ETV Bharat / sports

ಮುಂಬೈ vs ರಾಜಸ್ಥಾನ್ ಮುಖಾಮುಖಿ​: ಗೆದ್ದವರಿಗೆ ಪ್ಲೇ ಆಫ್​ ದಾರಿ ಸುಗಮ - ಆರ್​ಆರ್​ ಪ್ಲೇಯಿಂಗ್ ಸ್ಕ್ವಾಡ್

ಕೊನೆಯ ಸ್ಥಾನಕ್ಕಾಗಿ ರಾಜಸ್ಥಾನ್, ಮುಂಬೈ ಮತ್ತು ಕೋಲ್ಕತ್ತಾ ತಂಡಗಳು ಸ್ಪರ್ಧೆ ಮಾಡುತ್ತಿವೆ. ಇಂದಿನ ಪಂದ್ಯದಲ್ಲಿ ಮುಂಬೈ ಮತ್ತು ರಾಜಸ್ಥಾನ್​ ರಾಯಲ್ಸ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಗೆದ್ದವರು ಪ್ಲೇ ಆಫ್​ ರೇಸ್​ನಲ್ಲಿ ಉಳಿಯಲಿದ್ದಾರೆ. ಸೋತ ತಂಡದ ನೌಕೌಟ್ ಆಸೆ ಕಮರಲಿದೆ.

MI vs RR
ಮುಂಬೈ ಇಂಡಿಯನ್ಸ್ vs ರಾಜಸ್ಥಾನ್ ರಾಯಲ್ಸ್
author img

By

Published : Oct 5, 2021, 3:28 PM IST

ಶಾರ್ಜಾ: 14ನೇ ಆವೃತ್ತಿಯ ಐಪಿಎಲ್ ಬಹಳ ರೋಚಕ ಹಂತಕ್ಕೆ ತಲುಪುತ್ತಿದೆ. ಈಗಾಗಲೆ ಮೂರು ತಂಡಗಳು ಪ್ಲೇ ಆಫ್ ತಲುಪಿವೆ. ಕೊನೆಯ ಸ್ಥಾನಕ್ಕಾಗಿ ರಾಜಸ್ಥಾನ್, ಮುಂಬೈ ಮತ್ತು ಕೋಲ್ಕತ್ತಾ ತಂಡಗಳು ಸ್ಪರ್ಧೆ ಮಾಡುತ್ತಿವೆ. ಇಂದಿನ ಪಂದ್ಯದಲ್ಲಿ ಮುಂಬೈ ಮತ್ತು ರಾಜಸ್ಥಾನ್​ ರಾಯಲ್ಸ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಗೆದ್ದವರು ಪ್ಲೇ ಆಫ್​ ರೇಸ್​ನಲ್ಲಿ ಉಳಿಯಲಿದ್ದಾರೆ. ಸೋತ ತಂಡದ ನೌಕೌಟ್ ಆಸೆ ಕಮರಲಿದೆ.

ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್​ ತಂಡಗಳು ಆಡಿರುವ 12 ಪಂದ್ಯಗಳಲ್ಲಿ 5 ಗೆಲುವು ಮತ್ತು 7 ಸೋಲುಗಳೊಂದಿಗೆ 10 ಅಂಕ ಪಡೆದುಕೊಂಡಿವೆ. ಈ ಪಂದ್ಯವನ್ನು ಗೆದ್ದ ತಂಡ 5ನೇ ಸ್ಥಾನಕ್ಕೇರಲಿದೆ. 13 ಪಂದ್ಯಗಳಿಂದ 12 ಅಂಕ ಹೊಂದಿರುವ ಕೆಕೆಆರ್​ ಇನ್ನೊಂದು ಪಂದ್ಯವನ್ನು ರಾಜಸ್ಥಾನ್​ ರಾಯಲ್ಸ್​ ವಿರುದ್ಧ ಆಡಲಿದೆ.

