ETV Bharat / sports

ಐಪಿಎಲ್ 2021 : ಬಲಿಷ್ಠ ಡೆಲ್ಲಿ ವಿರುದ್ಧ ಪುಟಿದೇಳುವುದೇ ಹೈದರಾಬಾದ್?

ಟಿ20 ವಿಶ್ವಕಪ್​ ತಂಡದಿಂದ ಅವಕಾಶ ವಂಚಿತರಾಗಿರುವ ಅನುಭವಿ ಶಿಖರ್​ ಧವನ್ ​(380) ತಮ್ಮನ್ನು ಆಯ್ಕೆ ಸಮಿತಿ ಕಡೆಗಣಿಸಿದ್ದನ್ನು ತಪ್ಪು ನಿರ್ಧಾರ ಎಂದು ತೋರಿಸಲು ಕಾಯುತ್ತಿದ್ದಾರೆ. ಅವರ ಜೊತೆಗಾರ ಬ್ಯಾಟ್ಸ್​ಮನ್ ಪೃಥ್ವಿ ಶಾ(308) ಕೂಡ ತಮ್ಮ ಸ್ಫೋಟಕ ಆಟವನ್ನು ಮುಂದುವರಿಸಿಕೊಂಡು ಹೋಗುವ ಹಂಬಲದಲ್ಲಿದ್ದಾರೆ..

Delhi Capitals vs SRH
ಸನ್​ರೈಸರ್ಸ್​ ಹೈದರಾಬಾದ್​​
author img

By

Published : Sep 22, 2021, 4:52 PM IST

ದುಬೈ : ಶ್ರೇಯಸ್​ ಅಯ್ಯರ್ ಮರಳುವಿಕೆಯಿಂದ ಮತ್ತಷ್ಟು ಬಲಿಷ್ಠವಾಗಿರುವ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಅಂಕಪಟ್ಟಿಯಲ್ಲಿ ಕೆಳಸ್ಥಾನದಲ್ಲಿರುವ ಸನ್​ರೈಸರ್ಸ್​ ಹೈದರಾಬಾದ್​ ತಂಡವನ್ನು ಬುಧವಾರ ನಡೆಯಲಿರುವ ಪಂದ್ಯದಲ್ಲಿ ಎದುರಿಸಲಿದೆ.

ಡೆಲ್ಲಿ ಪ್ರಸ್ತುತ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಆಡಿರುವ 8 ಪಂದ್ಯಗಳಲ್ಲಿ 6 ಗೆಲುವು ಮತ್ತು 2 ಸೋಲುಗಳೊಂದಿಗೆ 2ನೇ ಸ್ಥಾನದಲ್ಲಿದೆ. ಆದರೆ, ಐಪಿಎಲ್​ನಲ್ಲಿ ಇದೇ ಮೊದಲ ಬಾರಿಗೆ ಭಾರಿ ವೈಫಲ್ಯ ಅನುಭವಿಸಿರುವ ಸನ್​ರೈಸರ್ಸ್​ ಹೈದರಾಬಾದ್ 7 ಪಂದ್ಯಗಳಲ್ಲಿ​ ಕೇವಲ ಒಂದು ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಶ್ರೇಯಸ್​ ಅನುಪಸ್ಥಿತಿಯಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿರುವ ರಿಷಭ್ ಪಂತ್ 2ನೇ ಹಂತದ ಲೀಗ್​ನಲ್ಲೂ ತಂಡದ ನೇತೃತ್ವವನ್ನು ವಹಿಸಲಿದ್ದಾರೆ. ಡೆಲ್ಲಿ ತಂಡದಲ್ಲಿ ಸಾಕಷ್ಟು ಪವರ್​ ಹಿಟ್ಟರ್ಸ್​ಗಳಿದ್ದು, ಎಂತಹುದೇ ಬಲಿಷ್ಠ ಬೌಲಿಂಗ್ ಪಡೆಯನ್ನು ಪುಡಿಗಟ್ಟುವ ಸಾಮರ್ಥ್ಯವನ್ನು ಹೊಂದಿವೆ.

ಟಿ20 ವಿಶ್ವಕಪ್​ ತಂಡದಿಂದ ಅವಕಾಶ ವಂಚಿತರಾಗಿರುವ ಅನುಭವಿ ಶಿಖರ್​ ಧವನ್ ​(380) ತಮ್ಮನ್ನು ಆಯ್ಕೆ ಸಮಿತಿ ಕಡೆಗಣಿಸಿದ್ದನ್ನು ತಪ್ಪು ನಿರ್ಧಾರ ಎಂದು ತೋರಿಸಲು ಕಾಯುತ್ತಿದ್ದಾರೆ. ಅವರ ಜೊತೆಗಾರ ಬ್ಯಾಟ್ಸ್​ಮನ್ ಪೃಥ್ವಿ ಶಾ(308) ಕೂಡ ತಮ್ಮ ಸ್ಫೋಟಕ ಆಟವನ್ನು ಮುಂದುವರಿಸಿಕೊಂಡು ಹೋಗುವ ಹಂಬಲದಲ್ಲಿದ್ದಾರೆ.

