ಬಾರ್ಬಡೋಸ್ (ವೆಸ್ಟ್ ಇಂಡೀಸ್): ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ಗೆ ಇನ್ನು ಕೆಲವೇ ತಿಂಗಳುಗಳಷ್ಟೇ ಬಾಕಿ. ಈ ನಡುವೆ ಟೀಂ ಇಂಡಿಯಾ ಬೆರಳೆಣಿಕೆಯ ಏಕದಿನ ಪಂದ್ಯಗಳನ್ನು ಮಾತ್ರ ಆಡಲಿದೆ. ಭಾರತದ ಬಲಿಷ್ಠ ಆಡುವ 11ರ ಬಳಗ ಇನ್ನೂ ನಿರ್ಧಾರವಾಗಿಲ್ಲ. ಆರಂಭಿಕರಿಂದ ಹಿಡಿದು ಬೌಲರ್ಗಳವರೆಗೆ ಪ್ರಯೋಗಗಳು ನಡೆಯುತ್ತಲೇ ಇವೆ. ಕೋಚ್ ರಾಹುಲ್ ದ್ರಾವಿಡ್, ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿ ಯುವ ಪಡೆಯನ್ನು ಮೈದಾನಕ್ಕಿಳಿಸಿದ್ದರು. ಆದರೆ ಈ ಪ್ರಯೋಗ ಯಶಸ್ಸು ಕಾಣಲಿಲ್ಲ.
ನಾಯಕ ರೋಹಿತ್ ಶರ್ಮಾ ಮತ್ತು ಅನುಭವಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿ ಉಪನಾಯಕ ಹಾರ್ದಿಕ್ ಪಾಂಡ್ಯರನ್ನು ಕ್ಯಾಪ್ಟನ್ ಮಾಡಲಾಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ಗಿಳಿದ ಭಾರತ ಕಿಶನ್ ಮತ್ತು ಗಿಲ್ರಿಂದ ಉತ್ತಮ ಆರಂಭ ಕಂಡಿತು. ಆದರೆ, ನಂತರ ಸತತ ಬ್ಯಾಟಿಂಗ್ ವೈಫಲ್ಯದಿಂದ 40.5 ಓವರ್ನಲ್ಲಿ 181 ರನ್ಗಳಿಗೆ ಸರ್ವಪತನ ಕಂಡಿತು. ಈ ಗುರಿಯನ್ನು ವೆಸ್ಟ್ ಇಂಡೀಸ್ ತಂಡ ಅತ್ಯಂತ ನಿರಾಯಾಸವಾಗಿ ಬೆನ್ನಟ್ಟಿತು. 6 ವಿಕೆಟ್ಗಳನ್ನು ಉಳಿಸಿಕೊಂಡೇ ತಂಡ ಜಯಭೇರಿ ಭಾರಿಸಿದ್ದಲ್ಲದೇ ಸರಣಿ ಸಮಬಲ ಸಾಧಿಸಿತು.
-
Head Coach Rahul Dravid explains #TeamIndia's selection in the second #WIvIND ODI 🔽 pic.twitter.com/65rZUtuIaV
— BCCI (@BCCI) July 29, 2023 " class="align-text-top noRightClick twitterSection" data="
">Head Coach Rahul Dravid explains #TeamIndia's selection in the second #WIvIND ODI 🔽 pic.twitter.com/65rZUtuIaV
— BCCI (@BCCI) July 29, 2023Head Coach Rahul Dravid explains #TeamIndia's selection in the second #WIvIND ODI 🔽 pic.twitter.com/65rZUtuIaV
— BCCI (@BCCI) July 29, 2023
ಪಂದ್ಯದ ಸೋಲಿನ ನಂತರ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡುವ ಮ್ಯಾನೇಜ್‌ಮೆಂಟ್ ನಿರ್ಧಾರ ತೀವ್ರ ಟೀಕೆಗೆ ಗುರಿಯಾಗಿದೆ. ಆದರೆ ಟೀಂ ಇಂಡಿಯಾದಲ್ಲಿ ಮಾಡಿರುವ ಈ ಪ್ರಯೋಗವನ್ನು ರಾಹುಲ್ ದ್ರಾವಿಡ್ ಸಮರ್ಥಿಸಿಕೊಂಡಿದ್ದಾರೆ. ಏಷ್ಯಾ ಕಪ್ ಮತ್ತು ವಿಶ್ವಕಪ್ಗೆ ಮುನ್ನ ತಂಡದಲ್ಲಿ ಪ್ರಯೋಗ ಮಾಡಲು ಈ ಸರಣಿ ಒಂದೇ ಅವಕಾಶ ಎಂದಿದ್ದಾರೆ.
