ETV Bharat / sports

ರಮೀಜ್​ ರಾಜಾರ ಮಹತ್ವಾಕಾಂಕ್ಷೆಯ ಚತುಷ್ಕೋನ ಸರಣಿ ಪ್ರಸ್ತಾವನೆ ತಿರಸ್ಕರಿಸಿದ ಐಸಿಸಿ - ಐಸಿಸಿ ನೂತನ ಅಧ್ಯಕ್ಷ

ಬಿಸಿಸಿಐ ಈ ಟೂರ್ನಿಯಲ್ಲಿ ಪಾಲ್ಗೊಳ್ಳದಿರಲು ತೀರ್ಮಾನಿಸಿತ್ತು. ಏಕೆಂದರೆ, ಭಾರತದ ಎಫ್​ಟಿಪಿ ಈಗಾಗಲೇ ನಿಗದಿಯಾಗಿದೆ. ಜೊತೆಗೆ ಪಾಕಿಸ್ತಾನ ತಂಡದೊಂದಿದೆ ಐಸಿಸಿ ಟೂರ್ನಮೆಂಟ್​ ಹೊರತುಪಡಿಸಿ ಮತ್ಯಾವುದೇ ಸರಣಿಯಲ್ಲಿ ಆಡುವ ಪ್ರಶ್ನೆಯಿಲ್ಲ. ಐಸಿಸಿ ಕೂಡ ಈ ಟೂರ್ನಿಗೆ ಅವಕಾಶ ನೀಡುವುದಿಲ್ಲ ಎಂದು ಭಾವಿಸುತ್ತೇವೆ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದರು..

Ramiz Raja's proposal for a 4-nation tournament has been rejected by ICC
ರಮೀಜ್ ರಾಜಾ ಚತುಷ್ಕೋನ ಸರಣಿ
author img

By

Published : Apr 10, 2022, 7:09 PM IST

Updated : Apr 10, 2022, 7:50 PM IST

ಮುಂಬೈ: ಭಾರತ, ಪಾಕಿಸ್ತಾನ ಸೇರಿದಂತೆ 4 ರಾಷ್ಟ್ರಗಳ ಚತುಷ್ಕೋನ ಸರಣಿಯನ್ನು ಆಯೋಜಿಸುವ ಪಿಸಿಬಿ ಅಧ್ಯಕ್ಷ ರಮೀಜ್​ ರಾಜಾ ಅವರ ಪ್ರಸ್ತಾವನೆಯನ್ನು ಐಸಿಸಿ ಸಭೆಯಲ್ಲಿ ಅವಿರೋಧವಾಗಿ ತಿರಸ್ಕರಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಟೂರ್ನಮೆಂಟ್​ನಿಂದ ವಾರ್ಷಿಕವಾಗಿ 750 ಮಿಲಿಯನ್ ಯುಎಸ್​ ಡಾಲರ್​ ಆದಾಯ ಬರಲಿದೆ ಎಂದು ರಾಜಾ ತಮ್ಮ ಪ್ರಸ್ತಾವನೆಯಲ್ಲಿ ವಿವರಿಸಿದ್ದರು.

ಭಾರತ, ಪಾಕಿಸ್ತಾನ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳೊಂದಿಗೆ ಟೂರ್ನಮೆಂಟ್ ಆಯೋಜಿಸಲು ಈ ತೀರ್ಮಾನ ಕೈಗೊಂಡಿದ್ದರು. ಆದರೆ, ಐಸಿಸಿ ಮಾತ್ರ ಪಾಕಿಸ್ತಾನ ಮಂಡಳಿ ಅಧ್ಯಕ್ಷರ ಪ್ರಸ್ತಾವನೆಯನ್ನು ಐಸಿಸಿ ವಜಾಮಾಡಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಬಿಸಿಸಿಐ ಈ ಟೂರ್ನಿಯಲ್ಲಿ ಪಾಲ್ಗೊಳ್ಳದಿರಲು ತೀರ್ಮಾನಿಸಿತ್ತು.

ಏಕೆಂದರೆ, ಭಾರತದ ಎಫ್​ಟಿಪಿ ಈಗಾಗಲೇ ನಿಗದಿಯಾಗಿದೆ. ಜೊತೆಗೆ ಪಾಕಿಸ್ತಾನ ತಂಡದೊಂದಿದೆ ಐಸಿಸಿ ಟೂರ್ನಮೆಂಟ್​ ಹೊರತುಪಡಿಸಿ ಮತ್ಯಾವುದೇ ಸರಣಿಯಲ್ಲಿ ಆಡುವ ಪ್ರಶ್ನೆಯಿಲ್ಲ. ಐಸಿಸಿ ಕೂಡ ಈ ಟೂರ್ನಿಗೆ ಅವಕಾಶ ನೀಡುವುದಿಲ್ಲ ಎಂದು ಭಾವಿಸುತ್ತೇವೆ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದರು.

ಐಸಿಸಿ ಮಂಡಳಿ ಸಭೆಯಲ್ಲಿನ ಪ್ರಮುಖ ಅಂಶಗಳು

  • ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮುಂದಿನ ಎರಡು ವರ್ಷಗಳ ಅವಧಿಗೆ ಐಸಿಸಿಯ ಭಾಗವಾಗಲಿದ್ದಾರೆ.
  • ದ್ವಿಪಕ್ಷೀಯ ಟೆಸ್ಟ್​ ಸರಣಿಗಳಿಗೆ ಮೈದಾನದ ಅಂಪೈರ್​ ಆಗಿ ತವರಿನ ಒಬ್ಬ ಮತ್ತು ತಟಸ್ಥ ಸ್ಥಳದ ಮತ್ತೊಬ್ಬ ಅಂಪೈರ್​ ಕಾರ್ಯನಿರ್ವಹಿಸಲಿದ್ದಾರೆ. ಕೋವಿಡ್​ ಕಾರಣ ತವರಿನ ಅಂಪೈರ್​ಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದರು, ಇದು ಕೆಲವು ಸರಣಿಗಳಲ್ಲಿ ಟೀಕೆಗೆ ಗುರಿಯಾಗಿತ್ತು.
  • ಐಸಿಸಿ ಅಧ್ಯಕ್ಷ ಗ್ರೇಗ್​ ಬಾರ್ಕ್ಲೇ ಅವರ 2 ವರ್ಷಗಳ ಅವಧಿ ಅಂತ್ಯವಾಗಿದ್ದು, ಹೊಸ ಅಧ್ಯಕ್ಷ ಸ್ಥಾನಕ್ಕೆ ನವೆಂಬರ್​ನಲ್ಲಿ ನಾಮಿನೇಷನ್​ ಪ್ರಕ್ರಿಯೆ ಆರಂಭವಾಗಲಿದೆ.

ಇದನ್ನೂ ಓದಿ:'ರಾವತ್​ ಭವಿಷ್ಯದ ಸ್ಟಾರ್'​: ಆರ್​ಸಿಬಿ ನಾಯಕ ಡುಪ್ಲೆಸಿಸ್​​ ಗುಣಗಾನ

Last Updated : Apr 10, 2022, 7:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.