ETV Bharat / sports

ಗಂಗೂಲಿಗೆ ಬೌಲಿಂಗ್​​ ಮಾಡಿದ್ದ ರಣಜಿ​ ಆಟಗಾರನಿಂದ ಹೊಟ್ಟೆ ಪಾಡಿಗೆ 'ದಾಲ್​ ಪುರಿ' ಮಾರಾಟ

ರಣಜಿ ಕ್ರಿಕೆಟ್​ ಪ್ಲೇಯರ್ ಆಗಿ ಗುರುತಿಸಿಕೊಂಡಿದ್ದ ಆಟಗಾರನೋರ್ವ ಕುಟುಂಬ ನಿರ್ವಹಣೆಗಾಗಿ ಉದ್ಯೋಗದ ಅನ್ಯ ದಾರಿ ತೋಚದೆ ರಸ್ತೆ ಪಕ್ಕದಲ್ಲಿ ದಾಲ್​ ಪುರಿ ಮಾರಾಟ ಮಾಡ್ತಿದ್ದಾರೆ.

Ranji player Prakash Bhagat
Ranji player Prakash Bhagat
author img

By

Published : Jul 6, 2021, 9:55 PM IST

ಸಿಲ್ಚಾರ್​​(ಅಸ್ಸೋಂ): ರಣಜಿ ಕ್ರಿಕೆಟ್​ ಆಡಿದ್ರೆ ಸಾಕು ಕೆಲ ಕ್ರಿಕೆಟಿಗರ​ ಲೈಫ್‌​ ಸ್ಟೈಲ್​ ಸಂಪೂರ್ಣವಾಗಿ ಚೇಂಜ್​ ಆಗಿ ಬಿಡುತ್ತದೆ. ಅವರು ಐಷಾರಾಮಿಯಾಗಿ ಬದುಕಲು ಶುರು ಮಾಡ್ತಾರೆ. ಆದರೆ ಇಲ್ಲೊಬ್ಬ ಕ್ರಿಕೆಟರ್‌ನದ್ದು ದಯನೀಯ ಪರಿಸ್ಥಿತಿ. ಇವರು ಬದುಕಿನ ಬಂಡಿ ಸಾಗಿಸಲು ಬೇರೆ ಉದ್ಯೋಗ ಸಿಗದೆ, ರಸ್ತೆ ಪಕ್ಕದಲ್ಲಿ ದಾಲ್​ ಪುರಿ ಮಾರಾಟವನ್ನೇ ನೆಚ್ಚಿಕೊಂಡಿದ್ದಾರೆ. ಇದು ಲೆಫ್ಟ್​​ ಆರ್ಮ್​​ ಸ್ಪಿನ್ನರ್​​ ಪ್ರಕಾಶ್ ಭಗತ್ ಬದುಕಿನ ಕಥೆ.

ಮಾಜಿ ಕ್ಯಾಪ್ಟನ್​​ ಸೌರವ್​ ಗಂಗೂಲಿ ನೇತೃತ್ವದ ಟೀಂ ಇಂಡಿಯಾ 2003ರಲ್ಲಿ ನ್ಯೂಜಿಲ್ಯಾಂಡ್​ ಪ್ರವಾಸಕ್ಕೆ ಸಜ್ಜುಗೊಳ್ಳುತ್ತಿದ್ದ ಸಂದರ್ಭದಲ್ಲಿ ಬೆಂಗಳೂರಿನ ಕ್ರಿಕೆಟ್​ ಅಕಾಡೆಮಿಯಲ್ಲಿ ಲೆಫ್ಟ್​​ ಆರ್ಮ್​​ ಸ್ಪಿನ್ನರ್​​ ಪ್ರಕಾಶ್ ಭಗತ್​​ ಬೌಲಿಂಗ್​ ಮಾಡಿ ಗಮನ ಸೆಳೆದಿದ್ದರು.

