ETV Bharat / sports

16ನೇ ಆವೃತ್ತಿ ಐಪಿಎಲ್​ನಿಂದ ಪ್ರಸಿದ್ಧ ಕೃಷ್ಣ ಔಟ್​: ರಾಜಸ್ಥಾನ ರಾಯಲ್ಸ್​ಗೆ ಪ್ರಮುಖ ಬೌಲರ್​ ನಷ್ಟ

ಗಾಯದ ಸಮಸ್ಯೆಯಿಂದ 16ನೇ ಆವೃತ್ತಿಯ ಐಪಿಎಲ್​ನಿಂದ ಪ್ರಸಿದ್ಧ ಕೃಷ್ಣ ಹೊರಕ್ಕೆ - ಮಾರ್ಚ್​ 31 ರಿಂದ 16 ನೇ ಆವೃತ್ತಿಯ ಐಪಿಎಲ್​ ಆರಂಭ - 2008ರಲ್ಲಿ ಐಪಿಎಲ್​ ಕಪ್​ ಗೆದ್ದಿದ್ದ ರಾಜಸ್ಥಾನ ರಾಯಲ್ಸ್​

Rajasthan Royals
ರಾಜಸ್ಥಾನ ರಾಯಲ್ಸ್​ಗೆ ಪ್ರಮುಖ ಬೌಲರ್​ ನಷ್ಟ
author img

By

Published : Feb 18, 2023, 10:19 AM IST

ನವದೆಹಲಿ: 16 ನೇ ಆವೃತ್ತಿಯ ಐಪಿಎಲ್​ಗೆ ದಿನಗಣನೆ ಆರಂಭವಾಗಿದೆ. ನಿನ್ನೆ ಐಪಿಎಲ್​ನ ವೇಳಾ ಪಟ್ಟಿಯನ್ನು ಬಿಡುಗಡೆಯಾಗಿದ್ದು, ಮಾರ್ಚ್​ 31 ರಿಂದ ಪಂದ್ಯಗಳು ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು 15ನೇ ಆವೃತ್ತಿಯ ವಿಜೇತ ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗುತ್ತಿದೆ. ಐಪಿಎಲ್​ ವೇಳಾ ಪಟ್ಟಿ ಘೋಷಣೆ ಆದ ಬೆನ್ನಲ್ಲೆ ರಾಜಸ್ಥಾನ ರಾಯಲ್ಸ್​ಗೆ ಹಿನ್ನೆಡೆಯಾಗಿದ್ದು, ಕರ್ನಾಟಕದ ಬೌಲರ್​ ಪ್ರಸಿದ್ಧ ಕೃಷ್ಣ ಅವರು 16ನೇ ಸೀಸನ್​ನಿಂದ ಹೊರಗುಳಿದಿದ್ದಾರೆ.

  • Be back soon, Skiddy. 💗

    — Rajasthan Royals (@rajasthanroyals) February 17, 2023 " class="align-text-top noRightClick twitterSection" data=" ">

ರಾಜಸ್ಥಾನ ರಾಯಲ್ಸ್​ನ ಟ್ರಂಪ್‌ ಕಾರ್ಡ್‌ ಬೌಲರ್ ಪ್ರಸಿದ್ಧ ಕೃಷ್ಣ 2023ರ ಐಪಿಎಲ್​ ಸೀಸನ್​ನಿಂದ ಹೊರಗುಳಿದಿದ್ದಾರೆ. ಅವರು ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಇರುವುದರಿಂದ ಹೊರಗುಳಿದಿದ್ದಾರೆ ಎನ್ನಲಾಗಿದೆ. ಕೃಷ್ಣ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಪುನರ್ವಸತಿ ಮಾಡುತ್ತಿದ್ದಾರೆ.

ಕರ್ನಾಟಕದ 27 ವರ್ಷದ ಪ್ರಸಿದ್ಧ ಕೃಷ್ಣ ಅವರನ್ನು ರಾಜಸ್ಥಾನ್ ರಾಯಲ್ಸ್ 10 ಕೋಟಿ ಕೊಟ್ಟು ಖರೀದಿಸಿದೆ. ಕಳೆದ ಆವೃತ್ತಿಯಲ್ಲಿ 17 ಪಂದ್ಯಗಳನ್ನು ಆಡಿ 19 ವಿಕೆಟ್ ಪಡೆದಿದ್ದಾರೆ. ಆಗಸ್ಟ್‌ನಲ್ಲಿ ಜಿಂಬಾಬ್ವೆ ಪ್ರವಾಸದ ನಂತರ ಪ್ರಸಿದ್ಧ ಕೃಷ್ಣ ಅವರು ಕ್ರಿಕೆಟ್ ಆಡಿಲ್ಲ. ಈ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಆಡುವುದು ಕೂಡ ಅವರಿಗೆ ಕಷ್ಟ ಎಂದು ಹೇಳಲಾಗುತ್ತಿದೆ. ಅಲ್ಲದೇ ರಣಜಿ ಟ್ರೋಫಿ ಪಂದ್ಯದಲ್ಲೂ ಕೃಷ್ಣ ಆಡಿಲ್ಲ.

