ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ನ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಕೈಜೋಡಿಸಿದ್ದು, ಬರೋಬ್ಬರಿ 7.5 ಕೋಟಿ ರೂ.(1 ಮಿಲಿಯನ್ ಡಾಲರ್) ದೇಣಿಗೆ ನೀಡಿದೆ.
-
Rajasthan Royals announce a contribution of over $1 milion from their owners, players and management to help with immediate support to those impacted by COVID-19. This will be implemented through @RoyalRajasthanF and @britishasiantst.
— Rajasthan Royals (@rajasthanroyals) April 29, 2021 " class="align-text-top noRightClick twitterSection" data="
Complete details 👇#RoyalsFamily
">Rajasthan Royals announce a contribution of over $1 milion from their owners, players and management to help with immediate support to those impacted by COVID-19. This will be implemented through @RoyalRajasthanF and @britishasiantst.
— Rajasthan Royals (@rajasthanroyals) April 29, 2021
Complete details 👇#RoyalsFamilyRajasthan Royals announce a contribution of over $1 milion from their owners, players and management to help with immediate support to those impacted by COVID-19. This will be implemented through @RoyalRajasthanF and @britishasiantst.
— Rajasthan Royals (@rajasthanroyals) April 29, 2021
Complete details 👇#RoyalsFamily
ಈ ಕುರಿತು ಟ್ವೀಟ್ ಮಾಡಿರುವ ರಾಜಸ್ಥಾನ ರಾಯಲ್ಸ್, ಕೋವಿಡ್ ಸೋಂಕಿನಿಂದ ಬಳಲುತ್ತಿರುವವರ ನೆರವಿಗಾಗಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ತನ್ನ ಮಾಲೀಕರು, ಆಟಗಾರರು ಹಾಗೂ ಮ್ಯಾನೇಜ್ಮೆಂಟ್ನಿಂದ 1 ಮಿಲಿಯನ್ ಡಾಲರ್ ಬಿಡುಗಡೆ ಮಾಡುತ್ತಿದ್ದೇವೆ ಎಂದಿದೆ. ಈ ಹಣವನ್ನ ರಾಜಸ್ಥಾನ ರಾಯಲ್ಸ್ ಫೌಂಡೇಷನ್ ಹಾಗೂ ಬ್ರಿಟಿಷ್ ಏಷ್ಯನ್ ಟ್ರಸ್ಟ್ ಮುಖಾಂತರ ರಿಲೀಸ್ ಮಾಡುವುದಾಗಿ ಅದು ತಿಳಿಸಿದೆ.
ಭಾರತದಲ್ಲಿ ಮಹಾಮಾರಿ ಕೊರೊನಾ ವೈರಸ್ ಎರಡನೇ ಅಲೆ ಜೋರಾಗಿದ್ದು, ಪ್ರತಿದಿನ ಲಕ್ಷಾಂತರ ಸೋಂಕಿತ ಪ್ರಕರಣ ಪತ್ತೆಯಾಗುತ್ತಿವೆ ಹಾಗೂ ಸಾವಿರಾರು ಜನರು ಸಾವನ್ನಪ್ಪುತ್ತಿದ್ದಾರೆ. ಈ ಮಧ್ಯೆ ಅನೇಕ ದೇಶಗಳು ಭಾರತದ ನೆರವಿಗೆ ಬಂದಿವೆ. ಕಳೆದ ಕೆಲ ದಿನಗಳ ಹಿಂದೆ ಕೋವಿಡ್ ಹೋರಾಟಕ್ಕೆ ಬ್ರೆಟ್ ಲೀ 41 ಲಕ್ಷ ರೂ. ಹಾಗೂ ಕಮ್ಮಿನ್ಸ್ 37 ಲಕ್ಷ ರೂ. ದೇಣಿಗೆ ನೀಡಿದ್ದರು.
ಇದನ್ನೂ ಓದಿ: ಬಡಾ ದಿಲ್‌ವಾಲಾ ಬ್ರೆಟ್ ಲೀ.. ಭಾರತ ನನ್ನ 2ನೇ ಮನೆ ಎಂದು ಕೊರೊನಾ ಹೋರಾಟಕ್ಕೆ ₹41 ಲಕ್ಷ ನೆರವು..