ETV Bharat / sports

ಧೋನಿ ಸಾಧನೆಯನ್ನು ಸರಿಗಟ್ಟಿದ ತೆವಾಟಿಯಾ.. ಯಾವ ದಾಖಲೆ ಅದು? - ರಾಹುಲ್ ತೆವಾಟಿಯಾ 2 ಸಿಕ್ಸಸ್​

ಪಂಜಾಬ್ ನೀಡಿದ್ದ 190 ರನ್​ಗಳ ಗುರಿಯನ್ನು ಟೈಟನ್ಸ್​ 4 ವಿಕೆಟ್ ಕಳೆದುಕೊಂಡು ತಲುಪಿತು. ಗೆಲುವಿಗೆ ಕೊನೆಯ 2 ಎಸೆತಗಳಲ್ಲಿ 12 ರನ್​ಗಳ ಅಗತ್ಯವಿತ್ತು. ಒಟಿಯನ್ ಸ್ಮಿತ್ ಎಸೆದ ಆ ಓವರ್​ನ ಕೊನೆಯ 2 ಎಸೆತಗಳನ್ನೂ ರಾಹುಲ್ ತೆವಾಟಿಯಾ ಸಿಕ್ಸರ್​ಗಟ್ಟುವ ಮೂಲಕ ಹೊಸ ಫ್ರಾಂಚೈಸಿಗೆ ರೋಚಕ ಜಯ ತಂದುಕೊಟ್ಟರು..

Rahul Tewatia replicates MS Dhoni's Rare Feat
ರಾಹುಲ್ ತೆವಾಟಿಯಾ, ಎಂಎಸ್ ಧೋನಿ
author img

By

Published : Apr 9, 2022, 3:33 PM IST

ಮುಂಬೈ : ಶುಕ್ರವಾರ ನಡೆದ ಪಂಜಾಬ್​ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್​ ಕೊನೆಯ ಎಸೆತದಲ್ಲಿ ರೋಚಕ ಜಯ ಸಾಧಿಸಿ ಟೂರ್ನಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸಿದೆ. ಪಂಜಾಬ್ ನೀಡಿದ್ದ 190 ರನ್​ಗಳ ಗುರಿಯನ್ನು ಟೈಟನ್ಸ್​ 4 ವಿಕೆಟ್ ಕಳೆದುಕೊಂಡು ತಲುಪಿತು.

ಗೆಲುವಿಗೆ ಕೊನೆಯ 2 ಎಸೆತಗಳಲ್ಲಿ 12 ರನ್​ಗಳ ಅಗತ್ಯವಿತ್ತು. ಒಟಿಯನ್ ಸ್ಮಿತ್ ಎಸೆದ ಆ ಓವರ್​ನ ಕೊನೆಯ 2 ಎಸೆತಗಳನ್ನೂ ರಾಹುಲ್ ತೆವಾಟಿಯಾ ಸಿಕ್ಸರ್​ಗಟ್ಟುವ ಮೂಲಕ ಹೊಸ ಫ್ರಾಂಚೈಸಿಗೆ ರೋಚಕ ಜಯ ತಂದುಕೊಟ್ಟರು. ಈ ಮೂಲಕ ಅವರು ಐಪಿಎಲ್ ಇತಿಹಾಸದಲ್ಲಿ ಕೊನೆಯ ಎರಡು ಎಸೆತಗಳಲ್ಲಿ 12 ರನ್​ ಅಗತ್ಯವಿದ್ದಾಗ 2 ಸಿಕ್ಸರ್​ ಸಿಡಿಸಿ ಪಂದ್ಯವನ್ನು ಗೆಲ್ಲಿಸಿದ 2ನೇ ಬ್ಯಾಟರ್​ ಎನಿಸಿಕೊಂಡರು.

ಈ ಹಿಂದೆ ಎಂಎಸ್​ ಧೋನಿ ಪುಣೆ ಸೂಪರ್ ಜೈಂಟ್ಸ್ ಪರ ಆಡುವಾಗ ಅಕ್ಷರ್​ ಪಟೇಲ್ ಬೌಲಿಂಗ್​ನಲ್ಲಿ ಕೊನೆಯ 2 ಎಸೆತಗಳಲ್ಲಿ 2 ಸಿಕ್ಸರ್ ಸಿಡಿಸಿ ಗೆಲುವು ತಂದುಕೊಟ್ಟಿದ್ದರು. ವಿಶೇಷವೆಂದರೆ ಈ ಇಬ್ಬರು 2 ಸಿಕ್ಸರ್​ ಸಿಡಿಸಿದ್ದು, ಪಂಜಾಬ್ ವಿರುದ್ಧವೇ. ಅಂದು ಧೋನಿ ಅಕ್ಷರ್ ಪಟೇಲ್ ಓವರ್​ನಲ್ಲಿ ಗೆಲುವಿಗೆ ಅಗತ್ಯವಿದ್ದ 23 ರನ್​ಗಳನ್ನು ಸಿಡಿಸಿದ್ದರು. ಇದೀಗ ರಾಹುಲ್ ತೆವಾಟಿಯಾ ಮತ್ತು ಮಿಲ್ಲರ್ ಗೆಲುವಿಗೆ ಅಗತ್ಯವಿದ್ದ 19 ರನ್​ಗಳನ್ನು ಯಶಸ್ವಿಯಾಗಿ ಸಿಡಿಸಿ ಗೆಲುವು ತಂದುಕೊಟ್ಟರು.

ಇದನ್ನೂ ಓದಿ:ಕೊನೆಯ 2 ಎಸೆತದಲ್ಲಿ 2 ಸಿಕ್ಸ್​ ಬಾರಿಸಿ ಪಂಜಾಬ್​ ವಿರುದ್ಧ ರೋಚಕ ಜಯ ಸಾಧಿಸಿದ ಗುಜರಾತ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.