ಮುಂಬೈ: ಘಾತಕ ವೇಗಿಗಳ ದಂಡು ಹೊಂದಿರುವ ಸನ್ರೈಸರ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಬುಧವಾರ ನಡೆಯುವ ಐಪಿಎಲ್ನ 40ನೇ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಎರಡೂ ತಂಡದಲ್ಲಿ 150 ಗಂಟೆಗೆ ಕಿಮೀ ವೇಗದಲ್ಲಿ ಬೌಲ್ ಮಾಡುವಂತಹ ಹಾಗೂ ಸ್ವಿಂಗ್ ಮಾಡಬಲ್ಲ ಅನುಭವಿಗಳಿದ್ದಾರೆ. ಹಾಗಾಗಿ ಎರಡೂ ತಂಡಗಳಿಂದ ಇಂದು ಸಂಜೆ ಸಮಬಲದ ಹೋರಾಟ ನಿರೀಕ್ಷಿಸಲಾಗಿದೆ.
ಗುಜರಾತ್ ಟೈಟನ್ಸ್ ಆಡಿರುವ 7 ಪಂದ್ಯಗಳಲ್ಲಿ ಕೇವಲ 1 ಪಂದ್ಯದಲ್ಲಿ ಸೋಲು ಕಂಡು 6ರಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಹೈದರಾಬಾದ್ ಮೊದಲೆರಡು ಪಂದ್ಯಗಳ ಸೋಲಿನ ಬಳಿಕ ಅದ್ಭುತವಾಗಿ ಕಮ್ಬ್ಯಾಕ್ ಮಾಡಿ ಸತತ 5 ಗೆಲುವು ಪಡೆದು ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿ ಕುಳಿತಿದೆ.
ವಿಶೇಷವೆಂದರೆ, ಟೂರ್ನಿಯಲ್ಲಿ ಟೈಟನ್ಸ್ ಸೋಲು ಕಂಡರುವ ಏಕೈಕ ಪಂದ್ಯ ಹೈದರಾಬಾದ್ ವಿರುದ್ಧವೇ ಆಗಿದೆ. ಹಾಗಾಗಿ, ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡ ಸೇಡಿನ ತುಡಿತದಲ್ಲಿದೆ. ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಕೇವಲ 152 ರನ್ಗಳನ್ನು ಡಿಫೆಂಡ್ ಮಾಡಿಕೊಂಡಿದೆ. ಟಾಸ್ ಹಾರ್ದಿಕ್ ಪಡೆಗೆ ಹೆಚ್ಚೇನು ಸಮಸ್ಯೆಯಾಗುವುದಿಲ್ಲ.ಇಡೀ ಟೂರ್ನಿಯಲ್ಲಿ ಟೈಟನ್ಸ್ ಉತ್ತಮ ಆರಂಭ ಪಡೆಯುವಲ್ಲಿ ಸತತವಾಗಿ ವಿಫಲವಾಗುತ್ತಿದ್ದು, ಇಂದಿನ ಪಂದ್ಯದಲ್ಲಿ ಆ ಒಂದು ವಿಚಾರದ ಕಡೆಗೆ ಗಮನ ನೀಡುವ ಅವಶ್ಯಕತೆಯಿದೆ.
ಸನ್ರೈಸರ್ಸ್ ಹೈದರಾಬಾದ್ 7 ಪಂದ್ಯಗಳಲ್ಲಿ ಟಾಸ್ ಗೆದ್ದಿದೆ. ಮೊದಲೆರಡು ಪಂದ್ಯಗಳಲ್ಲಿ ಚೇಸ್ ಮಾಡುವಲ್ಲಿ ವಿಫಲವಾದರೂ ನಂತರ ಸತತ 5 ಪಂದ್ಯಗಳಲ್ಲಿ ಎದುರಾಳಿಯನ್ನು ನಿಯಂತ್ರಿಸಿ ಸುಲಭ ಜಯ ಸಾಧಿಸುತ್ತಿದೆ. ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿಲ್ಲ.
ಗುಜರಾತ್ ಸಂಭಾವ್ಯ XI: ವೃದ್ಧಿಮಾನ್ ಸಹಾ (ವಿಕೀ), ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ (ನಾಯಕ), ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಲಾಕಿ ಫರ್ಗುಸನ್, ಯಶ್ ದಯಾಳ್, ಮೊಹಮ್ಮದ್ ಶಮಿ
ಹೈದರಾಬಾದ್ ಸಂಭಾವ್ಯ XI: ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್ (c), ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್ (WK), ಶಶಾಂಕ್ ಸಿಂಗ್, ಜಗದೀಶ ಸುಚಿತ್, ಭುವನೇಶ್ವರ್ ಕುಮಾರ್, ಮಾರ್ಕೊ ಜಾನ್ಸೆನ್, ಉಮ್ರಾನ್ ಮಲಿಕ್, ಟಿ ನಟರಾಜನ್
ಇದನ್ನೂ ಓದಿ:ಆರ್ಆರ್ ಬೌಲಿಂಗ್ ಎದುರು ಧೂಳಿಪಟವಾದ ಆರ್ಸಿಬಿ... ಸ್ಯಾಮ್ಸನ್ ಬಳಗಕ್ಕೆ 29 ರನ್ಗಳ ಜಯ