"ನಾವು ಪ್ರತಿ ಪಂದ್ಯ ಮತ್ತು ಪ್ರತಿ ಸರಣಿಯಲ್ಲಿ ದೊಡ್ಡ ಪಂದ್ಯಗಳನ್ನು ನೋಡಲು ಇಚ್ಛಿಸುತ್ತೇವೆ. ಆದರೆ ಅದು ಎಲ್ಲ ಸಮಯದಲ್ಲೂ ಆಗಲು ಸಾಧ್ಯವಿಲ್ಲ. ಏಷ್ಯಾ ಕಪ್ ಮತ್ತು ವಿಶ್ವಕಪ್ಗೆ ಮುನ್ನ ಪ್ರಯೋಗ ನಡೆಸಲು ಕೆಲವು ಪಂದ್ಯಗಳು ಮಾತ್ರ ನಮ್ಮ ಮುಂದಿವೆ. ಹೀಗಿರುವಾಗ ರೋಹಿತ್ ಮತ್ತು ವಿರಾಟ್ ಬಿಟ್ಟು ಯುವಕರಿಗೆ ಜವಾಬ್ದಾರಿ ನೀಡಿ ಆಡಿಸಿದ್ದೇವೆ" ಎಂದು ಹೇಳಿದ್ದಾರೆ.
"ನಾವು ಇತರರ ಅಭಿಪ್ರಾಯಗಳ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ. ಇಂದು ಮೈದಾನದಲ್ಲಿ ಆಡಿರುವವರು ನಮ್ಮ ದೇಶದ ಪ್ರತಿಭಾವಂತ ಹುಡುಗರು. ಅವರೆಲ್ಲರೂ ಉತ್ತಮ ಪ್ರದರ್ಶನ ನೀಡಿ ಅಂತಾರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗಿದ್ದಾರೆ. ಅವಕಾಶ ಸಿಕ್ಕಾಗ ಸದುಪಯೋಗ ಮಾಡಿಕೊಳ್ಳುವುದು ಅವರಿಗೆ ಬಿಟ್ಟದ್ದು. ಈ ಬಗ್ಗೆ ಸ್ವಲ್ಪ ನಿರಾಶೆಯಾಗಿದೆ. ಇದು ಒಂದು ಟ್ರಿಕ್ಕಿ ವಿಕೆಟ್ ಮತ್ತು ಬ್ಯಾಟ್ ಮಾಡಲು ಸುಲಭವಾದ ವಿಕೆಟ್ ಅಲ್ಲ ಎಂದು ಮೊದಲೇ ತಿಳಿದಿತ್ತು. ಹೀಗಾಗಿ ನಾವು ಹೇಗಾದರೂ 230-240ರ ಗುರಿ ನೀಡುವ ಲೆಕ್ಕಾಚಾರ ಹಾಕಿಕೊಂಡಿದ್ದೆವು. ಮಧ್ಯಮ ಕ್ರಮಾಂಕದ ವಿಕೆಟ್ ನಷ್ಟದಿಂದ 50-60 ರನ್ ಕಡಿಮೆಯಾಗಿದೆ. ಇದು ಸೋಲಿಗೆ ಕಾರಣವಾಯಿತು" ಎಂದು ಬ್ಯಾಟಿಂಗ್ ವೈಫಲ್ಯವನ್ನು ವಿವರಿಸಿದರು.
ಇದನ್ನೂ ಓದಿ: West Indies vs India, 2nd ODI: ಭಾರತ 'ಟಿ20 ತಂಡ'ದ ವಿರುದ್ಧ ವಿಂಡೀಸ್ಗೆ 6 ವಿಕೆಟ್ಗಳ ಗೆಲುವು; ಸರಣಿ 1-1ರಲ್ಲಿ ಸಮಬಲ