ETV Bharat / sports

ದ್ರಾವಿಡ್​ ನನ್ನ ಹೀರೋ, ಅವರ ಕೋಚಿಂಗ್​ನಲ್ಲಿ ಆಡಿದ್ದೇ ನನ್ನ ಪಾಲಿನ ಅದೃಷ್ಟ: ಅಭಿಮನ್ಯು​

ವಿಶ್ವಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಮತ್ತು ಇಂಗ್ಲೆಂಡ್​ ವಿರುದ್ಧದ 5 ಪಂದ್ಯಗಳ ಸರಣಿಗಾಗಿ ಘೋಷಿಸಿದ ಮೀಸಲು ತಂಡದಲ್ಲಿ ಪಶ್ವಿಮ ಬಂಗಾಳದ ಅಭಿಮನ್ಯು ಈಶ್ವರನ್​ ಆಯ್ಕೆಯಾಗಿದ್ದಾರೆ. ಇವರು 2016-2019ರ ವರೆಗೆ ರಾಹುಲ್ ದ್ರಾವಿಡ್​ ಗರಡಿಯಲ್ಲಿ ಭಾರತ ಎ ತಂಡದ ಪರ ಆಡಿದ್ದರು. ಇದೀಗ ಟೆಸ್ಟ್​ ತಂಡದಲ್ಲಿ ಅವಕಾಶ ಪಡೆದಿರುವುದಕ್ಕೆ ತಮ್ಮ ಕನಸನ್ನು ನನಸಾಗಿಸಿಕೊಳ್ಳುವ ತವಕದಲ್ಲಿದ್ದಾರೆ.

ಅಭಿಮನ್ಯು ಈಶ್ವರನ್​
ಅಭಿಮನ್ಯು ಈಶ್ವರನ್​
author img

By

Published : May 15, 2021, 10:26 PM IST

ಮುಂಬೈ: ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡದ ಮೀಸಲು ಆಟಗಾರನಾಗಿ ಆಯ್ಕೆಯಾಗಿರುವ ಅಭಿಮನ್ಯು ಈಶ್ವರನ್​ ಕನ್ನಡಿಗ ಹಾಗೂ ಮಾಜಿ ಟೀಮ್ ಇಂಡಿಯಾ ನಾಯಕ ರಾಹುಲ್​ ದ್ರಾವಿಡ್​ ತಮಗೆ ಮಾದರಿ ಮತ್ತು ಸ್ಪೂರ್ತಿ ಎಂದು ಹೇಳಿದ್ದಾರೆ.

ವಿಶ್ವಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಮತ್ತು ಇಂಗ್ಲೆಂಡ್​ ವಿರುದ್ಧದ 5 ಪಂದ್ಯಗಳ ಸರಣಿಗಾಗಿ ಘೋಷಿಸಿದ ಮೀಸಲು ತಂಡದಲ್ಲಿ ಪಶ್ವಿಮ ಬಂಗಾಳದ ಅಭಿಮನ್ಯು ಈಶ್ವರನ್​ ಆಯ್ಕೆಯಾಗಿದ್ದಾರೆ. ಇವರು 2016-2019ರ ವರೆಗೆ ರಾಹುಲ್ ದ್ರಾವಿಡ್​ ಗರಡಿಯಲ್ಲಿ ಭಾರತ ಎ ತಂಡದ ಪರ ಆಡಿದ್ದರು. ಇದೀಗ ಟೆಸ್ಟ್​ ತಂಡದಲ್ಲಿ ಅವಕಾಶ ಪಡೆದಿದ್ದು, ದೇಶಕ್ಕಾಗಿ ಆಡುವ ತಮ್ಮ ಕನಸನ್ನು ನನಸಾಗಿಸಿಕೊಳ್ಳುವ ತವಕದಲ್ಲಿದ್ದಾರೆ.

ರಾಹುಲ್​ ದ್ರಾವಿಡ್​ ನನಗೆ ಮಾದರಿ, ನಾನು ಬಾಲ್ಯದಲ್ಲಿದ್ದಾಗ ಅವರ ಬ್ಯಾಟಿಂಗ್ ನೋಡುವುದಕ್ಕಾಗಿ ಕಾಯುತ್ತಾ ಕುಳಿತಿರುತ್ತಿದ್ದೆ. ನಾನು ಭಾರತ ಎ ತಂಡಕ್ಕೆ ಆಯ್ಕೆಯಾದಂತಹ ಸಂದರ್ಭದಲ್ಲಿ ಅವರು ಕೋಚ್​ ಆಗಿದ್ದು, ನನ್ನ ಅದೃಷ್ಟ. ನಾನು ಅವರಿಂದ ಸಾಕಷ್ಟನ್ನು ಕಲಿತಿದ್ದೇನೆ. ನಾನು ಕ್ರಿಕೆಟಿಗನಾಗಿ ಸಾಧನೆ ಮಾಡಲು ರಾಹುಲ್ ಸರ್​ ನನಗೆ ಪ್ರೇರಣೆಯಾಗಿದ್ದಾರೆ ಎಂದು ಸ್ಪೋರ್ಟ್​ ಯಾರಿ ಯೂಟ್ಯೂಬ್​ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಇನ್ನು ಆರಂಭಿಕ ಬ್ಯಾಟ್ಸ್​ಮನ್ ರೋಹಿತ್ ಶರ್ಮಾ ಮತ್ತು ನಾಯಕ ಕೊಹ್ಲಿ ಜೊತೆಗೆ ಅಭ್ಯಾಸ ಮಾಡುವುದಕ್ಕೆ ಉತ್ಸಾಹದಿಂದಿದ್ದೇನೆ ಎಂದಿರುವ 25 ವರ್ಷದ ಯುವ ಆಟಗಾರ ಅವರಿಂದ ಕಲಿಯುವುದಕ್ಕೆ ಕಾಯುತ್ತಿದ್ದೇನೆ ಎಂದಿದ್ದಾರೆ.

ಅಭಿಮನ್ಯು ಈಶ್ವರನ್ 64 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು, 4,401 ರನ್​ಗಳಿಸಿದ್ದಾರೆ. 62 ಏಕದಿನ ಪಂದ್ಯಗಳಲ್ಲಿ 2875 ಮತ್ತು 20 ಟಿ20 ಪಂದ್ಯಗಳಿಂದ 471 ರನ್​​ಗಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.