ಕಾನ್ಪುರ: ಭಾರತ ತಂಡದ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಫಾರ್ಮ್ ಕೆಲವು ಸಮಯದಿಂದ ಫಾರ್ಮ್ ಕಳೆದುಕೊಂಡಿದ್ದ ಟೀಕೆಗೆ ಗುರಿಯಾಗುತ್ತಿದ್ದಾರೆ. ಆದರೆ ಟೆಸ್ಟ್ ಸ್ಪೆಷಲಿಸ್ಟ್ ಆಗಿರುವ ಚೇತೇಶ್ವರ್ ಪೂಜಾರ ಸಹ ಆಟಗಾರನ ಬೆನ್ನಿಗೆ ನಿಂತಿದ್ದು, ಕೇವಲ ಒಂದು ಇನ್ನಿಂಗ್ಸ್ ಸಾಕು ರಹಾನೆ ಲಯಕ್ಕೆ ಮರಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಜಿಂಕ್ಯ ರಹಾನೆ ತವರಿನಲ್ಲಿ ನಡೆದ ಇಂಗ್ಲೆಂಡ್ ಸರಣಿಯಿಂದಲೂ ಸಾಧಾರಣ ಪ್ರದರ್ಶನ ತೋರಿದ್ದಾರೆ. ಕಳೆದ 11 ಟೆಸ್ಟ್ ಪಂದ್ಯಗಳಲ್ಲಿ 19ರ ಸರಾಸರಿಯಲ್ಲಿ ರನ್ಗಳಿಸಿದ್ದಾರೆ. ಕೆಲವ ಮಾಜಿ ಕ್ರಿಕೆಟಿಗರು ರಹಾನೆ ಇನ್ನೂ ಟೀಮ್ ಇಂಡಿಯಾದಲ್ಲಿ ಆಡುತ್ತಿದ್ದಾರೆಂದರೆ ಅದು ಅವರ ಅದೃಷ್ಟ ಎಂದು ಗೇಲಿ ಮಾಡಿದ್ದಾರೆ. ಆದರೆ ಮೊದಲ ಟೆಸ್ಟ್ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ರಹಾನೆ ಶೀಘ್ರದಲ್ಲಿ ಲಯಕ್ಕೆ ಮರಳಲಿದ್ದಾರೆ ಎಂದು ಉಪನಾಯಕನಾಗಿರುವ ಪೂಜಾರ ತಿಳಿಸಿದ್ದಾರೆ.
ರಹಾನೆ ಒಬ್ಬ ಅದ್ಭುತ ಆಟಗಾರ, ಎಲ್ಲಾ ಆಟಗಾರರ ವೃತ್ತಿ ಜೀವನದಲ್ಲಿ ಇಂತಹ ದಿನಗಳು ಬರುತ್ತವೆ. ಅವರು ತಮ್ಮ ಲಯಕ್ಕೆ ಮರಳು ಕೇವಲ ಒಂದು ಇನ್ನಿಂಗ್ಸ್ ಅಂತರದಲ್ಲಿದ್ದಾರೆ. ಈ ಸರಣಿಯಲ್ಲಿ ಅವರು ಉತ್ತಮ ರನ್ಗಳಿಸಲಿದ್ದಾರೆ ಎಂದು ಪೂಜಾರ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ನಡೆದ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.
33 ವರ್ಷದ ರಹಾನೆ ಮೆಲ್ಬೋರ್ನ್ನಲ್ಲಿ ಶತಕಗಳಿಸಿದ ನಂತರ ಟೆಸ್ಟ್ ಕ್ರಿಕೆಟ್ನಲ್ಲಿ ದಯನೀಯ ವೈಫಲ್ಯ ಅನುಭವಿಸಿದ್ದಾರೆ. ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ರದ್ದಾದ ಕೊನೆಯ ಪಂದ್ಯದಲ್ಲಿ ರಹಾನೆಯನ್ನು ತಂಡದಿಂದ ಕೈಬಿಡುವ ಸಾಧ್ಯತೆಯಿತ್ತು. ಇದೀಗ ಕೊಹ್ಲಿ, ಪಂತ್ ಮತ್ತು ರೋಹಿತ್ ತಂಡದಿಂದ ಹೊರಗುಳಿದಿರುವುದರಿಂದ ರಹಾನೆಗೆ ಮತ್ತೊಂದು ಅವಕಾಶ ಸಿಕ್ಕಿದೆ. ಒಂದು ವೇಳೆ ಈ ಸರಣಿಯಲ್ಲಿ ಅವರು ಲಯಕ್ಕೆ ಮರಳದಿದ್ದರೆ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಕೈಬಿಟ್ಟು ಯುವ ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆಯಿದೆ.
ರಹಾನೆ 40 ಟೆಸ್ಟ್ ಪಂದ್ಯಗಳನ್ನಾಡಿದ್ದು 7 ಶತಕ ಸಿಡಿಸಿದ್ದಾರೆ. 7 ರಲ್ಲಿ 3 ಶತಕಗಳನ್ನು 2019ರಲ್ಲಿ ಸಿಡಿಸಿದ್ದಾರೆ. ನಾಯಕನಾಗಿ ಆಸ್ಟ್ರೇಲಿಯಾದಲ್ಲಿ ಸರಣಿ ಗೆಲ್ಲಿಸಿಕೊಟ್ಟರೂ, ಬ್ಯಾಟರ್ ಆಗಿ ಮಾತ್ರ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.
ಇದನ್ನೂ ಓದಿ:ಶತಕದ ಬಗ್ಗೆ ಚಿಂತೆಯಿಲ್ಲ, ತಂಡಕ್ಕೆ ಅಗತ್ಯವಾದ ರನ್ಗಳಿಸುವುದರಲ್ಲೇ ನನಗೆ ತೃಪ್ತಿ: ಚೇತೇಶ್ವರ್ ಪೂಜಾರ