ಮುಂಬೈ: ಭಾರತ ತಂಡದ ಮಾಜಿ ಸ್ಪಿನ್ ಬೌಲರ್ ರಮೇಶ್ ಪವಾರ್ ಭಾರತ ಮಹಿಳಾ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಅವರು 2018ರ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಮಿಥಾಲಿ ರಾಜ್ರನ್ನು ಆಡಿಸದೇ ವಿವಾದಕ್ಕೀಡಾದ ನಂತರ ಕೋಚ್ ಸ್ಥಾನದಿಂದ ಕೆಳಕ್ಕಿಳಿದಿದ್ದರು. ಇದೀಗ ಮತ್ತೆ ಕೋಚ್ ಸ್ಥಾನಕ್ಕೆ ಜಾಹೀರಾತು ನೀಡಿದ್ದು, ಅರ್ಜಿ ಸಲ್ಲಿಸಿದ 35 ಅಭ್ಯರ್ಥಿಗಳಲ್ಲಿ ರಮೇಶ್ ಪವಾರ್ ಅವರನ್ನು ಮತ್ತೆ ಆಯ್ಕೆ ಮಾಡಲಾಗಿದೆ.
ಸುಲಕ್ಷಣ ನಾಯಕ್, ಮದನ್ ಲಾಲ್ ಮತ್ತು ರುದ್ರಪ್ರತಾಪ್ ಸಿಂಗ್ ಒಳಗೊಂಡ ಕ್ರಿಕೆಟ್ ಸಲಹಾ ಸಮಿತಿ ಸಂದರ್ಶನ ಮಾಡಿದ್ದು, ರಮೇಶ್ ಪವಾರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.
ಮಾಜಿ ಬೌಲರ್ ಪವಾರ್ ಭಾರತ ತಂಡದ ಪರ 31 ಏಕದಿನ ಪಂದ್ಯ ಹಾಗೂ 2 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಅವರು ಬಾರತ ಎ ತಂಡದ ಪರ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ ಎನ್ಸಿಎನಲ್ಲಿ ಲೆವೆಲ್ 2 ಕೋಚಿಂಗ್ ಕೋರ್ಸ್ ಮುಗಿಸಿದ್ದಾರೆ. 2018ರಲ್ಲಿ ಜುಲೈನಿಂದ ನವೆಂಬರ್ವರೆಗೆ ಭಾರತ ಮಹಿಳಾ ತಂಡದ ಕೋಚ್ ಆಗಿ 14 ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
-
NEWS: Ramesh Powar appointed Head Coach of Indian Women’s Cricket team
— BCCI Women (@BCCIWomen) May 13, 2021 " class="align-text-top noRightClick twitterSection" data="
Details 👉 https://t.co/GByGFicBsX pic.twitter.com/wJsTZrFrWF
">NEWS: Ramesh Powar appointed Head Coach of Indian Women’s Cricket team
— BCCI Women (@BCCIWomen) May 13, 2021
Details 👉 https://t.co/GByGFicBsX pic.twitter.com/wJsTZrFrWFNEWS: Ramesh Powar appointed Head Coach of Indian Women’s Cricket team
— BCCI Women (@BCCIWomen) May 13, 2021
Details 👉 https://t.co/GByGFicBsX pic.twitter.com/wJsTZrFrWF
ಇತ್ತೀಚೆಗೆ ವಿಜಯ್ ಹಜಾರೆ ಟ್ರೋಫಿ ಗೆದ್ದ ಮುಂಬೈ ತಂಡದ ಕೋಚ್ ಆಗಿದ್ದರು. ಅಲ್ಲದೇ ರಾಹುಲ್ ದ್ರಾವಿಡ್ ಮುಖ್ಯಸ್ಥರಾಗಿರುವ ಎನ್ಸಿಎನಲ್ಲೂ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ.
2018ರ ಟಿ-20 ವಿಶ್ವಕಪ್ ವೇಳೆ ಸೆಮಿಫೈನಲ್ನಲ್ಲಿ ಭಾರತ ತಂಡದ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ಅವರು ಪವಾರ್ ಸೆಮಿಫೈನಲ್ನಲ್ಲಿ ಬೆಂಚ್ ಕಾಯಿಸಿದ್ದು, ದೊಡ್ಡ ವಿವಾದವೆಬ್ಬಿಸಿತ್ತು. ಇದರಿಂದ ಕೋಪಗೊಂಡಿದ್ದ ಮಿಥಾಲಿ ರಾಜ್ ಬಿಸಿಸಿಐಗೆ ದೂರು ನೀಡಿದ್ದರು.
ಇದಲ್ಲದೇ ಪವಾರ್ ಮಿಥಾಲಿ ತಂಡಕ್ಕೋಸ್ಕರ ಆಡುವ ಬದಲು, ವೈಯಕ್ತಿಕ ದಾಖಲೆಗಳಿಗಾಗಿ ಆಡುತ್ತಾರೆ ಎಂದು ಹೇಳಿಕೆ ನೀಡಿದ್ದರು. ಕೊನೆಗೆ ಪವಾರ್ ಅವರನ್ನು ಮಹಿಳಾ ತಂಡದ ಕೋಚ್ ಸ್ಥಾನದಿಂದ ಬಿಸಿಸಿಐ ಕೆಳಗಿಳಿಸಿತ್ತು.
ಇದನ್ನು ಓದಿ:ಮಂದಾನ, ಕೌರ್ ಜೊತೆಗೆ ಬಿಗ್ಬ್ಯಾಶ್ನಲ್ಲಿ ಆಡಲಿದ್ದಾರೆ ಶೆಫಾಲಿ ವರ್ಮಾ