ETV Bharat / sports

ಪ್ರಸಿದ್ಧ್​ ಕೃಷ್ಣಗೆ ಟೆಸ್ಟ್​ ಕ್ರಿಕೆಟ್​ನಲ್ಲಿ ಯಶಸ್ಸು ಸಾಧಿಸುವ ಸಾಮರ್ಥ್ಯವಿದೆ : ರೋಹಿತ್ ಶರ್ಮಾ - ಕೇಪ್ ಟೌನ್

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತ ತಂಡದ ಬೌಲಿಂಗ್​ನಲ್ಲಿ​ ಅನುಭವದ ಕೊರತೆ ಇದೆ. ಆದರೆ, ನಂಬಿಕೆ ಇಟ್ಟರೆ ಉತ್ತಮ ಪ್ರದರ್ಶನ ನೀಡಬಹುದು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ​

Prasidh Krishna
Prasidh Krishna
author img

By ANI

Published : Jan 3, 2024, 9:06 AM IST

ಕೇಪ್ ಟೌನ್ (ದಕ್ಷಿಣ ಆಫ್ರಿಕಾ): ಹರಿಣಗಳ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯಕ್ಕೂ ಮುನ್ನ ನಾಯಕ ರೋಹಿತ್​ ಶರ್ಮಾ ಭಾರತದ ವೇಗದ ಬೌಲಿಂಗ್​ ಪಡೆಗೆ ಅನುಭವದ ಕೊರತೆ ಇದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ, ಯುವ ಬೌಲರ್​ಗಳ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವೇಗಿ ಪ್ರಸಿದ್ಧ್ ಕೃಷ್ಣ ಅವರನ್ನು ಹೊಗಳಿದ ಹಿಟ್​ಮ್ಯಾನ್​​, ಪ್ರಸಿದ್ಧ್ ಟೆಸ್ಟ್ ಮಾದರಿಯಲ್ಲಿ ಯಶಸ್ವಿಯಾಗಬಲ್ಲರು ಎಂದಿದ್ದಾರೆ.

ಬುಧವಾರದಿಂದ ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸುತ್ತಿರುವ ಭಾರತ ಸರಣಿ ಸಮಬಲ ಸಾಧಿಸಲು ಯತ್ನಿಸಲಿದೆ. ಸೆಂಚುರಿಯನ್​ನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ಭಾರತ ಇನ್ನಿಂಗ್ಸ್​ ಮತ್ತು 32 ರನ್​ಗಳ ಸೋಲನುಭವಿಸಿತ್ತು. ಇದರಿಂದ ಹರಿಣಗಳ ನಾಡಿನಲ್ಲಿ ದೀರ್ಘಕಾಲದ ಟೆಸ್ಟ್​ ಸರಣಿ ಗೆಲ್ಲುವ ಕನಸು ನನಸಾಗಲಿಲ್ಲ.

