ಕ್ವೀನ್ಸ್ಲ್ಯಾಂಡ್ (ಆಸ್ಟ್ರೇಲಿಯಾ): ಬ್ಯಾಟಿಂಗ್ ಮಾಡ್ತಿದ್ದ ವೇಳೆ ವಿಕೆಟ್ ಒಪ್ಪಿಸಿದ್ರೂ ಕೂಡ ಕೆಲ ಆಟಗಾರರು ಮೈದಾನ ಬಿಡದೇ ಅಂಪೈರ್ ಜೊತೆ ಕಿರಿಕ್ ಮಾಡಿಕೊಂಡಿರುವ ಅನೇಕ ಘಟನೆಗಳು ನಮ್ಮ ಮುಂದಿವೆ. ಇದರ ಮಧ್ಯೆ ಟೀಂ ಇಂಡಿಯಾ ಮಹಿಳಾ ಬ್ಯಾಟರ್ ನಿರ್ಧಾರ ಎಲ್ಲರ ಮನಗೆದ್ದಿದೆ.
ಭಾರತ-ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯ ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಪಂದ್ಯದ ವೇಳೆ ಅಂಪೈರ್ ನಾಟೌಟ್ ಎಂಬ ತೀರ್ಪು ನೀಡಿದ್ರೂ ಕೂಡ ಟೀಂ ಇಂಡಿಯಾ ಬ್ಯಾಟರ್ ಪೂನಂ ರಾವತ್ ಮೈದಾನದಿಂದ ಹೊರನಡೆದಿದ್ದಾರೆ. ಈ ವೇಳೆ ಮೈದಾನದಲ್ಲಿದ್ದ ಅಂಪೈರ್ ಹಾಗೂ ಎದುರಾಳಿ ಆಟಗಾರರು ಅರೆಕ್ಷಣ ಅಚ್ಚರಿಗೊಳಗಾದರು.
-
Unbelievable scenes 😨
— cricket.com.au (@cricketcomau) October 1, 2021 " class="align-text-top noRightClick twitterSection" data="
Punam Raut is given not out, but the Indian No.3 walks! #AUSvIND | @CommBank pic.twitter.com/xfAMsfC9s1
">Unbelievable scenes 😨
— cricket.com.au (@cricketcomau) October 1, 2021
Punam Raut is given not out, but the Indian No.3 walks! #AUSvIND | @CommBank pic.twitter.com/xfAMsfC9s1Unbelievable scenes 😨
— cricket.com.au (@cricketcomau) October 1, 2021
Punam Raut is given not out, but the Indian No.3 walks! #AUSvIND | @CommBank pic.twitter.com/xfAMsfC9s1
36 ರನ್ಗಳಿಕೆ ಮಾಡಿ ಬ್ಯಾಟ್ ಮಾಡ್ತಿದ್ದ ಪೂನಂ ಮೊಲಿನಿಕ್ಸ್ ಎಸೆದ ಓವರ್ನಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ್ದಾರೆ. ಆದರೆ ಈ ಬಗ್ಗೆ ಅಂಪೈರ್ಗೆ ಸರಿಯಾಗಿ ಗೊತ್ತಾಗದ ಕಾರಣ ಯಾವುದೇ ರೀತಿಯ ತೀರ್ಪು ನೀಡಿಲ್ಲ. ಆದರೆ ರಾವತ್ ಮಾತ್ರ ಕ್ಷಣಾರ್ಧದಲ್ಲೇ ಮೈದಾನ ತೊರೆದರು.
ಪೂನಂ ರಾವತ್ ನಿರ್ಧಾರಕ್ಕೆ ಇದೀಗ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಖುದ್ದಾಗಿ ಈ ವಿಡಿಯೋವನ್ನು ತಮ್ಮ ಟ್ವಿಟರ್ನಲ್ಲಿ ಹಾಕಿಕೊಂಡಿದೆ.
ಇದನ್ನೂ ಓದಿ: ಆಸಿಸ್ ನೆಲದಲ್ಲಿ ಮೊದಲ ಟೆಸ್ಟ್ ಶತಕ ಗಳಿಸಿ ದಾಖಲೆ ಬರೆದ ಸ್ಮೃತಿ ಮಂಧಾನ
ಶತಕ ಸಿಡಿಸಿ ಮಿಂಚಿದ ಸ್ಮೃತಿ ಮಂಧಾನ
ಆಸ್ಟ್ರೇಲಿಯಾ ವಿರುದ್ಧ ನಡೆದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಮಿಂಚಿದ್ದಾರೆ. ಜೊತೆಗೆ ಟೀಂ ಇಂಡಿಯಾ ಮಹಿಳಾ ತಂಡದ ಪರ ಚೊಚ್ಚಲ ಶತಕ ಸಿಡಿಸಿರುವ ದಾಖಲೆ ಬರೆದಿದ್ದು, 127ರನ್ಗಳಿಕೆ ಮಾಡಿದ್ದ ವೇಳೆ ವಿಕೆಟ್ ಒಪ್ಪಿಸಿದರು.
ಎರಡನೇ ದಿನದಾಟದಂತ್ಯಕ್ಕೆ ಭಾರತ 276/5
ಸ್ಮೃತಿ ಮಂಧಾನ ಅವರ 127ರನ್ಗಳ ಸಹಾಯದಿಂದ ಟೀಂ ಇಂಡಿಯಾ ಮಹಿಳಾ ಪಡೆ ಎರಡನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 276 ರನ್ಗಳಿಕೆ ಮಾಡಿದೆ. ಮಳೆಯಿಂದಾಗಿ ಪಂದ್ಯಕ್ಕೆ ಅಡಚಣೆಯಾದ ಕಾರಣ ಎರಡನೇ ದಿನದಾಟ ರದ್ದು ಮಾಡಿ, ನಾಳೆಗೆ ಮುಂದೂಡಲಾಗಿದೆ.