ಹೈದರಾಬಾದ್: ಇಂಗ್ಲೆಂಡ್ ವನಿತೆಯರ ವಿರುದ್ಧ ನಡೆದ ಮೊದಲ ಟಿ-20 ಪಂದ್ಯದಲ್ಲಿ ಭಾರತ ಮಹಿಳಾ ತಂಡದ ಆಲ್ರೌಂಡರ್ ಹರ್ಲೀನ್ ಡಿಯೋಲ್ ಬೌಂಡರಿ ಲೈನ್ ಬಳಿ ಹಿಡಿದ ಅದ್ಭುತ ಕ್ಯಾಚ್‌ಗೆ ಇದೀಗ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
-
PM @narendramodi Ji congratulated @imharleenDeol on her impressive catch. pic.twitter.com/gqDeznFiV2
— Office of Mr. Anurag Thakur (@Anurag_Office) July 10, 2021 " class="align-text-top noRightClick twitterSection" data="
">PM @narendramodi Ji congratulated @imharleenDeol on her impressive catch. pic.twitter.com/gqDeznFiV2
— Office of Mr. Anurag Thakur (@Anurag_Office) July 10, 2021PM @narendramodi Ji congratulated @imharleenDeol on her impressive catch. pic.twitter.com/gqDeznFiV2
— Office of Mr. Anurag Thakur (@Anurag_Office) July 10, 2021
ನಾರ್ಥಾಂಪ್ಟನ್‌ನ ಕೌಂಟಿ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಆಮಿ ಜೋನ್ಸ್ ಅವರು ಶಿಖಾ ಪಾಂಡೆ ಎಸೆದ 18 ಓವರ್‌ನ 5ನೇ ಎಸೆತವನ್ನು ಲಾಂಗ್ ಆಫ್ನತ್ತ ಬಾರಿಸಿದ್ದರು. ಹರ್ಲೀನ್ ಡಿಯೋಲ್ ಬೌಂಡರಿ ಲೈನ್ ಬಳಿ ಚೆಂಡನ್ನು ಹಿಡಿದರಾದರೂ ವೇಗವಾಗಿ ಓಡಿದ್ದರಿಂದ ನಿಯಂತ್ರಣ ಕಳೆದುಕೊಂಡಿದ್ದರು. ಆದರೆ ಚೆಂಡನ್ನು ಮೇಲಕ್ಕೆಸೆದು ಮತ್ತೆ ಬೌಂಡರಿ ಹೊರಗಿನಿಂದ ಡೈವ್ ಮಾಡಿ ಕ್ಯಾಚ್ ಪಡೆದುಕೊಂಡಿದ್ದರು.
-
A fantastic piece of fielding 👏
— England Cricket (@englandcricket) July 9, 2021 " class="align-text-top noRightClick twitterSection" data="
We finish our innings on 177/7
Scorecard & Videos: https://t.co/oG3JwmemFp#ENGvIND pic.twitter.com/62hFjTsULJ
">A fantastic piece of fielding 👏
— England Cricket (@englandcricket) July 9, 2021
We finish our innings on 177/7
Scorecard & Videos: https://t.co/oG3JwmemFp#ENGvIND pic.twitter.com/62hFjTsULJA fantastic piece of fielding 👏
— England Cricket (@englandcricket) July 9, 2021
We finish our innings on 177/7
Scorecard & Videos: https://t.co/oG3JwmemFp#ENGvIND pic.twitter.com/62hFjTsULJ
ಈ ಅದ್ಭುತ ಕ್ಯಾಚ್ ಪ್ರಧಾನಿ ನರೇಂದ್ರ ಮೋದಿಯವರ ಮನವನ್ನೂ ಗೆದ್ದಿದೆ. ಟ್ವಿಟರ್ ಮೂಲಕ ಹರ್ಲೀನ್ ಅವರಿಗೆ ಅವರು ಅಭಿನಂದಿಸಿದ್ದು, 'ಅದ್ಭುತ! ವೆಲ್‌ಡನ್ ಹರ್ಲೀನ್’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : stunning catch: ಇಂಟರ್ನೆಟ್ನಲ್ಲಿ ಕಿಚ್ಚೆಬ್ಬಿಸಿದ ಹರ್ಲೀನ್ ಡಿಯೋಲ್ ಡೈವಿಂಗ್ ಕ್ಯಾಚ್
ಪ್ರಧಾನಿ ಅಭಿನಂದನೆ ಸಲ್ಲಿಸಿರುವುದನ್ನು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.