ETV Bharat / sports

ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್ ಆಗಿ​ ಕನ್ನಡಿಗ ರಾಹುಲ್ ದ್ರಾವಿಡ್​ ನೇಮಕ

author img

By

Published : Nov 3, 2021, 9:32 PM IST

Updated : Nov 4, 2021, 2:57 PM IST

ಟಿ20 ವಿಶ್ವಕಪ್​ ಬಳಿಕ ರವಿಶಾಸ್ತ್ರಿ ಅವರ ಕೋಚ್​ ಅಧಿಕಾರವಧಿ ಮುಕ್ತಾಯಗೊಳ್ಳಲಿದ್ದು, ಎನ್​ಸಿಎ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ದ್ರಾವಿಡ್​ ಭಾರತ ತಂಡಕ್ಕೆ ಮಾರ್ಗದರ್ಶಕರಾಗಿ ಮತ್ತೊಂದು ಇನ್ನಿಂಗ್ಸ್ ಆರಂಭಿಸಲಿದ್ದಾರೆ.

Rahul Dravid has been appointed the Head Coach of Team India
ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್ ಆಗಿ​ ಕನ್ನಡಿಗ ರಾಹುಲ್ ದ್ರಾವಿಡ್​ ನೇಮಕ

ಮುಂಬೈ: ಭಾರತ ತಂಡದ ಮಾಜಿ ನಾಯಕ ಹಾಗೂ ಕನ್ನಡಿಗ ರಾಹುಲ್ ದ್ರಾವಿಡ್​ ಭಾರತ ಪುರುಷರ ಕ್ರಿಕೆಟ್‌ ತಂಡದ ಮುಖ್ಯ ಕೋಚ್​ ಆಗಿ ಅಧಿಕೃತವಾಗಿ ನೇಮಕಗೊಂಡಿದ್ದಾರೆ. ವಿಶ್ವಕಪ್​ ನಂತರ ತವರಿನಲ್ಲಿ ನಡೆಯಲಿರುವ ನ್ಯೂಜಿಲ್ಯಾಂಡ್​ ವಿರುದ್ಧದ ಸರಣಿಯಿಂದ ತಂಡದೊಂದಿಗೆ ಕಾರ್ಯ ನಿರ್ವಹಿಸಲಿದ್ದಾರೆ.

ಟಿ20 ವಿಶ್ವಕಪ್​ ಬಳಿಕ ರವಿಶಾಸ್ತ್ರಿ ಅವರ ಕೋಚ್​ ಅಧಿಕಾರವಧಿ ಮುಕ್ತಾಯಗೊಳ್ಳಲಿದ್ದು, ಎನ್​ಸಿಎ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ದ್ರಾವಿಡ್​ ಭಾರತ ತಂಡಕ್ಕೆ ಮಾರ್ಗದರ್ಶಕರಾಗಿ ಮತ್ತೊಂದು ಇನ್ನಿಂಗ್ಸ್ ಆರಂಭಿಸಲಿದ್ದಾರೆ.

ಈ ಹಿಂದೆ ದ್ರಾವಿಡ್​ ಭಾರತ ಅಂಡರ್​ 19 ಮತ್ತು ಭಾರತ ಎ ತಂಡಗಳಿಗೆ ಮುಖ್ಯ ಕೋಚ್​ ಆಗಿ ಕಾರ್ಯನಿರ್ವಹಿಸಿದ್ದರು. ಇವರ ಮಾರ್ಗದರ್ಶನದಲ್ಲಿ ಭಾರತ ಕಿರಿಯರ ತಂಡ 2016ರಲ್ಲಿ ಫೈನಲ್​ ಪ್ರವೇಶಿಸಿದರೆ, 2018ರಲ್ಲಿ ಚಾಂಪಿಯನ್​ ಆಗಿ ಹೊರಹೊಮ್ಮಿತ್ತು.

