ETV Bharat / sports

ಅಶ್ವಿನ್​ಗೆ ಕೊನೆ ಓವರ್​ ನೀಡದಿರುವುದೇ ನಮ್ಮ ಸೋಲಿಗೆ ಕಾರಣವಾಯ್ತು: ಡೆಲ್ಲಿ ಕೋಚ್​​ ಪಾಂಟಿಂಗ್! - ಡೆಲ್ಲಿ ಕ್ಯಾಪಿಟಲ್​ vs ರಾಜಸ್ಥಾನ ರಾಯಲ್ಸ್​​

ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಎಲ್ಲ ತಂಡಗಳಿಂದಲೂ ಉತ್ತಮ ಪ್ರದರ್ಶನ ಮೂಡಿ ಬರುತ್ತಿದ್ದು, ಸೋಲುವ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​​ ಅದ್ಭುತವಾಗಿ ಕಮ್​ಬ್ಯಾಕ್​​ ಮಾಡಿ ಗೆಲುವು ಸಾಧಿಸಿದೆ.

Ponting
Ponting
author img

By

Published : Apr 16, 2021, 4:43 PM IST

Updated : Apr 16, 2021, 5:04 PM IST

ಮುಂಬೈ: ಡೆಲ್ಲಿ ಕ್ಯಾಪಿಟಲ್​ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಅದ್ಭುತ ಗೆಲುವು ದಾಖಲು ಮಾಡಿದ್ದು, ಜಯ ಸಾಧಿಸುವ ಪಂದ್ಯದಲ್ಲಿ ರಿಷಭ್ ಪಂತ್​ ಪಡೆ ಸೋಲು ಕಂಡಿರುವುದು ಇದೀಗ ತಂಡಕ್ಕೆ ಹಿನ್ನಡೆಯಾಗಿದೆ.

ರಾಜಸ್ಥಾನ ರಾಯಲ್ಸ್​​ 58 ರನ್​ಗಳಿಕೆ ಮಾಡುವಷ್ಟರಲ್ಲಿ ಪ್ರಮುಖ 5 ವಿಕೆಟ್​ ಕಳೆದುಕೊಂಡಿದ್ದರಿಂದ ಸೋಲು ಖಚಿತ ಎಂದುಕೊಂಡಿತು. ಆದರೆ, ತಂಡಕ್ಕೆ ಡೇವಿಡ್​ ಮಿಲರ್​​ ಆಧಾರವಾಗಿದ್ದು, ಹಾಗೂ ಕೊನೆಯಲ್ಲಿ ಆಕರ್ಷಕ ಆಟವಾಡಿದ ಕ್ರಿಸ್​​ ಮೊರಿಸ್​​ 18 ಎಸೆತಗಳಲ್ಲಿ 36 ರನ್​ಗಳಿಕೆ ಮಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.

Ishant Sharma
ಇಶಾಂತ್​ ಬಗ್ಗೆ ಪಾಟಿಂಗ್ ಮಾತು

ಈ ವಿಚಾರವಾಗಿ ಮಾತನಾಡಿರುವ ಡೆಲ್ಲಿ ತಂಡದ ಕೋಚ್​ ರಿಕಿ ಪಾಟಿಂಗ್​, ಆರ್​. ಅಶ್ವಿನ್​ಗೆ ಕೊರೆ ಓವರ್​ ನೀಡದಿರುವುದೇ ನಮಗೆ ಹಿನ್ನಡೆಯಾಗಿದ್ದು, ಸೋಲಿಗೆ ಅದೇ ಕಾರಣವಾಯ್ತು ಎಂದು ಒಪ್ಪಿಕೊಂಡಿದ್ದಾರೆ. ಮೂರು ಓವರ್​ ಎಸೆದಿದ್ದ ಅಶ್ವಿನ್​ 1 ಬೌಂಡರಿ ಸೇರಿ ಕೇವಲ 14ರನ್​ ನೀಡಿದ್ದರು. ಕೊನೆ ಓವರ್​​ನಲ್ಲಿ ತಂಡಕ್ಕೆ 13ರನ್​ಗಳ ಅವಶ್ಯಕತೆ ಇದ್ದಾಗ ಟಾಮ್​ ಕರ್ರನ್​ಗೆ ಬೌಲಿಂಗ್​ ನೀಡಲಾಯಿತು. ಈ ವೇಳೆ, ಮೊರಿಸ್​ ಸತತ ಎರಡು ಸಿಕ್ಸರ್​​ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಮರಳಲಿದ್ದಾರೆ ಎಬಿಡಿ..ಮಹತ್ವದ ಸೂಚನೆ ನೀಡಿದ ಬೌಚರ್!

ಇದೇ ವೇಳೆ, ಇಶಾಂತ್​ ಶರ್ಮಾ ಎರಡು ಪಂದ್ಯಗಳಿಂದ ಹೊರಗುಳಿದಿರುವ ಬಗ್ಗೆ ಮಾತನಾಡಿರುವ ಕೋಚ್​, ಅವರೊಂದಿಗೆ ನಾವು ಕೆಲಸ ಮಾಡ್ತಿದ್ದು, ಮುಂದಿನ ಕೆಲ ಪಂದ್ಯಗಳಲ್ಲಿ ಅವರು ತಂಡದ ಭಾಗಿಯಾಗಲಿದ್ದಾರೆ ಎಂದಿದ್ದಾರೆ.

Last Updated : Apr 16, 2021, 5:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.