ನವದೆಹಲಿ: ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ಕೋಚ್ ಆಗಿದ್ದ ವಿ. ರಾಮನ್ ಅವರ ಸ್ಥಾನಕ್ಕೆ ಇದೀಗ ರಮೇಶ್ ಪೊವರ್ ಆಯ್ಕೆಯಾಗಿದ್ದಾರೆ. ಇದೇ ವಿಚಾರವನ್ನಿಟ್ಟುಕೊಂಡು ಡಬ್ಲ್ಯೂ. ವಿ ರಾಮನ್ ಇದೀಗ ಬಿಸಿಸಿಐ ಅಧ್ಯಕ್ಷ ಗಂಗೂಲಿ ಹಾಗೂ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ರಾಹುಲ್ ದ್ರಾವಿಡ್ ಅವರಿಗೆ ಪತ್ರ ಬರೆದಿದ್ದಾರೆ.
ಭಾರತೀಯ ಮಹಿಳಾ ತಂಡದಲ್ಲಿ Prima donna ಸಂಸ್ಕೃತಿ ಕೊನೆಗೊಳ್ಳಬೇಕಿದೆ ಎಂದಿರುವ ಅವರು, ಮಹಿಳಾ ಕ್ರಿಕೆಟರ್ಸ್ಗಾಗಿ ಮಾರ್ಗಸೂಚಿ ನಿಗದಿಪಡಿಸಬೇಕು ಎಂದು ಪ್ರಸ್ತಾಪಿಸಿದ್ದಾರೆ.
ಈ ಹಿಂದೆ ಮಹಿಳಾ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರ ಸ್ಥಾನಕ್ಕೆ ಕಳೆದ ಕೆಲ ದಿನಗಳ ಹಿಂದೆ ದಿಢೀರ್ ಆಗಿ ರಮೇಶ್ ಪೊವರ್ ಆಯ್ಕೆ ಮಾಡಲಾಗಿದೆ. ವಿಶೇಷವೆಂದರೆ ಕಳೆದ ವರ್ಷ ನಡೆದಿದ್ದ ಮಹಿಳಾ ಟಿ-20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ರನ್ನರ್ ಅಪ್ ಆಗಲು ರಾಮನ್ ಪ್ರಮುಖ ಕಾರಣರಾಗಿದ್ದರು.
ಇದನ್ನೂ ಓದಿ: ಪಾಸ್ ಇಲ್ಲದೇ ಪ್ರಯಾಣಿಸುತ್ತಿದ್ದ ಪೃಥ್ವಿ ಶಾಗೆ ತಡೆ ಹಾಕಿದ ಪೊಲೀಸರು
ಮಹಿಳಾ ತಂಡದಲ್ಲಿನ ಕೆಲ ಪ್ಲೇಯರ್ಸ್ ಗುರಿಯಾಗಿಸಿಕೊಂಡು ರಾಮನ್ ಪತ್ರ ಬರೆದಿರುವುದು ಇದೀಗ ಕೆಲವರ ಭಯ ಶುರುವಾಗಿದೆ ಎಂಬ ಮಾತು ಕೇಳಿ ಬರಲು ಶುರುಗೊಂಡಿವೆ. ವಿಶೇಷವೆಂದರೆ ರಾಮನ್ ತಮ್ಮ ಪತ್ರದಲ್ಲಿ ಯಾರ ಹೆಸರು ಪ್ರಸ್ತಾಪ ಮಾಡಿಲ್ಲವಾದರೂ, ತಂಡದಲ್ಲಿನ ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾತನಾಡಿದ್ದಾರೆ.
ವಜಾಗೊಳಲು ಕಾರಣ?
ಭಾರತ ಕ್ರಿಕೆಟ್ನಲ್ಲಿ ಸುಧಾರಣೆ ತರಲು ಲೋಧಾ ಸಮಿತಿ ಶಿಫಾರಸ್ಸಿನ ಪ್ರಕಾರ 70 ವರ್ಷ ದಾಟಿದವರಿಗೆ ಪ್ರಮುಖ ಹುದ್ದೆಗಳಲ್ಲಿ ಮುಂದುವರಿಸುವಂತಿಲ್ಲ. ಇದೇ ಕಾರಣಕ್ಕಾಗಿ ಅವರನ್ನ ವಜಾಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಇದರ ಮಧ್ಯೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ವೇಳೆ ಸ್ಫೋಟಕ ಬ್ಯಾಟ್ಸಮನ್ ಶಫಾಲಿ ವರ್ಮಾ ಹಾಗೂ ಬೌಲರ್ ಶಿಖಾ ಪಾಂಡೆ ಅವರನ್ನ ಕೈಬಿಡಲಾಗಿತ್ತು. ಇದೇ ವಿಚಾರವಾಗಿ ಆಯ್ಕೆ ಸಮಿತಿ ವಿರುದ್ಧ ರಾಮನ್ ಆಕ್ರೋಶ ಹೊರಹಾಕಿದ್ದರು. ಇದು ಸಹ ವಜಾಗೊಳಿಸಲು ಕಾರಣ ಎಂದು ಹೇಳಲಾಗ್ತಿದೆ.