ಭಾರತೀಯ ಕ್ರಿಕೆಟ್ ತಂಡದ ಹೊಸ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವುದು ಡೊಡ್ಡ ಗೌರವ. ನಾನು ಈ ಜವಾಬ್ದಾರಿಯನ್ನು ನಿರ್ವಹಿಸಲು ನಿಜವಾಗಿಯೂ ಎದುರು ನೋಡುತ್ತಿದ್ದೇನೆ. ಶಾಸ್ತ್ರಿ ಅವರ ಮಾರ್ಗದರ್ಶನದಡಿಯಲ್ಲಿ ತಂಡ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಇದನ್ನು ನಾನು ಮುಂದಕ್ಕೆ ಕೊಂಡೊಯ್ಯಲು ತಂಡದೊಂದಿಗೆ ಉತ್ತಮವಾಗಿ ಕೆಲಸ ಮಾಡಲು ಬಯಸುತ್ತೇನೆ.

NCA, U19 ಮತ್ತು ಇಂಡಿಯಾ ಎ ಹುಡುಗರೊಂದಿಗೆ ನಿಕಟವಾಗಿ ಕೆಲಸ ಮಾಡಿರುವುದರಿಂದ, ಅವರೆಲ್ಲರೂ ಪ್ರತಿದಿನ ತಮ್ಮನ್ನು ತಾವೂ ಸುಧಾರಿಸಿಕೊಳ್ಳಲು ಉತ್ಸಾಹ ಮತ್ತು ಬಯಕೆಯನ್ನು ಹೊಂದಿದ್ದಾರೆಂದು ನನಗೆ ತಿಳಿದಿದೆ. ಮುಂದಿನ ಎರಡು ವರ್ಷಗಳಲ್ಲಿ ಕೆಲವು ಹೆಸರಾಂತ ಬಹುತಂಡಗಳ ಸ್ಪರ್ಧೆಗಳಿವೆ. ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಕೆಲಸ ಮಾಡಿ ನಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ದ್ರಾವಿಡ್​ ಬಿಸಿಸಿಐ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತದ ಹಿರಿಯ ಪುರುಷರ ತಂಡದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರನ್ನು ಬಿಸಿಸಿಐ ಸ್ವಾಗತಿಸುತ್ತದೆ. ರಾಹುಲ್ ಅವರು ಅತ್ಯುತ್ತಮ ವೃತ್ತಿಜೀವನವನ್ನು ಹೊಂದಿದ್ದಾರೆ ಮತ್ತು ಕ್ರಿಕೆಟ್​ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಅವರು ಈಗಾಗಲೇ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (NCA) ಮುಖ್ಯಸ್ಥರಾಗಿ ಭಾರತೀಯ ಕ್ರಿಕೆಟ್‌ಗೆ ಸೇವೆ ಸಲ್ಲಿಸಿದ್ದಾರೆ. ಎನ್‌ಸಿಎಯಲ್ಲಿ ರಾಹುಲ್ ಅವರ ಪ್ರಯತ್ನವು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವಂತಹ ಹಲವಾರು ಯುವ ಕ್ರಿಕೆಟ್ ಪ್ರತಿಭೆಗಳನ್ನು ಬೆಳೆಸಿದೆ. ಇದೀಗ ಮಾರ್ಗದರ್ಶಕರಾಗಿ ಭಾರತೀಯ ಕ್ರಿಕೆಟ್ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಾರೆಂಬ ಭರವಸೆ ನನಗಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಹೇಳಿದ್ದಾರೆ.

ದ್ರಾವಿಡ್​, ಭಾರತದ ಪರ 164 ಟೆಸ್ಟ್​ ಪಂದ್ಯಗಳನ್ನಾಡಿದ್ದು, 13288 ಮತ್ತು 344 ಏಕದಿನ ಪಂದ್ಯಗಳಿಂದ 10889 ರನ್​ಗಳಿಸಿದ್ದಾರೆ. ಕ್ರಮವಾಗಿ 36 ಮತ್ತು 12 ಶತಕ ಸಿಡಿಸಿದ್ದಾರೆ.

Last Updated : Nov 4, 2021, 2:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.