ETV Bharat / sports

ಜಮ್ಮು-ಕಾಶ್ಮೀರ್ ವಿರುದ್ಧ ಕರ್ನಾಟಕಕ್ಕೆ 117 ರನ್​ಗಳ ಭರ್ಜರಿ ಗೆಲುವು - ಪ್ರಸಿಧ್ ಕೃಷ್ಣ

ಚೆನ್ನೈನ ಐಐಟಿ ಕೆಮ್​ಪ್ಲಾಸ್ಟ್​ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡದ ಗೆಲುವಿಗೆ ಕರ್ನಾಟಕ 508 ರನ್‌ಗಳ ಗುರಿ ಬೃಹತ್​ ಗುರಿ ನೀಡಿತ್ತು. 3ನೇ ದಿನದಾಟದ ಮುಕ್ತಾಯಕ್ಕೆ ಜಮ್ಮು ಮತ್ತು ಕಾಶ್ಮೀರ 4 ವಿಕೆಟ್ ಕಳೆದುಕೊಂಡು 189 ರನ್ ಗಳಿಸಿತ್ತು. ಪಂದ್ಯದ ಅಂತಿಮ ದಿನವಾದ ಇಂದು ಕರ್ನಾಟಕ ಬೌಲರ್​ಗಳು ಎದುರಾಳಿ ತಂಡವನ್ನು 390 ರನ್​ಗಳಿಗೆ ಆಲೌಟ್ ಮಾಡಿ ಟೂರ್ನಿಯಲ್ಲಿ ಮೊದಲ ಜಯ ಸಾಧಿಸಿದರು..

Karnataka beat Jammu and Kashmir by 117 runs
ಕರುಣ್ ನಾಯರ್ ಶತಕ
author img

By

Published : Feb 27, 2022, 3:19 PM IST

ಚೆನ್ನೈ : ಬ್ಯಾಟಿಂಗ್ ಬೌಲಿಂಗ್​ ಎರಡರಲ್ಲೂ ಸಂಘಟಿತ ಪ್ರದರ್ಶನ ತೋರಿದ ಕರ್ನಾಟಕ ತಂಡ ಜಮ್ಮು ಮತ್ತು ಕಾಶ್ಮೀರದ ವಿರುದ್ಧ 117 ರನ್​ಗಳ ಜಯ ಸಾಧಿಸಿ ರಣಜಿ ಟೂರ್ನಿಯ ಸಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಚೆನ್ನೈನ ಐಐಟಿ ಕೆಮ್​ಪ್ಲಾಸ್ಟ್​ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡದ ಗೆಲುವಿಗೆ ಕರ್ನಾಟಕ 508 ರನ್‌ಗಳ ಬೃಹತ್​ ಗುರಿ ನೀಡಿತ್ತು. 3ನೇ ದಿನದಾಟದ ಮುಕ್ತಾಯಕ್ಕೆ ಜಮ್ಮು ಮತ್ತು ಕಾಶ್ಮೀರ 4 ವಿಕೆಟ್ ಕಳೆದುಕೊಂಡು 189 ರನ್ ಗಳಿಸಿತ್ತು.

ಪಂದ್ಯದ ಅಂತಿಮ ದಿನವಾದ ಇಂದು ಕರ್ನಾಟಕ ಬೌಲರ್​ಗಳು ಎದುರಾಳಿ ತಂಡವನ್ನು 390 ರನ್​ಗಳಿಗೆ ಆಲೌಟ್ ಮಾಡಿ ಟೂರ್ನಿಯಲ್ಲಿ ಮೊದಲ ಜಯ ಸಾಧಿಸಿದರು. ನಿನ್ನೆ ಅರ್ಧಶತಕ ಸಿಡಿಸಿ ಅಜೇಯರಾಗುಳಿದಿದ್ದ ಜಮ್ಮು-ಕಾಶ್ಮೀರ ನಾಯಕ ಇಯಾನ್ ಚೌಹಾಣ್ ಇಂದು ಶತಕ ಪೂರ್ಣಗೊಳಿಸಿದರು.

