ETV Bharat / sports

ಐಪಿಎಲ್​ನಲ್ಲಿ ಆಡಿರುವುದು ಸ್ಯಾಮ್​ ಕರ್ರನ್​ಗೆ ಭಾರಿ ಅನುಕೂಲವಾಗಿದೆ : ಇಂಗ್ಲೆಂಡ್ ಕೋಚ್​ - ಕರ್ರನ್ ಐಪಿಎಲ್

23 ವರ್ಷದ ಕರ್ರನ್ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಪರ ಎಂಎಸ್​ ಧೋನಿ ನಾಯಕತ್ವದಲ್ಲಿ ಆಡುತ್ತಿದ್ದಾರೆ. ಅವರು ಗುರುವಾರ ಶ್ರೀಲಂಕಾ ವಿರುದ್ಧ ನಡೆದ 2ನೇ ಏಕದಿನ ಪಂದ್ಯದಲ್ಲಿ 5 ವಿಕೆಟ್​ ಪಡೆದು ಇಂಗ್ಲೆಂಡ್ ಸರಣಿ ಗೆಲ್ಲಲು ನೆರವಾಗಿದ್ದರು. ಅಲ್ಲದೆ ಟಿ20 ಸರಣಿಯಲ್ಲೂ ಕೂಡ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು..

ಸ್ಯಾಮ್ ಕರ್ರನ್
ಸ್ಯಾಮ್ ಕರ್ರನ್
author img

By

Published : Jul 3, 2021, 8:38 PM IST

ಲಂಡನ್ : ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಒತ್ತಡದ ಸಂದರ್ಭದಲ್ಲಿ ಆಡಿರುವುದು ಸ್ಯಾಮ್ ಕರ್ರನ್​ಗೆ ವೈಟ್​ಬಾಲ್​ ಕ್ರಿಕೆಟ್​ನಲ್ಲಿ ತನ್ನ ಕೌಶಲ್ಯ ಸುಧಾರಿಸಲು ನೆರವಾಗಿದೆ ಎಂದು ಇಂಗ್ಲೆಂಡ್ ತಂಡದ ಮುಖ್ಯ ಕೋಚ್ ಗ್ರಹಾಂ ಥಾರ್ಪ್ ತಿಳಿಸಿದ್ದಾರೆ. 23 ವರ್ಷದ ಕರ್ರನ್ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಪರ ಎಂ ಎಸ್​ ಧೋನಿ ನಾಯಕತ್ವದಲ್ಲಿ ಆಡುತ್ತಿದ್ದಾರೆ.

ಅವರು ಗುರುವಾರ ಶ್ರೀಲಂಕಾ ವಿರುದ್ಧ ನಡೆದ 2ನೇ ಏಕದಿನ ಪಂದ್ಯದಲ್ಲಿ 5 ವಿಕೆಟ್​ ಪಡೆದು ಇಂಗ್ಲೆಂಡ್ ಸರಣಿ ಗೆಲ್ಲಲು ನೆರವಾಗಿದ್ದರು. ಅಲ್ಲದೆ ಟಿ20 ಸರಣಿಯಲ್ಲೂ ಕೂಡ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

"ಅವನಿಗೆ(ಸ್ಯಾಮ್​) ಐಪಿಎಲ್ ಅಗಾಧವಾಗಿ ನೆರವಾಗಿದೆ ಎಂದು ನಾನು ಭಾವಿಸುತ್ತೇನೆ. ಆತ ತಾನು ಹೋಗುವ ಪ್ರತಿಯೊಂದು ವಾತಾವರಣದಲ್ಲೂ ಸ್ಪರ್ಧಿಸುವ ಮತ್ತು ಪ್ರದರ್ಶನ ತೋರುವ ಮಾರ್ಗವನ್ನು ಕಂಡುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾನೆ. ಐಪಿಎಲ್​ನಲ್ಲಿ ಆಡಿರುವುದು ಅವನನ್ನು ಹೆಚ್ಚು ಒತ್ತಡದಲ್ಲಿ ಆಡುವ ಅವಕಾಶ ನೀಡಿದೆ" ಎಂದು ಥಾರ್ಪ್​​ ಹೇಳಿದ್ದಾರೆ.

​ಐಪಿಎಲ್​ನಲ್ಲಿ ಪ್ರಮುಖ ಸಂದರ್ಭಗಳಲ್ಲಿ ದೊಡ್ಡ ಹೊಡೆತಕ್ಕೆ ಅವಕಾಶವಿದೆ. ಅಲ್ಲಿ ಆತ ಉತ್ತಮ ಪ್ರಗತಿ ಸಾಧಿಸಿದ್ದಾನೆ. ನಿರ್ಣಾಯಕ ಸಂದರ್ಭದಲ್ಲಿ ಬೌಲಿಂಗ್ ಮಾಡಿದ್ದಾನೆ. ಹಾಗಾಗಿ, ಆತ ಒತ್ತಡದ ಸಂದರ್ಭದಲ್ಲಿ ಆಡಿದ್ದಾನೆ ಮತ್ತು ಸವಾಲನ್ನು ಸ್ವೀಕರಿಸಿದ್ದಾನೆ. ಕೇವಲ 23 ವಯಸ್ಸಿಗೆ ಇದು ಅವನಿಗೆ ಒಳ್ಳೆಯ ಅನುಭವ ಎಂದು ಆಂಗ್ಲ ಕೋಚ್​​ ಕರ್ರನ್​ ಪ್ರದರ್ಶನದ ಶ್ರೇಯವನ್ನು ಐಪಿಎಲ್​ಗೆ ನೀಡಿದ್ದಾರೆ.

ಇದನ್ನು ಓದಿ:ಶಾಲಾ ಶಿಕ್ಷಕನ ಹುದ್ದೆಗೆ ಅರ್ಜಿ ಸಲ್ಲಿಸಿದ MS Dhoni.. ತಂದೆ ಹೆಸ್ರು ನೋಡಿ ಶಾಕ್​!!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.