ಕಾನ್ಪುರ : ಭಾರತ ತಂಡದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನ್ಯೂಜಿಲ್ಯಾಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಕೊನೆಯ ಇನ್ನಿಂಗ್ಸ್ನಲ್ಲಿ 2 ವಿಕೆಟ್ ಪಡೆಯುವ ಮೂಲಕ ಭಾರತದ ಹೆಚ್ಚು ವಿಕೆಟ್ ಪಡೆದ 3ನೇ ಬೌಲರ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಅಶ್ವಿನ್ ನ್ಯೂಜಿಲ್ಯಾಂಡ್ ತಂಡದ ಆರಂಭಿಕ ಬ್ಯಾಟರ್ ಟಾಮ್ ಲೇಥಮ್ ವಿಕೆಟ್ ಪಡೆಯುವ ಮೂಲಕ ಹರ್ಭಜನ್ ಸಿಂಗ್ ಅವರನ್ನು ಹಿಂದಿಕ್ಕಿ ಭಾರತದ ಪರ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಮೂರನೇ ಬೌಲರ್ ಎನಿಸಿಕೊಂಡರು.
-
Stat Alert - With 418 wickets, @ashwinravi99 becomes India's third-highest wicket-taker in Tests.#TeamIndia pic.twitter.com/TRvelxZ1Wk
— BCCI (@BCCI) November 29, 2021 " class="align-text-top noRightClick twitterSection" data="
">Stat Alert - With 418 wickets, @ashwinravi99 becomes India's third-highest wicket-taker in Tests.#TeamIndia pic.twitter.com/TRvelxZ1Wk
— BCCI (@BCCI) November 29, 2021Stat Alert - With 418 wickets, @ashwinravi99 becomes India's third-highest wicket-taker in Tests.#TeamIndia pic.twitter.com/TRvelxZ1Wk
— BCCI (@BCCI) November 29, 2021
ಅಶ್ವಿನ್ 80ನೇ ಟೆಸ್ಟ್ ಪಂದ್ಯಗಳಿಂದ 418 ವಿಕೆಟ್ ಪಡೆದಿದ್ದಾರೆ. ಹರ್ಭಜನ್ ಸಿಂಗ್ 103 ಟೆಸ್ಟ್ ಪಂದ್ಯಗಳಿಂದ 417 ವಿಕೆಟ್ ಪಡೆದಿದ್ದಾರೆ. ಮೊದಲೆರಡು ಸ್ಥಾನಗಳಲ್ಲಿರುವ ಅನಿಲ್ ಕುಂಬ್ಳೆ 132 ಟೆಸ್ಟ್ ಪಂದ್ಯಗಳಿಂದ 619 ಮತ್ತು 2ನೇ ಸ್ಥಾನದಲ್ಲಿರುವ ಲೆಜೆಂಡರಿ ಆಲ್ರೌಂಡರ್ ಕಪಿಲ್ ದೇವ್ 131 ಟೆಸ್ಟ್ ಪಂದ್ಯಗಳಿಂದ 434 ವಿಕೆಟ್ ಪಡೆದಿದ್ದಾರೆ.
ಟಾಪ್ 10ರಲ್ಲಿ ಇಶಾಂತ್ ಶರ್ಮಾ(311), ಜಹೀರ್ ಖಾನ್(311), ಬಿಷನ್ ಸಿಂಗ್ ಬೇಡಿ(266),ಬಿ ಚಂದ್ರಶೇಖರ್ (242), ಜವಾಗಲ್ ಶ್ರೀನಾಥ್(236), ರವೀಂದ್ರ ಜಡೇಜಾ(228) ಇದ್ದಾರೆ.
ಮೊದಲ 80 ಟೆಸ್ಟ್ ಪಂದ್ಯಗಳಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳು :
- ಮುತ್ತಯ್ಯ ಮುರಳೀಧರನ್-450
- ರವಿಚಂದ್ರನ್ ಅಶ್ವಿನ್- 418
- ರಿಷರ್ಡ್ ಹ್ಯಾಡ್ಲಿ -403
- ಡೇಲ್ ಸ್ಟೇನ್-402
ಟೆಸ್ಟ್ನಲ್ಲಿ ಹೆಚ್ಚು ವಿಕೆಟ್ ಪಡೆದ ಸ್ಪಿನ್ ಬೌಲರ್ಗಳು
- ಮುತ್ತಯ್ಯ ಮುರಳೀಧರನ್-800
- ಶೇನ್ ವಾರ್ನ್-708
- ಅನಿಲ್ ಕುಂಬ್ಳೆ-619
- ರಂಗನಾ ಹೆರಾತ್-433
- ರವಿಚಂದ್ರನ್ ಅಶ್ವಿನ್-418
ಇದನ್ನೂ ಓದಿ : ಒಂದೇ ಪಂದ್ಯದಲ್ಲಿ ಪಾಕಿಸ್ತಾನದ ವಾಸೀಮ್ ಅಕ್ರಮ್, ಅಫ್ರಿದಿ ದಾಖಲೆ ಹಿಂದಿಕ್ಕಿದ ಅಶ್ವಿನ್