ಶ್ರೇಯಸ್​ ಅಯ್ಯರ್ ಸೇರ್ಪಡೆಯಿಂದ ಡೆಲ್ಲಿ ಮಧ್ಯಮ ಕ್ರಮಾಂಕ ಮತ್ತಷ್ಟು ಬಲಿಷ್ಟವಾಗಿದೆ. ನಾಯಕ ಶಾ(213), ಆಸ್ಟ್ರೇಲಿಯಾದ ಸ್ಮಿತ್​ ಮತ್ತು ಮಾರ್ಕಸ್​ ಸ್ಪೋಯ್ನಿಸ್​ ಹಾಗೂ ಹೆಟ್ಮಾಯರ್​ ಕೂಡ ಇದ್ದಾರೆ.

ಡೆಲ್ಲಿ ಬೌಲಿಂಗ್ ವಿಭಾಗ ಕೂಡ ಬಲಿಷ್ಠವಾಗಿದೆ. ಆವೇಶ್ ಖಾನ್(14) ಮತ್ತು ಕಗಿಸೋ ರಬಾಡ(8) ತಂಡದ ಪ್ರಮುಖ ಅಸ್ತ್ರಗಳಾಗಿದ್ದಾರೆ. ಅಶ್ವಿನ್, ಅಮಿತ್ ಮಿಶ್ರಾ, ಅಕ್ಷರ್ ಪಟೇಲ್, ಲಲಿತ್ ಯಾದವ್​ ಮತ್ತು ಪ್ರವೀಣ್​ ದುಬೆ ಅಂತಹ ಸ್ಟಾರ್ ಸ್ಪಿನ್ನರ್​ಗಳ ಆಯ್ಕೆಯಿದೆ. ಭಾಗಶಃ ಅಶ್ವಿನ್ ಜೊತೆಗೆ ಅಕ್ಷರ್ ಅಥವಾ ಮಿಶ್ರಾರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ.

ಸೋತು ಸುಣ್ಣವಾಗಿರುವ ಸನ್​ರೈಸರ್ಸ್​ ಹೈದರಾಬಾದ್​ ಈ ಪಂದ್ಯದಲ್ಲಿ ಗೆದ್ದು ತಮ್ಮ ವಿಶ್ವಾಸ ಹೆಚ್ಚಿಸಿಕೊಳ್ಳುವ ಆಶಯದಲ್ಲಿದೆ. ಆದರೆ, ಆವೃತ್ತಿಯಲ್ಲಿ ತಂಡದ ಗರಿಷ್ಠ ಸ್ಕೋರರ್​ ಆಗಿರುವ ಜಾನಿ ಬೈರ್​ಸ್ಟೋವ್​ ಐಪಿಎಲ್​ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಆದ್ದರಿಂದ ಆಸೀಸ್​ ಸ್ಟಾರ್​ ಡೇವಿಡ್ ವಾರ್ನರ್​ ಮೇಲೆ ಮತ್ತಷ್ಟು ಬಾರ ಹೊರಬೇಕಾಗಿದೆ.

ಕೇನ್​ ವಿಲಿಯಮ್ಸನ್​​, ಮನೀಶ್ ಪಾಂಡೆ, ವೃದ್ಧಿಮಾನ್​ ಶಾ, ಕೇದರ್​ ಜಾಧವ್, ಅಬ್ದುಲ್ ಸಮದ್​ ಮತ್ತು ವಿಜಯ್ ಶಂಕರ್​ ಕೂಡ ತಂಡಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕಿದೆ.

ರಶೀದ್ ಖಾನ್ ನೇತೃತ್ವದ ಬೌಲಿಂಗ್ ಪಡೆ​ ಡೆಲ್ಲಿಯ ಸ್ಫೋಟಕ ಬ್ಯಾಟ್ಸ್​ಮನ್​ಗಳನ್ನು ನಿಯಂತ್ರಿಸಿ ತಂಡವನ್ನು ಗೆಲುವಿನ ಹಳಿಗೆ ಕೊಂಡೊಯ್ಯಬೇಕಾಗಿದೆ.

ಇದನ್ನು ಓದಿ: ಒತ್ತಡದಲ್ಲಿರುವ ಕೊಹ್ಲಿಯನ್ನು ಲೀಗ್​​ ಮಧ್ಯದಲ್ಲೇ ಆರ್​ಸಿಬಿ ನಾಯಕತ್ವದಿಂದ ಕೆಳಗಿಳಿಸುವ ಸಾಧ್ಯತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.