿಸಿದ್ದಾರೆ. ತಂಡದ ನಾಯಕ ಧುಲ್ ಮತ್ತು ಉಪನಾಯಕ ರಶೀದ್ ಕೊರೊನಾದಿಂದ ಲೀಗ್ ಪಂದ್ಯಗಳನ್ನು ತಪ್ಪಿಸಿಕೊಂಡಾಗ ತಂಡದಲ್ಲಿ ಬೌಲಿಂಗ್ ಜೊತೆಗೆ ಬ್ಯಾಟಿಂಗ್ನಲ್ಲೂ ಉತ್ತಮ ಪ್ರದರ್ಶನ ತೋರಿ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸುವಂತೆ ಮಾಡಿದ್ದರು.
ಚಂಡೀಗಡ ತಂಡ ಪದಾರ್ಪಣೆ ಮಾಡಿದ ರಾಜ್ ತಮ್ಮ ಮೊದಲ ಎಸೆತದಲ್ಲೇ ಹೈದರಾಬಾದ್ ತಂಡದ ನಾಯಕ ತನ್ಮಯ್ ಅಗರ್ವಾಲ್(16) ವಿಕೆಟ್ ಪಡೆದರು. ತಮ್ಮ 4ನೇ ಓವರ್ನಲ್ಲಿ ಮತ್ತೊಬ್ಬ ಆರಂಭಿಕ ಬ್ಯಾಟರ್ ಅಕ್ಷತ್ ರೆಡ್ಡಿ ಅವರನ್ನು ಪೆವಿಲಿಯನ್ಗಟ್ಟುವಲ್ಲಿಯೂ ಯಶಸ್ವಿಯೂ ಆದರು.
ರಣಜಿ ಕ್ರಿಕೆಟ್ನಲ್ಲಿ ಕೊನೆಯ ಬಾರಿ 2020ರಲ್ಲಿ ರಾಜಸ್ಥಾನದ ಯಶ್ ಕೊತಾರಿ ಆಂದ್ರ ಪ್ರದೇಶದ ವಿರುದ್ದ ಪದಾರ್ಪಣೆ ಪಂದ್ಯದ ಮೊದಲ ಎಸೆತದಲ್ಲಿ ವಿಕೆಟ್ ಪಡೆದಿದ್ದರು. ಇದಕ್ಕೂ ಮುನ್ನ ರನಜಿ ಟ್ರೋಫಿಯಲ್ಲಿ ಉದಯ್ ಜೋಶಿ,(1965), ರವೀಂದ್ರ ಚಂಧಾ(1967), ರಾಜು ಮುಖರ್ಜಿ(1973), ಟಿಎ ಶೇಖರ್(1980) ತಮ್ಮ ರಣಜಿ ಪದಾರ್ಪಣೆ ಪಂದ್ಯದಲ್ಲಿ ವಿಕೆಟ್ ಪಡೆದಿದ್ದರು.
ಐಪಿಎಲ್ನಲ್ಲಿ 2 ಕೋಟಿ ರೂ ಒಪ್ಪಂದ: ಕಿರಿಯರ ವಿಶ್ವಕಪ್ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ತಮ್ಮ ಕರಾಮತ್ತು ಪ್ರದರ್ಶಿಸಿರುವ ರಾಜ್ ಬಾವಾ ಐಪಿಎಲ್ ಮೆಗಾ ಹರಾಜಿನಲ್ಲಿ 2 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ. ಪಂಜಾಬ್ ಕಿಂಗ್ಸ್ ತಂಡ 20 ಲಕ್ಷ ಮೂಲಬೆಲೆಯಿದ್ದ ಯುವ ಆಲ್ರೌಂಡರ್ ಸನ್ರೈಸರ್ಸ್ ಹೈದರಾಬಾದ್ ಜೊತೆಗೆ ಪೈಪೋಟಿ ನೀಡಿ ಖರೀದಿಸಿತು.
ಇದನ್ನೂ ಓದಿ:ರಣಜಿ ಟ್ರೋಫಿ ಪದಾರ್ಪಣೆ ಪಂದ್ಯದಲ್ಲಿ ಶತಕ ಸಿಡಿಸಿ ಅಬ್ಬರಿಸಿದ U19 ಸ್ಟಾರ್ ಯಶ್ ಧುಲ್