ರಾಜಸ್ಥಾನ ರಾಯಲ್ಸ್​ ತಂಡದ ನಾಯಕನಾಗಿ ಸಂಜು ಸ್ಯಾಮ್ಸನ್ ಮುನ್ನಡೆಸುತ್ತಿದ್ದಾರೆ. ರಾಯಲ್ಸ್​ 2008 ರಲ್ಲಿ ಮೊದಲ ಬಾರಿಗೆ ಐಪಿಎಲ್​ ಪ್ರಶಸ್ತಿಯನ್ನು ಗೆದ್ದಿತ್ತು. ರಾಜಸ್ಥಾನ ರಾಯಲ್ಸ್​ಗೆ ಜೈಪುರದ ಸ್ವೈ ಮಾನ್ ಸಿಂಗ್ ಸ್ಟೇಡಿಯಂ ತವರು ಮೈದಾನ ಆಗಿದೆ. ತಂಡದಲ್ಲಿ ಶೇನ್ ವ್ಯಾಟ್ಸನ್, ಅಜಿಂಕ್ಯ ರಹಾನೆ ಮತ್ತು ಜೋಸ್ ಬಟ್ಲರ್ ಮುಂತಾದ ಬಲಿಷ್ಠ ಆಟಗಾರರಿದ್ದಾರೆ. ಪ್ರಸಿದ್ಧ ಕೃಷ್ಣ ಹೊರಗುಳಿದಿರುವುದರಿಂದ ಆರ್​ಆರ್​ ವಿದೇಶಿ ಬೌಲರ್​ಗಳಾದ ಟ್ರೆಂಟ್ ಬೌಲ್ಟ್ ಮತ್ತು ಜೇಸನ್ ಹೋಲ್ಡರ್ ಮೇಲೆ ಹೆಚ್ಚು ಒತ್ತುಕೊಡಬೇಕಾಗಿದೆ.

ಇದನ್ನೂ ಓದಿ: ರಹಸ್ಯ ಕಾರ್ಯಾಚರಣೆ: ಬಿಸಿಸಿಐ ಮುಖ್ಯ ಆಯ್ಕೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ ಚೇತನ್​ ಶರ್ಮ

ಏಪ್ರಿಲ್ 2ಕ್ಕೆ ಸನ್​ ರೈಸರ್ಸ್​ ಹೈದರಾಬಾದ್ ಅವರ ತವರು ನೆಲದಲ್ಲಿ ರಾಜಸ್ಥಾನ ರಾಯಲ್ಸ್​ಗೆ ಈ ಬಾರಿ ಮೊದಲ ಪಂದ್ಯ ಇದೆ. ಬೌಲಿಂಗ್​ನಲ್ಲಿ ಬಲಿಷ್ಠ ತಂಡವಾಗಿರುವ ಹೈದರಾಬಾದ್​ನ್ನು ಅವರ ತವರು ನೆಲದಲ್ಲೇ ಎದುರಿಸ ಬೇಕಿದೆ. ​

ರಾಜಸ್ಥಾನ ತಂಡ: ಮುರುಗನ್​ ಅಶ್ವಿನ್, ರವಿಚಂದ್ರನ್​ ಅಶ್ವಿನ್, ಕೆಎಂ ಆಸಿಫ್, ಅಬ್ದುಲ್ ಬಸಿತ್, ಟ್ರೆಂಟ್ ಬೌಲ್ಟ್, ಜೋಸ್ ಬಟ್ಲರ್, ಕೆಸಿ ಕಾರಿಯಪ್ಪ, ಯುಜ್ವೇಂದ್ರ ಚಾಹಲ್, ಡೊನೊವನ್ ಫೆರೇರಾ, ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್, ಪ್ರಸಿದ್ಧ ಕೃಷ್ಣ, ಓಬೇದ್ ಮೆಕಾಯ್, ದೆವ್‌ದುಲ್ ಪಾಡಿ ಪರಾಗ್, ಕುನಾಲ್ ಸಿಂಗ್ ರಾಥೋರ್, ಜೋ ರೂಟ್, ನವದೀಪ್ ಸೈನಿ, ಸಂಜು ಸ್ಯಾಮ್ಸನ್, ಕುಲದೀಪ್ ಸೇನ್, ಆಕಾಶ್ ವಶಿಷ್ಟ್, ಕುಲದೀಪ್ ಯಾದವ್, ಆಡಮ್ ಝಂಪಾ.

ಇದನ್ನೂ ಓದಿ: IPL 2023: ಮೊದಲ ಪಂದ್ಯದಲ್ಲಿ ಸಿಎಸ್​ಕೆ-ಗುಜರಾತ್ ಫೈಟ್; ಆರ್​ಸಿಬಿಗೆ ಯಾರು ಎದುರಾಳಿ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.