ETV Bharat / sports

ರಣಜಿ ಟ್ರೋಫಿ: ಪುದುಚೇರಿ ವಿರುದ್ಧ ಇನ್ನಿಂಗ್ಸ್ ಜಯದ ನಿರೀಕ್ಷೆಯಲ್ಲಿ ಕರ್ನಾಟಕ ತಂಡ

ಶುಕ್ರವಾರ 2 ವಿಕೆಟ್​ ಕಳೆದು 33 ರನ್‌ಗಳಿಸಿದ್ದ ಪುದುಚೆರಿ 3ನೇ ದಿನ ಕರ್ನಾಟಕದ ಬೌಲರ್​ಗಳ ಮಾರಕ ದಾಳಿಗೆ ತತ್ತರಿಸಿ 241 ರನ್​ಗಳಿಗೆ ಸರ್ವಪತನ ಕಂಡಿತು. ಫಾಲೋ ಆನ್​ಗೆ ಗುರಿಯಾಗಿ 2ನೇ ಇನ್ನಿಂಗ್ಸ್​ ಆರಂಭಿಸಿರುವ ಪುದುಚೆರಿ 62 ರನ್​ಗಳಿಸಿ 4 ವಿಕೆಟ್ ಕಳೆದುಕೊಂಡಿದೆ.

Karnataka on top against Pondicherry
ಕರ್ನಾಟಕ vs ಪುದುಚೆರಿ ರಣಜಿ ಟ್ರೋಫಿ​
author img

By

Published : Mar 5, 2022, 10:31 PM IST

Updated : Mar 6, 2022, 3:36 PM IST

ಚೆನ್ನೈ: ಆಲ್​ರೌಂಡ್​ ಪ್ರದರ್ಶನ ನೀಡಿ ಪುದುಚೇರಿ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿರುವ ಕರ್ನಾಟಕ ತಂಡ ಇನ್ನಿಂಗ್ಸ್​ ಜಯ ಸಾಧಿಸಲು ಅಂತಿಮ ದಿನ ಎದುರಾಳಿಯ 6 ವಿಕೆಟ್​ ಪಡೆಯಬೇಕಿದೆ. ಫಾಲೋ ಆನ್​ಗೆ ತುತ್ತಾಗಿರುವ ಪುದುಚೇರಿ 3ನೇ ದಿನದಂತ್ಯಕ್ಕೆ 62 ರನ್​​ಗಳಿಗೆ 4 ವಿಕೆಟ್​ ಕಳೆದುಕೊಂಡಿದ್ದು, ಇನ್ನೂ 150 ರನ್​ಗಳ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿದೆ.

ಶುಕ್ರವಾರ 2 ವಿಕೆಟ್​ ಕಳೆದು 33 ರನ್‌ಗಳಿಸಿದ್ದ ಪುದುಚೇರಿ 3ನೇ ದಿನ ಕರ್ನಾಟಕದ ಬೌಲರ್​ಗಳ ಮಾರಕ ದಾಳಿಗೆ ತತ್ತರಿಸಿ 241 ರನ್​ಗಳಿಗೆ ಸರ್ವಪತನ ಕಂಡಿತು. ನಾಯಕ ದಾಮೋದರನ್ ರೋಹಿತ್ 133 ಎಸೆತಗಳಲ್ಲಿ 15 ಬೌಂಡರಿ ಮತ್ತು 2 ಸಿಕ್ಸರ್​ ಸಹಿತ 100 ರನ್​ ಗಳಿಸಿ ಅಜೇಯರಾಗುಳಿದರು. ಇತರೆ ಬ್ಯಾಟರ್​ಗಳಿಂದ ಸೂಕ್ತ ಬೆಂಬಲ ಸಿಗದ ಕಾರಣ ಫಾಲೋ ಆನ್​ ತಪ್ಪಿಸಲು ಸಾಧ್ಯವಾಗಲಿಲ್ಲ. ಕರ್ನಾಟಕದಿಂದ ವರ್ಗಾವಣೆಗೊಂಡು ಪುದುಚೇರಿಯಲ್ಲಿ ಆಡುತ್ತಿರುವ ಪವನ್ ದೇಶಪಾಂಡೆ 83 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 29 ರನ್ ಬಾರಿಸಿ 6ನೇ ವಿಕೆಟ್​​ಗೆ ನಾಯಕ ರೋಹಿತ್ ಜೊತೆ 46 ರನ್​ ಸೇರಿಸಿದರು. ಆದೆ ಇವರನ್ನ ಕೆ. ಗೌತಮ್ ಪೆವಿಲಿಯನ್​ಗಟ್ಟುವಲ್ಲಿ ಯಶಸ್ವಿಯಾದರು.

