ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇಂದಿನ 17ನೇ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಪಂಜಾಬ್ ಮುಖಾಮುಖಿಯಾಗಿವೆ. ಟಾಸ್ ಗೆದ್ದ ಕೆ.ಎಲ್ ರಾಹುಲ್ ಬೌಲಿಂಗ್ ಆಯ್ದುಕೊಂಡಿದ್ದಾರೆ.
-
Toss Update: Captain @klrahul11 wins the toss and he says that @PunjabKingsIPL will bowl first against @mipaltan https://t.co/NMS54FiJ5o #VIVOIPL #PBKSvMI pic.twitter.com/rdTLV53lvn
— IndianPremierLeague (@IPL) April 23, 2021 " class="align-text-top noRightClick twitterSection" data="
">Toss Update: Captain @klrahul11 wins the toss and he says that @PunjabKingsIPL will bowl first against @mipaltan https://t.co/NMS54FiJ5o #VIVOIPL #PBKSvMI pic.twitter.com/rdTLV53lvn
— IndianPremierLeague (@IPL) April 23, 2021Toss Update: Captain @klrahul11 wins the toss and he says that @PunjabKingsIPL will bowl first against @mipaltan https://t.co/NMS54FiJ5o #VIVOIPL #PBKSvMI pic.twitter.com/rdTLV53lvn
— IndianPremierLeague (@IPL) April 23, 2021
ಚೆನ್ನೈನ ಎಂ ಚಿದಂಬರಂ ಮೈದಾನದಲ್ಲಿ ಪಂದ್ಯ ಆರಂಭಗೊಂಡಿದ್ದು, ಉಭಯ ತಂಡಗಳಿಗೆ ಈ ಪಂದ್ಯ ಮಹತ್ವದಾಗಿದೆ. ಮುಂಬೈ ಇಂಡಿಯನ್ಸ್ ಆಡಿರುವ 4 ಪಂದ್ಯಗಳಲ್ಲಿ ಎರಡಲ್ಲಿ ಗೆದ್ದು, ಮತ್ತೆರೆಡು ಪಂದ್ಯಗಳಲ್ಲಿ ಸೋಲು ಕಂಡಿದ್ದು ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಇನ್ನು ಅದ್ಭುತ ಪ್ರದರ್ಶನದ ಹೊರತಾಗಿ ಕೂಡ ಪಂಜಾಬ್ ತಂಡ ಆಡಿರುವ 4 ಪಂದ್ಯಗಳ ಪೈಕಿ ಕೇವಲ 1ರಲ್ಲಿ ಗೆದ್ದು, ಉಳಿದ ಮೂರು ಪಂದ್ಯ ಕೈಚೆಲ್ಲಿದ್ದು, ಅಂಕ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಉಭಯ ತಂಡಗಳು 26 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಮುಂಬೈ ಇಂಡಿಯನ್ಸ್ 14 ಹಾಗೂ ಪಂಜಾಬ್ 12 ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿದೆ.
ಇದನ್ನೂ ಓದಿ: ಐಪಿಎಲ್ನಲ್ಲಿ 50 ವಿಕೆಟ್: ಸಹೋದರಿ ಮಾಲ್ತಿಯಿಂದ ದೀಪಕ್ ಚಹರ್ಗೆ ಈ ರೀತಿ ವಿಶ್!
ಆಡುವ 11ರ ಬಳಗ ಇಂತಿದೆ
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ಕ್ಯಾಪ್ಟನ್), ಕ್ವಿಂಟನ್ ಡಿಕಾಕ್(ವಿ,ಕೀ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಕಿರನ್ ಪೊಲಾರ್ಡ್, ಜಯಂತ್ ಯಾದವ್, ರಾಹುಲ್ ಚಹರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್
ಪಂಜಾಬ್ ಕಿಂಗ್ಸ್: ಕೆ.ಎಲ್ ರಾಹುಲ್( ಕ್ಯಾಪ್ಟನ್, ವಿ/ಕೀ), ಮಯಾಂಕ್ ಅಗರವಾಲ್, ಕ್ರಿಸ್ ಗೇಲ್, ನಿಕೋಲಸ್ ಪೂರನ್, ದೀಪಕ್ ಹುಡಾ, ಮೊಯಿಸಸ್ ಹೆನ್ರಿಕ್ಸ್, ಶಾರುಕ್ ಖಾನ್, ಫಾಬಿನ್ ಅ ಲನ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್
ಮುಂಬೈ ಇಂಡಿಯನ್ಸ್ ತಂಡದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡದೇ ಕಣಕ್ಕಿಳಿದಿದ್ದು, ಪಂಜಾಬ್ ತಂಡ ಮುರಗನ್ ಅಶ್ವಿನ್ ಸ್ಥಾನಕ್ಕೆ ರವಿ ಬಿಷ್ಣೋಯ್ ಅವರನ್ನ ಆಡುವ 11ರಲ್ಲಿ ಸೇರಿಸಿಕೊಂಡಿದೆ.