ದುಬೈ : ಕಿವೀಸ್ ವಿರುದ್ಧ ಉತ್ತಮ ಪ್ರದರ್ಶನ ತೋರಿದ ಭಾರತ ತಂಡದ ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್ ಟಿ20 ಶ್ರೇಯಾಂಕದಲ್ಲಿ ಒಂದು ಸ್ಥಾನ ಮೇಲೇರಿ 5ನೇ ಸ್ಥಾನ ಪಡೆದಿದ್ದಾರೆ. ಸೂರ್ಯಕುಮಾರ್ ಯಾದವ್ 24 ಸ್ಥಾನ ಏರಿಕೆ ಕಂಡಿದ್ದು, 59ನೇ ಶ್ರೇಯಾಂಕದಲ್ಲಿ ಕಾಣಿಸಿದ್ದಾರೆ.
ಬುಧವಾರ ಐಸಿಸಿ ಈ ನೂತನ ರ‍್ಯಾಂಕಿಂಗ್ ಬಿಡುಗಡೆ ಮಾಡಿದೆ. ಬಾಂಗ್ಲಾದೇಶದ ವಿರುದ್ಧ ಟಿ20 ಸರಣಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಮೊಹಮ್ಮದ್ ರಿಜ್ವಾನ್ 5ರಿಂದ 4ನೇ ಸ್ಥಾನಕ್ಕೇರಿದ್ದಾರೆ.
-
↗️ Rizwan, Rahul move up one spot
— ICC (@ICC) November 24, 2021 " class="align-text-top noRightClick twitterSection" data="
↗️ Guptill back in top 10
Some notable changes in this week's @MRFWorldwide ICC Men's T20I Player Rankings 👀
Full list: https://t.co/uR3Jx2jJ5V pic.twitter.com/f5JDnWLrFa
">↗️ Rizwan, Rahul move up one spot
— ICC (@ICC) November 24, 2021
↗️ Guptill back in top 10
Some notable changes in this week's @MRFWorldwide ICC Men's T20I Player Rankings 👀
Full list: https://t.co/uR3Jx2jJ5V pic.twitter.com/f5JDnWLrFa↗️ Rizwan, Rahul move up one spot
— ICC (@ICC) November 24, 2021
↗️ Guptill back in top 10
Some notable changes in this week's @MRFWorldwide ICC Men's T20I Player Rankings 👀
Full list: https://t.co/uR3Jx2jJ5V pic.twitter.com/f5JDnWLrFa
ನ್ಯೂಜಿಲ್ಯಾಂಡ್ ವಿರುದ್ಧ ರಾಹುಲ್ 2 ಪಂದ್ಯಗಳಿಂದ 80 ರನ್ಗಳಿಸಿದರೆ, ರಿಜ್ವಾನ್ ಬಾಂಗ್ಲಾದೇಶದ ವಿರುದ್ಧ 90 ರನ್ಗಳಿಸಿದ್ದರು. ಇನ್ನು, ಕಿವೀಸ್ ಸರಣಿಯಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ(11) ಟಾಪ್ 10ರಿಂದ ಹೊರ ಬಿದ್ದಿದ್ದಾರೆ.
ಕಿವೀಸ್ ವಿರುದ್ಧ 159 ರನ್ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಭಾರತ ತಂಡದ ನೂತನ ನಾಯಕ ರೋಹಿತ್ ಶರ್ಮಾ 2 ಸ್ಥಾನ ಮೇಲೇರಿ 13ರಲ್ಲಿದ್ದಾರೆ. ಭಾರತದ ವಿರುದ್ಧ 0-3ರಲ್ಲಿ ಸರಣಿ ಸೋತರೂ ಸರಣಿಯಲ್ಲಿ 152 ರನ್ ಸಿಡಿಸಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ಮಾರ್ಟಿನ್ ಗಪ್ಟಿಲ್ 10ನೇ ಸ್ಥಾನ ಪಡೆದುಕೊಂಡಿದ್ದಾರೆ.
ಬೌಲಿಂಗ್ ಶ್ರೇಯಾಂಕದಲ್ಲಿ ಮಿಚೆಲ್ ಸ್ಯಾಂಟ್ನರ್ 10 ಸ್ಥಾನ ಏರಿಕೆ ಕಂಡು 13ಕ್ಕೆ, ಭುವನೇಶ್ವರ್ ಕುಮಾರ್ 5 ಸ್ಥಾನ ಏರಿಕೆ ಕಂಡು 19ನೇ ಸ್ಥಾನ ಮತ್ತು ದೀಪಕ್ ಚಹಾರ್ 19 ಸ್ಥಾನ ಮೇಲೇರಿ 44ನೇ ಸ್ಥಾನ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:'ಕೊಡುಗೆ ಅಂದ್ರೆ, ಪ್ರತಿ ಪಂದ್ಯದಲ್ಲೂ ಶತಕ ಸಿಡಿಸುವುದಲ್ಲ': ಕಳಪೆ ಫಾರ್ಮ್ ಬಗ್ಗೆ ರಹಾನೆ ಹೇಳಿದ್ದಿಷ್ಟು..