ಅಹ್ಮದಾಬಾದ್: ಕೋಲ್ಕತ್ತಾ ನೈಟ್ ರೈಡರ್ಸ್ ಬೌಲರ್ಗಳ ಸಂಘಟಿತ ಬೌಲಿಂಗ್ ದಾಳಿಯ ಮುಂದೆ ಪರದಾಡಿದ ಪಂಜಾಬ್ ಕಿಂಗ್ಸ್ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 123 ರನ್ ರನ್ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಪಂಜಾಬ್ ಆರಂಭದಿಂದ ಕೊನೆಯ ಓವರ್ ವರೆಗೂ ರನ್ಗಳಿಸಲು ಪರದಾಡಿದರು. ಕ್ರಿಸ್ ಜೋರ್ಡನ್ 18 ಎಸೆತಗಳಲ್ಲಿ 30 ಮತ್ತು ಮಯಾಂಕ್ ಅಗರ್ವಾಲ್ 31 ರನ್ಗಳಿಸಿ ತಂಡದ ಮೊತ್ತವನ್ನು 100 ಗಡಿ ದಾಟಿಸಿ 124 ರನ್ಗಳ ಗುರಿ ನೀಡಲು ನೆರವಾದರು.
ಆರಂಭಿಕ ರಾಹುಲ್ 20 ಎಸೆತಗಳಲ್ಲಿ 19 ರನ್ಗಳಿಸಿ ಕಮ್ಮಿನ್ಸ್ಗೆ ವಿಕೆಟ್ ಒಪ್ಪಿಸಿದರೆ, ಕ್ರಿಸ್ ಗೇಲ್ ಯುವ ಬೌಲರ್ ಶಿವಂ ಮಾವಿ ಬೌಲಿಂಗ್ನಲ್ಲಿ ಗೋಲ್ಡನ್ ಡಕ್ ಆದರು. ದೀಪಕ್ ಹೂಡ 4 ಎಸೆತಗಳಲ್ಲಿ 1 ರನ್ ಮತ್ತು ಮೋಯಿಸಸ್ ಹೆನ್ರಿಕ್ಸ್ 2 ರನ್ಗಳಿಸಿ ಬಂದ ದಾರಿಯಲ್ಲೇ ವಾಪಸ್ ನಡೆದರು. ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಮಯಾಂಕ್ ಕೂಡ 31 ರನ್ಗಳಿಸಿ ನಿರ್ಗಮಿಸಿದರು.
-
Innings Break: @CJordan 30 (18) provides the much-needed push as #PBKS score 123-9 in 20 overs.
— IndianPremierLeague (@IPL) April 26, 2021 " class="align-text-top noRightClick twitterSection" data="
It has been a disciplined bowling performance from #KKR👏🏾@prasidh43 takes 3/30
🔗https://t.co/sBoaBIpF2J #PBKSvKKR #VIVOIPL pic.twitter.com/PihUxGbuDJ
">Innings Break: @CJordan 30 (18) provides the much-needed push as #PBKS score 123-9 in 20 overs.
— IndianPremierLeague (@IPL) April 26, 2021
It has been a disciplined bowling performance from #KKR👏🏾@prasidh43 takes 3/30
🔗https://t.co/sBoaBIpF2J #PBKSvKKR #VIVOIPL pic.twitter.com/PihUxGbuDJInnings Break: @CJordan 30 (18) provides the much-needed push as #PBKS score 123-9 in 20 overs.
— IndianPremierLeague (@IPL) April 26, 2021
It has been a disciplined bowling performance from #KKR👏🏾@prasidh43 takes 3/30
🔗https://t.co/sBoaBIpF2J #PBKSvKKR #VIVOIPL pic.twitter.com/PihUxGbuDJ
ಭರವಸೆಯ ಆಟಗಾರದ ಪೂರನ್ ಮತ್ತು ಶಾರುಖ್ ಖಾನ್ ಕೂಡ ಇಂದಿನ ಪಂದ್ಯದಲ್ಲಿ ವಿಫಲರಾದರು. ಪೂರನ್ 19 ಎಸೆತಗಳಲ್ಲಿ 19 ರನ್ಗಳಿಸಿದರೆ, ಶಾರುಖ್ 14 ಎಸೆತಗಳಲ್ಲಿ 13 ರನ್ಗಳಿಸಿ ಔಟಾದರು. ಒಂದು ಹಂತದಲ್ಲಿ 100 ರನ್ಗಳಿಸುವುದು ಕಷ್ಟವೆಂಬಂತಿದ್ದ ಸ್ಥಿತಿಯಲ್ಲಿದ್ದ ಪಂಜಾಬ್ ತಂಡವನ್ನು ಜೋರ್ಡನ್ 18 ಎಸೆಗಳಲ್ಲಿ 3 ಸಿಕ್ಸರ್ಗಳ ನೆರವಿನಿಂದ 30 ರನ್ಗಳಿಸಿ ದೂರ ಮಾಡಿದರು.
ಕೆಕೆಆರ್ ಪರ ಸುನೀಲ್ ನರೈನ್ 22ಕ್ಕೆ2, ಪ್ರಸಿಧ್ ಕೃಷ್ಣ 28ಕ್ಕೆ 3, ಪ್ಯಾಟ್ ಕಮ್ಮಿನ್ಸ್ 31ಕ್ಕೆ 2, ಶಿವಂ ಮಾವಿ 13ಕ್ಕೆ 1 ಮತ್ತು ವರುಣ್ ಚಕ್ರವರ್ತಿ 24ಕ್ಕೆ 1 ಒಂದು ವಿಕೆಟ್ ಪಡೆದು ಪಂಜಾಬ್ ತಂಡವನ್ನು ಅಲ್ಪಮೊತ್ತಕ್ಕೆ ನಿಯಂತ್ರಿಸಿದರು.
ಇದನ್ನು ಓದಿಲ: ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುವುದಕ್ಕಿಂತ ಐಪಿಎಲ್ ಬಯೋ ಬಬಲ್ನಲ್ಲಿರುವುದು ತುಂಬಾ ಸುರಕ್ಷಿತ : ಕೌಲ್ಟರ್ ನೈಲ್