ETV Bharat / sports

Prithvi Shaw: ಇಂಗ್ಲೆಂಡ್​ನಲ್ಲಿ ಕೌಂಟಿ ಪಂದ್ಯ; ಪೃಥ್ವಿ ಶಾ ಮೊಣಕಾಲಿಗೆ ಗಂಭೀರ ಗಾಯ

Prithvi Shaw injured: ಇಂಗ್ಲೆಂಡ್​ನ ಏಕದಿನ ಕೌಂಟಿ ಕ್ರಿಕೆಟ್​ನಲ್ಲಿ ಫೀಲ್ಡಿಂಗ್​ ಮಾಡುವಾಗ ಮೊಣಕಾಲು ಗಾಯಕ್ಕೆ ತುತ್ತಾದ ಶಾ ತಂಡದಿಂದ ಹೊರಗುಳಿದಿದ್ದಾರೆ.

Prithvi Shaw
Prithvi Shaw
author img

By

Published : Aug 16, 2023, 7:51 PM IST

ಲಂಡನ್​: ಇಂಗ್ಲೆಂಡ್​ನಲ್ಲಿ ನಡೆಯುತ್ತಿದ್ದ ಏಕದಿನ ಮಾದರಿಯ ಕೌಂಟಿ ಕ್ರಿಕೆಟ್​ನಲ್ಲಿ ಆಡುತ್ತಿರುವ ಪೃಥ್ವಿ ಶಾ ಗಾಯಕ್ಕೆ ತುತ್ತಾಗಿದ್ದಾರೆ. ಪ್ರಭಾವಿ ಇನ್ನಿಂಗ್ಸ್​ ಆಡಿದ್ದ ಶಾ, ಮೊಣಕಾಲಿನ ಗಾಯದಿಂದ ಟೂರ್ನಿಯಿಂದ ಹೊರಗುಳಿಯಬೇಕಾಗಿದೆ. ಈ ಬಗ್ಗೆ ನಾರ್ಥಾಂಪ್ಟನ್‌ಶೈರ್​ ತನ್ನ ಎಕ್ಸ್​ ಆ್ಯಪ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಫಾರ್ಮ್​ ಕಳೆದುಕೊಂಡು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದ್ದ ಶಾ ಅವರು ಲಂಡನ್​ ಕೌಂಟಿಯಲ್ಲಿ ಲಯಕ್ಕೆ ಮರಳಿದ್ದರು. ಆದರೆ ಗಾಯಕ್ಕೆ ತುತ್ತಾಗಿದ್ದು, ಮತ್ತೆ ಸಂಕಷ್ಟ ಎದುರಾಗಿದೆ. ನಾರ್ಥಾಂಪ್ಟನ್‌ಶೈರ್ ಪರ ನಾಲ್ಕು ಇನ್ನಿಂಗ್ಸ್​ ಆಡಿರುವ ಪೃಥ್ವಿ ಶಾ ಒಂದು ದ್ವಿಶತಕ ಮತ್ತು ಶತಕ ಗಳಿಸಿದ್ದಾರೆ. ಮುಂಬೈ ಬ್ಯಾಟರ್​ ಆರಂಭಿಕರಾಗಿ ಫಾರ್ಮ್​ನಲ್ಲಿ ಕಂಡುಬಂದಿದ್ದರು. ಅದ್ಭುತ ಪ್ರದರ್ಶನದಿಂದ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳುವ ನಿರೀಕ್ಷೆಯೂ ಇತ್ತು.

ಆಗಸ್ಟ್​ 13ರಂದು ನಾರ್ಥಾಂಪ್ಟನ್‌ಶೈರ್ ತಂಡ ಡರ್ಹಾಮ್ ವಿರುದ್ಧ ಪಂದ್ಯವನ್ನಾಡಿತ್ತು. ಇದರಲ್ಲಿ ಮೊದಲು ಬ್ಯಾಟ್​ ಮಾಡಿದ ಡರ್ಹಾಮ್ 198 ರನ್ ಗಳಿಸಿ ಆಲ್​ಔಟ್​ ಆಗಿತ್ತು. ಈ ಗುರಿ ಬೆನ್ನತ್ತಿದ್ದ ನಾರ್ಥಾಂಪ್ಟನ್‌ಶೈರ್ 25.4 ಓವರ್​ನಲ್ಲೇ ಗೆದ್ದುಕೊಂಡಿತ್ತು. ಪಂದ್ಯದಲ್ಲಿ ಶಾ 76 ಬಾಲ್​ನಲ್ಲಿ 15 ಬೌಂಡರಿ ಮತ್ತು 7 ಸಿಕ್ಸ್​ನಿಂದ 125 ರನ್​ಗಳಿಸಿ ಅಜೇಯರಾಗಿ ಉಳಿದಿದ್ದರು. ಇದೇ ಪಂದ್ಯದಲ್ಲಿ ಮೊದಲು ಫೀಲ್ಡಿಂಗ್​ ಮಾಡುವಾಗ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಆದರೆ ಗಾಯವನ್ನೂ ಲೆಕ್ಕಿಸದೆ ಬ್ಯಾಟಿಂಗ್​ನಲ್ಲಿ ಶತಕ ಸಿಡಿಸಿದ್ದಾರೆ.

