ಪಿಕೆಎಲ್-8 : ಜೈಪುರ್ ಮಣಿಸಿದ ಪುಣೆ.. ಪ್ಲೇ ಆಫ್ ಪ್ರವೇಶಿಸಿದ ಬೆಂಗಳೂರು ಬುಲ್ಸ್! - ಜೈಪುರ ಪಿಂಕ್ಸ್ ಪ್ಯಾಂಥರ್ಸ್
ಬೆಂಗಳೂರು ಬುಲ್ಸ್ 22 ಪಂದ್ಯಗಳಿಂದ 66 ಅಂಕ ಪಡೆದುಕೊಂಡಿದ್ದರೆ, ಪುಣೇರಿ ಪಲ್ಟನ್ಸ್ ಕೂಡ 66 ಅಂಕ ಪಡೆದುಕೊಂಡಿದೆ, ಆದರೆ ಬುಲ್ಸ್ 53 ಗೆಲುವಿನ ಅಂತರದ ಅಂಕಗಳನ್ನು ಹೊಂದಿದ್ದರೆ, ಪಲ್ಟನ್ಸ್ 33 ಅಂಕಗಳನ್ನು ಹೊಂದಿದೆ. ಹಾಗಾಗಿ ಬುಲ್ಸ್ 4ನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿದೆ..

ಬೆಂಗಳೂರು : ಪ್ಲೇ ಆಫ್ ಪ್ರವೇಶಿಸಲು 2 ತಂಡಗಳಿಗೂ ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧ ಪುಣೇರಿ ಪಲ್ಟನ್ಸ್ 37-30ರಲ್ಲಿ ಗೆಲುವು ಸಾಧಿಸಿದೆ. ಆದರೆ, ಬೆಂಗಳೂರು ಬುಲ್ಸ್ ಪ್ಲೇ ಆಫ್ ಪ್ರವೇಶಿಸಿದ್ದು, ಈ ಎರಡೂ ತಂಡಗಳು ತಮ್ಮ ಸ್ಥಾನಕ್ಕಾಗಿ ಉಳಿದಿರುವ ಮತ್ತೆರಡು ಪಂದ್ಯಗಳ ಫಲಿತಾಂಶಕ್ಕಾಗಿ ಕಾಯಬೇಕಾಗಿದೆ.
ಬೆಂಗಳೂರು ಬುಲ್ಸ್ 22 ಪಂದ್ಯಗಳಿಂದ 66 ಅಂಕ ಪಡೆದುಕೊಂಡಿದ್ದರೆ, ಪುಣೇರಿ ಪಲ್ಟನ್ಸ್ ಕೂಡ 66 ಅಂಕ ಪಡೆದಿದೆ. ಆದರೆ, ಬುಲ್ಸ್ 53 ಗೆಲುವಿನ ಅಂತರದ ಅಂಕಗಳನ್ನು ಹೊಂದಿದ್ದರೆ, ಪಲ್ಟನ್ಸ್ 33 ಅಂಕಗಳನ್ನು ಹೊಂದಿದೆ. ಹಾಗಾಗಿ, ಬುಲ್ಸ್ 4ನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿದೆ.
ಇಂದು 63 ಅಂಕಗಳನ್ನು ಹೊಂದಿರುವ ಹರಿಯಾಣ ಸ್ಟೀಲರ್ಸ್ ಅಗ್ರಸ್ಥಾನಿ ಪಾಟ್ನಾ ವಿರುದ್ಧ ಸೆಣಸಾಡಲಿದೆ. ಮತ್ತೊಂದು ಪಂದ್ಯದಲ್ಲಿ 62 ಅಂಕಗಳನ್ನು ಹೊಂದಿರುವ ಗುಜರಾತ್ ಜೈಂಟ್ಸ್ ಯು ಮುಂಬಾ ತಂಡವನ್ನು ಎದುರಿಸಲಿದೆ.
ಈ ಎರಡೂ ಪಂದ್ಯದಲ್ಲಿ ಹರಿಯಾಣ ಅಥವಾ ಗುಜರಾತ್ ಸೋಲು ಕಂಡರೆ ಪುಣೇರಿ ಪಲ್ಟನ್ಸ್ 5 ಅಥವಾ 6ನೇ ಸ್ಥಾನಕ್ಕೆ ಲಗ್ಗೆಯಿಡಲಿದೆ. ಎರಡೂ ತಂಡ ಗೆದ್ದರೆ ಆ ತಂಡಗಳು ಪ್ಲೇ ಆಫ್ ಪ್ರವೇಶಿಸಲಿವೆ. ಎರಡೂ ತಂಡಗಳು ಸೋತರೆ ಪುಣೆ ಜೊತೆಗೆ 63 ಅಂಕ ಹೊಂದಿರುವ ಜೈಪುರ ತಂಡ ಕೂಡ ಪ್ಲೇ ಆಫ್ ಪ್ರವೇಶಿಸಲಿದೆ.
ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಕೊನೆಯ ಪಂದ್ಯದವರೆಗೂ ಪ್ಲೇ ಆಫ್ ಪ್ರವೇಶಿಸುವ ತಂಡಗಳ ಸಂಪೂರ್ಣ ಚಿತ್ರಣವನ್ನು ನೀಡದೆ ರೋಚಕತೆಯನ್ನುಂಟು ಮಾಡಿದೆ.
ಇದನ್ನೂ ಓದಿ:ವೇತನ ನೀಡಿಲ್ಲವೆಂದು ಆರೋಪಿಸಿದ ಆಸೀಸ್ ಕ್ರಿಕೆಟಿಗನಿಗೆ ಅಜೀವ ನಿಷೇಧ ಹೇರಿದ ಪಿಸಿಬಿ