Ganguly
ಮಾಜಿ ಆಟಗಾರ ಸೌರವ್​ ಗಂಗೂಲಿ

ಅಸ್ಸೋಂ ರಣಜಿ ಕ್ರಿಕೆಟ್​ ಆಟಗಾರನಾಗಿದ್ದ 34 ವರ್ಷದ ಪ್ರಕಾಶ್​ ಭಗತ್​ ಸದ್ಯ ಅಸ್ಸೋಂನ ಸಿಲ್ಚಾರ್​ ಎಂಬಲ್ಲಿ ದಾಲ್ ಪುರಿ ಅಂಗಡಿ ನಡೆಸುತ್ತಿದ್ದಾರೆ. 2011ರಲ್ಲಿ ಇವರ ತಂದೆ ತೀರಿಕೊಳ್ಳುತ್ತಿದ್ದಂತೆ ಸಹೋದರ ಕೂಡ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಹೀಗಾಗಿ ವಿಧಿ ಇಲ್ಲದೇ ಕ್ರಿಕೆಟ್​ನಿಂದ ದೂರವೇ ಉಳಿದು ಕುಟುಂಬ ನಿರ್ವಹಣೆ ಜವಾಬ್ದಾರಿ ಹೊತ್ತುಕೊಂಡಿದ್ದರು.ಇವರಿಗೆ ಇಬ್ಬರು ಮಕ್ಕಳಿದ್ದಾರೆ.

ಇದನ್ನೂ ಓದಿರಿ: ಟೋಕಿಯೋ ಒಲಿಂಪಿಕ್ಸ್​​ನಿಂದ ಹೊರಬಿದ್ದ 'ಧಿಂಗ್ ಎಕ್ಸ್‌ಪ್ರೆಸ್‌' ಹಿಮಾದಾಸ್​​

ರಾಜ್ಯ ಸರ್ಕಾರ ಅಥವಾ ಅಸ್ಸೋಂ ಕ್ರಿಕೆಟ್​​ ಸಂಸ್ಥೆಯಿಂದ ತಮಗೆ ಯಾವುದೇ ರೀತಿಯ ಸೌಲಭ್ಯ ಸಿಕ್ಕಿಲ್ಲ ಎನ್ನುವ ಪ್ರಕಾಶ್​, ಆರ್ಥಿಕ ಸಹಾಯ ಸಿಕ್ಕರೆ ಮರಳಿ ಕ್ರಿಕೆಟ್​ನಲ್ಲಿ ಭಾಗಿಯಾಗುವುದಾಗಿ ಹೇಳುತ್ತಾರೆ.

ರಾಜ್ಯ, ರಾಷ್ಟ್ರೀಯ ತಂಡದಲ್ಲೂ ಪಾಲ್ಗೊಂಡಿದ್ದ ಭಗತ್​ ಅಂಡರ್​​-16, ಅಂಡರ್​​-19 ಹಾಗೂ ಅಂಡರ್​​-23 ಕ್ರಿಕೆಟ್ ತಂಡದಲ್ಲೂ ಸ್ಥಾನ ಪಡೆದುಕೊಂಡಿದ್ದರು. ಇದಾದ ಬಳಿಕ 2009-10 ಹಾಗೂ 2010-11ರ ರಣಜಿ ಕ್ರಿಕೆಟ್​​ನಲ್ಲಿ ಅಸ್ಸೋಂ ತಂಡದಲ್ಲಿದ್ದು ಜಮ್ಮು ಕಾಶ್ಮೀರ ಹಾಗೂ ರೈಲ್ವೇಸ್​ ತಂಡಗಳ ವಿರುದ್ಧ ಮೈದಾನಕ್ಕಿಳಿದಿದ್ದರು. ಇದರ ಜತೆಗೆ ಸೈಯದ್ ಮುಷ್ತಾಕ್ ಅಲಿ ಟೂರ್ನಿಗೂ ಆಯ್ಕೆಯಾಗಿದ್ದರು ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.