ಅವರು 188 ಎಸೆತಗಳಲ್ಲಿ 15 ಬೌಂಡರಿ ಮತ್ತು 2 ಸಿಕ್ಸರ್​ಗಳ ನೆರವಿನಿಂದ 110 ರನ್​ಗಳಿಸಿ ಔಟಾದರೆ, ಇವರಿಗೆ ಸಾಥ್ ನೀಡಿದ ಅಬ್ದುಲ್ ಸಮದ್​ 78 ಎಸೆತಗಳಲ್ಲಿ 70 ರನ್​ಗಳಿಸಿದರು. ಕೊನೆಯಲ್ಲಿ ಪರ್ವೇಜ್ ರಸೂಲ್​ 46, ಅಬೀದ್ ಮುಷ್ತಾಕ್ 43 ರನ್​ಗಳಿಸಿ ಕರ್ನಾಟಕ ಬೌಲರ್​ಗಳನ್ನು ಸ್ವಲ್ಪ ಸಮಯ ಕಾಡಿದರಾದರೂ ಸೋಲು ತಪ್ಪಿಸಲು ಆಗಲಿಲ್ಲ.

ಕರ್ನಾಟಕ ಪರ ಪ್ರಸಿಧ್ ಕೃಷ್ಣ 59 ಕ್ಕೆ 4, ಶ್ರೇಯಸ್ ಗೋಪಾಲ್ 155ಕ್ಕೆ 4, ಗೌತಮ್​ 122ಕ್ಕೆ 2 ವಿಕೆಟ್​ ಪಡೆದು ಗೆಲುವಿನ ರೂವಾರಿಯಾದರು. ಮನೀಶ್ ಪಾಂಡೆ ಪಡೆ ಮಾರ್ಚ್​ 3ರಿಂದ ಆರಂಭವಾಗಲಿರುವ ಕೊನೆಯ ಲೀಗ್ ಪಂದ್ಯದಲ್ಲಿ ಪಾಂಡಿಚೇರಿ ತಂಡವನ್ನು ಎದುರಿಸಲಿದೆ.

ಸಂಕ್ಷಿಪ್ತ ಸ್ಕೋರ್: ಕರ್ನಾಟಕ ಮೊದಲ ಇನ್ನಿಂಗ್ಸ್​: 302 (ಕರುಣ್ ನಾಯರ್​ 175, ಪರ್ವೇಜ್ ರಸೂಲ್ 60ಕ್ಕೆ 4)

ಜಮ್ಮು ಮತ್ತು ಕಾಶ್ಮೀರ; ಮೊದಲ ಇನ್ನಿಂಗ್ಸ: 93ಕ್ಕೆ ಆಲೌಟ್​(ಕಮ್ರನ್ ಇಕ್ಬಾಲ್ 35, ಪ್ರಸಿಧ್ ಕೃಷ್ಣ 35ಕ್ಕೆ 6)

ಕರ್ನಾಟಕ 2ನೇ ಇನ್ನಿಂಗ್ಸ್: 283ಕ್ಕೆ3 ಡಿಕ್ಲೇರ್​(ಕರುಣ್ ನಾಯರ್ ಅಜೇಯ 75, ಸಿದ್ಧಾರ್ಥ್​ 72, ಪಡಿಕ್ಕಲ್ 49, ಸಮರ್ಥ್​ 62, ಅಬೀದ್ ಮುಷ್ತಾಕ್ 65ಕ್ಕೆ3)

ಜಮ್ಮು ಮತ್ತು ಕಾಶ್ಮೀರ: 2ನೇ ಇನ್ನಿಂಗ್ಸ್ 390ಕ್ಕೆ ಆಲೌಟ್​:(ಇಯಾನ್ ಚೌಹಾಣ್​ 110, ಅಬ್ದುಲ್ ಸಮದ್​ 70, ಪ್ರಸಿಧ್​ 59 ಕ್ಕೆ 4, ಶ್ರೇಯಸ್ ಗೋಪಾಲ್ 155ಕ್ಕೆ 4)

ಫಲಿತಾಂಶ: ಕರ್ನಾಟಕಕ್ಕೆ 117 ರನ್​ಗಳ ಜಯ ಮತ್ತು 6 ಅಂಕ.

ಇದನ್ನೂ ಓದಿ:ಶ್ರೀಲಂಕಾ ವಿರುದ್ಧ ರೋಹಿತ್‌ ಪಡೆಗೆ 7 ವಿಕೆಟ್‌ಗಳ ಭರ್ಜರಿ ಗೆಲುವು; ಟಿ-20 ಸರಣಿ ಕೈವಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.