ರಾಜಸ್ಥಾನ್​ ರಾಯಲ್ಸ್​ ತನ್ನ ಕೊನೆಯ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲ್ಲುವ ಮೂಲಕ ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಇದೀಗ ಸೋತು ಸುಣ್ಣವಾಗಿರುವ ಮುಂಬೈ ವಿರುದ್ಧ ಗೆಲ್ಲುವ ವಿಶ್ವಾಸದಲ್ಲಿದೆ. ಈಗಾಗಲೆ ಸಿಎಸ್​ಕೆ ವಿರುದ್ಧ ಪಂದ್ಯದಲ್ಲಿ ಡೇವಿಡ್​ ಮಿಲ್ಲರ್ ಮತ್ತು ಗ್ಲೇನ್ ಫಿಲಿಪ್ ಕಣಕ್ಕಿಳಿದಿದ್ದರು. ಈ ಇಬ್ಬರ ಜೊತೆ ಶಿವಂ ದುಬೆ ತಂಡಕ್ಕೆ ಸೇರಿರುವುದರಿಂದ ತಂಡದ ಮಧ್ಯಮ ಕ್ರಮಾಂಕ ಬಲಿಷ್ಠವಾಗಿದೆ.

ಕೆಲ ಬದಲಾವಣೆ ಸಾಧ್ಯತೆ

ಇನ್ನು ಬೌಲರ್​ಗಳ ವಿಭಾಗದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಶಾರ್ಜಾದಲ್ಲಿ ಸ್ಪಿನ್​ಗೆ ಹೆಚ್ಚು ನೆರವು ನೀಡುವುದರಿಂದ ಆಕಾಶ್​​ ಸಿಂಗ್​ ಬದಲಿಗೆ ಹೆಚ್ಚುವರಿ ಸ್ಪಿನ್ನರ್ ಆಗಿ ಕನ್ನಡಿಗ ಶ್ರೇಯಸ್ ಗೋಪಾಲ್​ಗೆ ಅವಕಾಶ ನೀಡುವ ಸಾಧ್ಯತೆಯಿದೆ.

5 ಬಾರಿ ಚಾಂಪಿಯನ್​ ಮುಂಬೈ ತಂಡಕ್ಕೂ ಈ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಕಳೆದ ಪಂದ್ಯದಲ್ಲಿ ಇದೇ ಕ್ರೀಡಾಂಗಣದಲ್ಲಿ ಕಡಿಮೆ ಮೊತ್ತದ ಟಾರ್ಗೆಟ್​ ನೀಡಿಯೂ ಪ್ರಬಲ ಪೈಪೋಟಿ ನೀಡಿದ್ದ ಮುಂಬೈ ಇಂಡಿಯನ್ಸ್ ಬಹುತೇಕ ಇದೇ ತಂಡವನ್ನು ಆಡಿಸುವ ಸಾಧ್ಯತೆಯಿದೆ.

ಮುಖಾಮುಖಿ:

ಐಪಿಎಲ್​ನಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ಮುಂಬೈ ತಂಡ ರಾಜಸ್ಥಾನ್​ ರಾಯಲ್ಸ್ ವಿರುದ್ಧ ಮಾತ್ರ ಹೇಳಿಕೊಳ್ಳುವ ದಾಖಲೆ ಹೊಂದಿಲ್ಲ. ಆಡಿರುವ 23 ಪಂದ್ಯಗಳಲ್ಲಿ ಮುಂಬೈ 12 ಮತ್ತು ರಾಜಸ್ಥಾನ್​ ತಂಡ 11 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ಸಂಭಾವ್ಯ ಮುಂಬೈ ತಂಡ: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೀ), ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಹಾರ್ದಿಕ್ ಪಾಂಡ್ಯ, ಕೀರನ್ ಪೊಲ್ಲಾರ್ಡ್, ಕೃನಾಲ್ ಪಾಂಡ್ಯ, ನೇಥನ್ ಕೌಲ್ಟರ್-ನೈಲ್, ಜಯಂತ್ ಯಾದವ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್

ರಾಜಸ್ಥಾನ್​ ಸಂಭಾವ್ಯ ತಂಡ: ಎವಿನ್ ಲೂಯಿಸ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ/ವಿಕೀ), ಶಿವಂ ದುಬೆ, ಗ್ಲೇನ್ ಫಿಲಿಪ್ಸ್, ಡೇವಿಡ್ ಮಿಲ್ಲರ್, ರಾಹುಲ್ ತೇವಾಟಿಯಾ, ಆಕಾಶ್ ಸಿಂಗ್/ಶ್ರೇಯಸ್ ಗೋಪಾಲ್, ಮಯಾಂಕ್ ಮಾರ್ಕಂಡೆ, ಚೇತನ್ ಸಕಾರಿಯಾ, ಮುಸ್ತಫಿಜುರ್ ರೆಹಮಾನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.