ನವದೆಹಲಿ: ರನ್ನಿಂಗ್ ಮಾಡುವಾಗ ವಿದೇಶಿ ಪ್ಲೇಯರ್ಸ್ ರೀತಿಯಲ್ಲಿ ಭಾರತದ ಮಹಿಳಾ ಕ್ರಿಕೆಟಿಗರು ಹೆಚ್ಚು ಬಲಶಾಲಿಗಳಲ್ಲ ಎಂದು ಫೀಲ್ಡಿಂಗ್ ಕೋಚ್ ಅಭಯ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.
ಅಂಡರ್-19 ಪುರುಷ ತಂಡದೊಂದಿಗೆ ಸಾಕಷ್ಟು ಕೆಲಸ ಮಾಡಿರುವ ಶರ್ಮಾ ಇದೀಗ ಮಹಿಳಾ ತಂಡದ ಫೀಲ್ಡಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದು, ಈಗಾಗಲೇ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಮಹಿಳಾ ತಂಡದೊಂದಿಗೆ ಇದ್ದರು.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಕೊನೆ ಕ್ಷಣದಲ್ಲಿ ಆಯೋಜನೆ ಮಾಡಿದ್ದರಿಂದ ಶರ್ಮಾ ಆಟಗಾರರೊಂದಿಗೆ ಹೆಚ್ಚಿನ ಸಮಯ ವ್ಯಯಮಾಡಿಲ್ಲ. ಆದರೆ, ಜೂನ್ 16ರಿಂದ ಯುಕೆ ಪ್ರವಾಸದ ಸಮಯದಲ್ಲಿ ವೈಯಕ್ತಿಯ ಆಧಾರದ ಮೇಲೆ ಕೆಲಸ ಮಾಡಲು ಎದುರು ನೋಡುತ್ತಿದ್ದಾರೆ.
ಭಾರತ ಮಹಿಳಾ ತಂಡ ಈ ವೇಳೆ ಆತಿಥೇಯರ ವಿರುದ್ಧ ಟೆಸ್ಟ್, ಮೂರು ಏಕದಿನ ಹಾಗೂ ಟಿ-20 ಪಂದ್ಯಗಳಲ್ಲಿ ಭಾಗಿಯಾಗಲಿದೆ. ದಿನದಿಂದ ದಿನಕ್ಕೆ ಆಟ ಬದಲಾಗುತ್ತಿದ್ದು, ಪ್ಲೇಯರ್ಸ್ ಹೆಚ್ಚು ಅಥ್ಲೆಟಿಕ್ ಆಗಿರಬೇಕು. ತಾಂತ್ರಿಕವಾಗಿ ನಾವು ಕೆಲಸ ಮಾಡಬೇಕಾಗಿದ್ದು, ಅನೇಕ ಮಹಿಳಾ ಪ್ಲೇಯರ್ಸ್ ಥ್ರೋ ಮಾಡುವ ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು.
ಕಳೆದ 12 ತಿಂಗಳಲ್ಲಿ ಭಾರತದ ಮೊದಲ ಸರಣಿ ಇದಾಗಿದ್ದು, ವಿದೇಶಿ ತಂಡ ಹಾಗೂ ನಮ್ಮ ತಂಡದ ನಡುವೆ ಭಾರಿ ವ್ಯತ್ಯಾಸವಿದೆ ಎಂಬುದನ್ನ ನಾವು ಒಪ್ಪಿಕೊಳ್ಳಬೇಕು. ವಿಕೆಟ್ಗಳ ನಡುವಿನ ಓಟವು ಸಹ ದೊಡ್ಡ ಭಾಗವಾಗಿದ್ದು, ಸಿಂಗಲ್ಸ್ ಪಡೆದುಕೊಳ್ಳಲು ಹೆಚ್ಚು ಅನುಕೂಲವಾಗುತ್ತದೆ ಎಂದಿದ್ದಾರೆ.