  • " class="align-text-top noRightClick twitterSection" data="">

ಅನುಭವದ ಕೊರತೆ ಕಂಡಾಗ ಯುವ ಬೌಲರ್​ಗಳ ಮೇಲೆ ನಂಬಿಕೆ ಇಡಬೇಕು. ಆಗ ಮಾತ್ರ ಅವರು ಉತ್ತಮ ಪ್ರದರ್ಶನ ಸಾಧ್ಯ ಎಂದು ರೋಹಿತ್​ ಹೇಳಿದರು."ಬೌಲಿಂಗ್‌ನಲ್ಲಿ ನಮಗೆ ಸ್ವಲ್ಪ ಅನುಭವದ ಕೊರತೆ ಇದೆ ಎಂದು ನನಗೆ ಅನಿಸುತ್ತದೆ. ಅನನುಭವಿಗಳು ಇದ್ದಾಗ, ಅವರ ಮೇಲೆ ಸ್ವಲ್ಪ ನಂಬಿಕೆ ಮತ್ತು ವಿಶ್ವಾಸ ತೋರಿಸಬೇಕು. ಆಗ ಯಶಸ್ಸು ಸಾಧ್ಯ. ಪ್ರಸಿದ್ಧ್​ ವಿಶೇಷವಾಗಿ ಟೆಸ್ಟ್​ ಕ್ರಿಕೆಟ್​ನಲ್ಲಿ ಯಶಸ್ಸು ಸಾಧಿಸುವ ಸಾಮರ್ಥ್ಯ ಹೊಂದಿದ್ದಾರೆ'' ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮೊದಲ ಟೆಸ್ಟ್​ನಲ್ಲಿ ಭಾರತ ಕಳಪೆ ಬ್ಯಾಟಿಂಗ್ ಪ್ರದರ್ಶನದ ಮೂಲಕ ಸೋಲು ಅನುಭವಿಸಿತ್ತು. ಮೊದಲ ಇನ್ನಿಂಗ್ಸ್​ನಲ್ಲಿ ಕೆ ಎಲ್​ ರಾಹುಲ್​ (101) ಶತಕ ಗಳಿಸಿದ್ದು ಬಿಟ್ಟರೆ ಉಳಿದ ಯಾವುದೇ ಬ್ಯಾಟರ್​​ಗಳು ಹರಿಣಗಳ ಬೌಲರ್​ಗಳನ್ನು ಎದುರಿಸುವಲ್ಲಿ ಎಡವಿದರು. ಎರಡನೇ​ ಇನ್ನಿಂಗ್ಸ್​ನಲ್ಲಿ ವಿರಾಟ್​ ಕೊಹ್ಲಿ 76 ರನ್​ ಗಳಿಸಿದ್ದೇ ತಂಡದ ಸರ್ವಾಧಿಕ ಸ್ಕೋರ್​ ಆಗಿತ್ತು. ಮತ್ತ್ಯಾವ ಬ್ಯಾಟರ್ ಕೂಡ​ ಗಮನಾರ್ಹ ಆಟ ತೋರಲಿಲ್ಲ. ಎರಡನೇ ಇನ್ನಿಂಗ್ಸ್​ನಲ್ಲಿ ವಿರಾಟ್​ ಮತ್ತು ಶುಭಮನ್​ ಗಿಲ್​ ಮಾತ್ರ ಎರಡಂಕಿ ಮೊತ್ತ ತಲುಪಿದ್ದರು. ಉಳಿದ ಆಟಗಾರರು 10 ರನ್​ ಗಳಿಸಲೂ ಪರದಾಡಿದ್ದರು.

ಹರಿಣಗಳ ಪಡೆಯ ಪರ ಕಗಿಸೊ ರಬಾಡ ಮೊದಲ ಇನ್ನಿಂಗ್ಸ್​ನಲ್ಲಿ 5 ವಿಕೆಟ್​ ಪಡೆದಿದ್ದರು. ಅಲ್ಲದೆ, ಯುವ ವೇಗಿಗಳಾದ ನಾಂದ್ರೆ ಬರ್ಗರ್ ಮತ್ತು ಮಾರ್ಕೊ ಜಾನ್ಸೆನ್ ದಾಳಿಗೂ ಭಾರತ ನಲುಗಿತ್ತು. ಆದರೆ, ಭಾರತ ತಂಡದಲ್ಲಿ ನಾಲ್ವರು ವೇಗಿಗಳಿದ್ದರೂ ದಕ್ಷಿಣ ಆಫ್ರಿಕಾ ಬೌಲರ್​ಗಳಂತೆ ಪ್ರಭಾವ ಬೀರುವಲ್ಲಿ ವಿಫಲರಾಗಿದ್ದರು.

ಇದನ್ನೂ ಓದಿ: ಟೆಸ್ಟ್, ಟಿ20 ಕ್ರಿಕೆಟ್​ನಲ್ಲಿ ಭಾರತದ ಕೆಲ ಆಟಗಾರರು ಓವರ್​ ರೇಟೆಡ್​​: ಶ್ರೀಕಾಂತ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.