ETV Bharat / sports

ಆಟಗಾರರು ಎಲ್ಲಾ ಸಮಯದಲ್ಲೂ ಮಾಸ್ಕ್​ ಹಾಕುವುದು ಅಸಾಧ್ಯ : ಸೌರವ್​ ಗಂಗೂಲಿ - ಬಿಸಿಸಿಐ ಅಧ್ಯಕ್ಷ ಸೌರವ್​​ ಗಂಗೂಲಿ

ಟೀಂ ಇಂಡಿಯಾದಲ್ಲಿ ಇದೀಗ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಬಿಸಿಸಿಐ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ. ಇನ್ನುಮುಂದೆ ಆಟಗಾರರು ಕೂಡ ಎಚ್ಚರಿಕೆಯಿಂದ ಇರಲಿದ್ದಾರೆ..

ಸೌರವ್​ ಗಂಗೂಲಿ
ಸೌರವ್​ ಗಂಗೂಲಿ
author img

By

Published : Jul 16, 2021, 9:19 PM IST

ಹೈದರಾಬಾದ್ : ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿ ಆಡಲು ವಿರಾಟ್​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಆಂಗ್ಲರ ನಾಡಿನಲ್ಲಿ ಉಳಿದಿದೆ. ಟೀಂ ಇಂಡಿಯಾದ ಇಬ್ಬರು ಆಟಗಾರರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಟೀಂ ಇಂಡಿಯಾದ ಯಂಗ್​ ಫೈರ್​ ಎಂದೇ ಖ್ಯಾತರಾಗಿರುವ ರಿಷಭ್ ಪಂತ್‌ಗೆ ಕೋವಿಡ್‌ ಸೋಂಕು ತಗುಲಿದೆ. ನೆಟ್‌ ಬೌಲರ್ ದಯಾನಂದ್ ಗರಾನಿಗೂ ಸೋಂಕು ದೃಢಪಟ್ಟಿದೆ. ಇದೇ ಕಾರಣದಿಂದ ಪಂತ್​ ಕೌಂಟಿ ಇಲೆವೆನ್ ವಿರುದ್ಧ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಆಡುತ್ತಿಲ್ಲ.

ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಅಧ್ಯಕ್ಷ ಸೌರವ್​​ ಗಂಗೂಲಿ, ಎಲ್ಲಾ ಸಮಯದಲ್ಲಿಯೂ ಮಾಸ್ಕ್‌ ಹಾಕಿಕೊಳ್ಳುವುದು ಅಸಾಧ್ಯ ಎಂದು ಯುವ ಆಟಗಾರನನ್ನು ಸಮರ್ಥಿಸಿಕೊಂಡಿದ್ದಾರೆ. "ಇಂಗ್ಲೆಂಡ್‌ನಲ್ಲಿ ಇತ್ತೀಚೆಗೆ ಮುಕ್ತಾಯವಾಗಿದ್ದ ಯುರೋ ಕಪ್‌ ಫುಟ್ಬಾಲ್‌ ಚಾಂಪಿಯನ್‌ಷಿಪ್‌ ಹಾಗೂ ವಿಂಬಲ್ಡನ್‌ ಟೆನಿಸ್ ಟೂರ್ನಿಗಳನ್ನು ನೋಡಿದ್ದೇವೆ.

ಕೋವಿಡ್‌-19 ನಿಯಮಾವಳಿ ಬದಲಾವಣೆಯಾಗಿ ವೀಕ್ಷಕರ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಅಂದಹಾಗೆ ನಮ್ಮ ತಂಡದ ಆಟಗಾರರು ರಜೆಯಲ್ಲಿದ್ದಾರೆ. ಹಾಗಾಗಿ, ಎಲ್ಲಾ ಸಮಯದಲ್ಲಿಯೂ ಮಾಸ್ಕ್‌ ಹಾಕಿಕೊಳ್ಳುವುದು ಸಾಧ್ಯವಿಲ್ಲ," ಎಂದು ಹೇಳಿದರು.

ಇದನ್ನೂ ಓದಿ : ಅಭ್ಯಾಸ ಪಂದ್ಯದಿಂದ ರಿಷಭ್​​ ಪಂತ್​ ಔಟ್​​ : ಕನ್ನಡಿಗ KL ರಾಹುಲ್​​ ಇನ್​​

ಟೀಂ ಇಂಡಿಯಾದಲ್ಲಿ ಇದೀಗ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಬಿಸಿಸಿಐ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ. ಇನ್ನುಮುಂದೆ ಆಟಗಾರರು ಕೂಡ ಎಚ್ಚರಿಕೆಯಿಂದ ಇರಲಿದ್ದಾರೆಂದು ಗಂಗೂಲಿ ತಿಳಿಸಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಬಳಿಕ ಭಾರತ ತಂಡದ ಆಟಗಾರರಿಗೆ 20 ದಿನಗಳ ಕಾಲ ರಜೆ ನೀಡಲಾಗಿತ್ತು. ಈ ವೇಳೆ ರಿಷಭ್‌ ಪಂತ್‌ ತಮ್ಮ ಸ್ನೇಹಿತರೊಂದಿಗೆ ಯುರೋ ಕಪ್‌ ಫುಟ್ಬಾಲ್‌ ಪಂದ್ಯ ವೀಕ್ಷಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.