ಕರ್ನಾಟಕ ಪರ ಕೃಷ್ಣಪ್ಪ ಗೌತಮ್‌ ಪುದುಚೇರಿ ತಂಡದ ಪ್ರಮುಖ 5 ವಿಕೆಟ್ ಕಬಳಿಸಿದರೆ, ವೇಗಿಗಳಾದ ಪ್ರಸಿಧ್ ಕೃಷ್ಣ ಮತ್ತು ವಿದ್ಯಾಧರ್ ಪಾಟಿಲ್ ತಲಾ 2 ವಿಕೆಟ್ ಪಡೆದ ಎದುರಾಳಿ ತಂಡ ಫಾಲೋ ಆನ್ ಬಲೆಗೆ ಬೀಳುವಂತೆ ಮಾಡಿದರು.

212 ರನ್‌ಗಳ ಬೃಹತ್ ಮುನ್ನಡೆ ಪಡೆದ ಮನೀಶ್ ಪಡೆ ಪುದುಚೇರಿ ಮೇಲೆ ಫಾಲೋ ಆನ್ ಹೇರಿತು. ಮತ್ತೆ ಎರಡನೇ ಇನಿಂಗ್ಸ್ ಆರಂಭಿಸಿದ ಪುದುಚೇರಿಗೆ ಕರ್ನಾಟಕ ಬೌಲರ್​ಗಳು ಆಘಾತ ನೀಡಿದರು.

ನೇಯನ್ ಶ್ಯಾಮ್ ಕಂಗಾಯನ್(16) ಮತ್ತು ಪರಾಸ್​ ಡೋಗ್ರಾ(14)ರನ್ನು ಪ್ರಸಿಧ್​ ಕೃಷ್ಣ ಪೆವಿಲಯನ್​ಗಟ್ಟಿದ್ದರೆ ವಿದ್ಯಾಧರ್ ಪಾಟೀಲ್ ಅರವಿಂದ್(40 ಮತ್ತು ಸ್ಪಿನ್ನರ್ ಶ್ರೇಯಸ್ ಗೋಪಾಲ್ ವಿಕೆಟ್ ಕೀಪರ್ ಎಸ್​. ಕಾರ್ತಿಕ್(8) ವಿಕೆಟ್ ಪಡೆದು ಕರ್ನಾಟಕ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟಿದ್ದಾರೆ.

ಪವನ್ ದೇಶಪಾಂಡೆ 3 ಹಾಗೂ ನಾಯಕ ದಾಮೋದರನ್ ರೋಹಿತ್ 10 ರನ್‌ ಬಾರಿಸಿ ಅಂತಿಮ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಪುದುಚೇರಿ ಇನಿಂಗ್ಸ್‌ ಸೋಲಿನಿಂದ ಪಾರಾಗಲೂ 150 ರನ್‌ಗಳನ್ನು ಬಾರಿಸಬೇಕಿದೆ.

ಇದನ್ನೂ ಓದಿ:ಮೊದಲ ಐಪಿಎಲ್ ವೇಳೆಯೇ ವಾರ್ನ್​ ನನಗೆ ​ದೊಡ್ಡ ವೇದಿಕೆ ಕಲ್ಪಿಸಿಕೊಟ್ಟಿದ್ದರು: ಜಡೇಜಾ

Last Updated : Mar 6, 2022, 3:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.