ETV Bharat / sports

ಟೆಸ್ಟ್​ ಕ್ರಿಕೆಟ್​ನಲ್ಲಿ ಸ್ಟ್ರೈಕ್​ರೇಟ್​ ಸಂಪೂರ್ಣ ಅಸಂಬದ್ಧ ಎಂದು ಪೂಜಾರ ತೋರಿಸಿಕೊಟ್ಟಿದ್ದಾರೆ: ದಿನೇಶ್ ಕಾರ್ತಿಕ್ - ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್

ಸ್ಟೈಕ್​​ರೇಟ್​ ಎಂಬುದು ಖಂಡಿತ ಅಸಂಬದ್ಧ ಎಂದು ನಾನು ಭಾವಿಸುತ್ತೇನೆ. ನೀವು 4 ದಿನಗಳಲ್ಲಿ ಅಂತ್ಯವಾದ ಟೆಸ್ಟ್​ ಪಂದ್ಯಗಳನ್ನು ಗಮನಿಸಿದರೆ ಸುಮಾರು ಶೇ80 ರಿಂದ 82 ಇದೆ. ಆದ್ದರಿಂದ ಸ್ಟ್ರೈಕ್​ರೇಟ್​ ಬಗ್ಗೆ ಏಕೆ ತಲೆ ಕೆಡಿಸಿಕೊಳ್ಳಬೇಕು ಎಂದು ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.

ಚೇತೇಶ್ವರ್ ಪೂಜಾರ
ಚೇತೇಶ್ವರ್ ಪೂಜಾರ
author img

By

Published : Jun 17, 2021, 5:33 PM IST

Updated : Jun 17, 2021, 6:15 PM IST

ನವದೆಹಲಿ: ಟೆಸ್ಟ್​ ಕ್ರಿಕೆಟ್​ನಲ್ಲಿ ಸುದೀರ್ಘವಾಗಿ ಚರ್ಚಿತವಾಗುತ್ತಿರುವ ಸ್ಟ್ರೈಕ್​ ರೇಟ್​ ಸಂಪೂರ್ಣ ಅಸಂಬದ್ಧವಾಗಿದೆ ಎಂದು ಕೆಕೆಆರ್ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ದಿನೇಶ್ ಕಾರ್ತಿಕ್ ತಿಳಿಸಿದ್ದು, ಚೇತೇಶ್ವರ್ ಪೂಜಾರ ಈಗಾಗಲೇ ಅದನ್ನು ನಿರೂಪಿಸಿದ್ದಾರೆ ಎಂದು ಹೇಳಿದ್ದಾರೆ.

ಪೂಜಾರಾ ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಹೆಚ್ಚು ರನ್​ಗಳಿಸಿಲ್ಲ. ಆದರೆ, ಕಾಂಗರೂ ನಾಡಿನಲ್ಲಿ ಭಾರತ ಬಾರ್ಡರ್​ ಗವಾಸ್ಕರ್ ಸರಣಿ ಎತ್ತಿ ಹಿಡಿಯುವಲ್ಲಿ ಅವರ ಪಾತ್ರ ಮಹತ್ವವಾಗಿತ್ತು ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಸ್ಟೈಕ್​​ರೇಟ್​ ಎಂಬುದು ಖಂಡಿತ ಅಸಂಬದ್ಧ ಎಂದು ನಾನು ಭಾವಿಸುತ್ತೇನೆ. ನೀವು 4 ದಿನಗಳಲ್ಲಿ ಅಂತ್ಯವಾದ ಟೆಸ್ಟ್​ ಪಂದ್ಯಗಳನ್ನು ಗಮನಿಸಿದರೆ ಸುಮಾರು ಶೇ80 ರಿಂದ 82 ಇದೆ. ಆದ್ದರಿಂದ ಸ್ಟ್ರೈಕ್​ರೇಟ್​ ಬಗ್ಗೆ ಏಕೆ ತಲೆ ಕೆಡಿಸಿಕೊಳ್ಳಬೇಕು. ಭಾರತಕ್ಕಾಗಿ ಟೆಸ್ಟ್ ಪಂದ್ಯಗಳನ್ನು ಗೆಲ್ಲಲು ಸಮರ್ಥನಾಗಿರುವವರೆಗೂ ಆ ವ್ಯಕ್ತಿ ತಾನು ಆಡಲು ಬಯಸುವ ಯಾವುದೇ ಸ್ಟ್ರೈಕ್ ರೇಟ್​ನಲ್ಲಿ ಆಡಲಿ ಎಂದು ದಿನೇಶ್ ಕಾರ್ತಿಕ್​ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

WTC ಫೈನಲ್​ಗೆ ನಿರ್ಣಾಯಕವಾಗಿದ್ದ ಇಂಗ್ಲೆಂಡ್ ವಿರುದ್ಧದ ತವರಿನ ಟೆಸ್ಟ್​ನಲ್ಲಿಯೂ ಪೂಜಾರ ಹೆಚ್ಚು ರನ್​ಗಳಿಸಲು ಸಾಧ್ಯವಾಗಿರಲಿಲ್ಲ. ಆದರೆ, ಶುಕ್ರವಾರದಿಂದ ನಡೆಯುವ ಫೈನಲ್ ಪಂದ್ಯ ಗೆಲ್ಲುವ ಅವಕಾಶಕ್ಕೆ ನಿರ್ಣಾಯಕವಾಗಿದೆ.

ಈ ಕುರಿತು ಮಾತನಾಡಿದ ಡಿಕೆ, ನಾವು ಕೆಲವು ಕಠಿಣ ಪರಿಸ್ಥಿತಿಗಳಲ್ಲಿ ಆಡಿದ್ದೇವೆ. ಯಾವುದೇ ಒಬ್ಬ ವ್ಯಕ್ತಿ ಎಷ್ಟು ಚೆನ್ನಾಗಿ ಆಡುತ್ತಿದ್ದಾನೆ ಎಂಬುದನ್ನು ಸಮರ್ಥಿಸಿಕೊಳ್ಳಲು ನೀವು ಯಾವಾಗಲೂ ರನ್​ಗಳಿಕೆಯಿಂದ ನಿರ್ಣಯಿಸಲು ಸಾಧ್ಯವಿಲ್ಲ. ಸಿಡ್ನಿ ಟೆಸ್ಟ್​ ತೆಗೆದುಕೊಂಡರೆ ಅವರು ಎಷ್ಟು ಹೊಡೆತಗಳನ್ನು ಸ್ವೀಕರಿಸಿದ್ದರು ಎಂಬುದನ್ನು ನೀವು ಪರೀಕ್ಷಿಸಿದರೆ ತಿಳಿಯುತ್ತದೆ. ಕೆಲವೊಮ್ಮೆ ರನ್​ಗಳಿಸುವುದಕ್ಕೆ ಹೆಚ್ಚು ಎಸೆತಗಳನ್ನು ಆಡುವುದು ಮುಖ್ಯವಾಗುತ್ತದೆ ಎಂದಿದ್ದಾರೆ.

ಇದನ್ನು ಓದಿ:ಇಂಗ್ಲೆಂಡ್ ಸರಣಿ ಕಿವೀಸ್​​ಗೆ ಅನುಕೂಲವಾಗಿದೆ, ಆದರೆ ಭಾರತ ಮ್ಯಾಚ್​ ವಿನ್ನರ್ಸ್​ಗಳ ತಂಡ: ಯುವರಾಜ್​

Last Updated : Jun 17, 2021, 6:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.