  • Prithvi injured his knee while fielding in the fixture against Durham and subsequent scan results received this morning have revealed the injury is worse than initially expected.

    Full details 👉 https://t.co/uu72JvZOee pic.twitter.com/TVWGOIn9hQ

    — Northamptonshire CCC (@NorthantsCCC) August 16, 2023 " class="align-text-top noRightClick twitterSection" data=" ">

ಪಂದ್ಯದ ನಂತರ ಸ್ಕ್ಯಾನ್‌ ಮಾಡಿಸಲಾಗಿದೆ. ಇಂದು ಬೆಳಿಗ್ಗೆ ಬಂದ ವರದಿಯಂತೆ ಗಾಯ ತೀವ್ರವಾಗಿದ್ದು ಒಂದೂವರೆ ತಿಂಗಳಿಗೂ ಹೆಚ್ಚುಕಾಲ ವಿಶ್ರಾಂತಿಯ ಅಗತ್ಯವಿದೆ ಎನ್ನಲಾಗಿದೆ. ಸದ್ಯ ಅವರು ಊರುಗೋಲಿನ ಸಹಾಯದಿಂದ ನಡೆದಾಡುತ್ತಿದ್ದಾರೆ. ಒಂದೆರಡು ವಾರದ ಚಿಕಿತ್ಸೆಯ ನಂತರ ಭಾರತಕ್ಕೆ ಮರಳುತ್ತಾರೆ ಎಂದು ಹೇಳಲಾಗಿದೆ.

ನಾರ್ಥಾಂಪ್ಟನ್‌ಶೈರ್​ನ ಎಕ್ಸ್​ ಆ್ಯಪ್​ ಖಾತೆಯಲ್ಲಿ, "ಡರ್ಹಾಮ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಪೃಥ್ವಿ ಮೊಣಕಾಲಿನ ಗಾಯವಾಗಿದೆ. ಇಂದು ಬೆಳಿಗ್ಗೆ ಸ್ವೀಕರಿಸಿದ ಸ್ಕ್ಯಾನ್ ಫಲಿತಾಂಶದ ವರದಿಯಲ್ಲಿ ಗಾಯ ಗಂಭೀರವಾಗಿರುವುದು ಕಂಡುಬಂದಿದೆ. ಉಳಿದ ಪಂದ್ಯಗಳಿಗೆ ಅವರು ತಂಡದಲ್ಲಿ ಇರುವುದಿಲ್ಲ" ಎಂದು ತಿಳಿಸಿದೆ.

ನಾರ್ಥಾಂಪ್ಟನ್‌ಶೈರ್​ನ ಕೋಚ್​ ಜಾನ್ ಸ್ಯಾಡ್ಲರ್, "ಕೆಲವೇ ಸಮಯ ನಮ್ಮ ತಂಡಕ್ಕಾಗಿ ಆಡಿ ದೊಡ್ಡ ಮಟ್ಟದ ಪ್ರಭಾವ ಬೀರಿದ್ದಾರೆ. ಟೂರ್ನಿಯ ಮುಂದಿನ ಭಾಗದಲ್ಲಿ ಅವರು ನಮ್ಮೊಂದಿಗೆ ಇರದೇ ಇರುವುದು ಬೇಸರದ ಸಂಗತಿಯಾಗಿದೆ. ಗಾಯದ ನಂತರವೂ ಅವರು ಬ್ಯಾಟ್​ ಮಾಡಿ ಶತಕ ಗಳಿಸಿದ್ದರು. ನಾರ್ಥಾಂಪ್ಟನ್‌ಶೈರ್ ಪರ ಆಡಿದ್ದಕ್ಕಾಗಿ ಕೃತಜ್ಞತೆಗಳು" ಎಂದಿದ್ದಾರೆ.

ಇದನ್ನೂ ಓದಿ: Rishabh Pant: ಬ್ಯಾಟ್​​ ಹಿಡಿದು ಮೈದಾನಕ್ಕಿಳಿದ ರಿಷಬ್​ ಪಂತ್; ಶೀಘ್ರವೇ ತಂಡಕ್ಕೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.