ETV Bharat / sports

‘ಪಿಕೆಎಲ್- 8 : ಎಲಿಮಿನೇಟರ್​ನಲ್ಲಿ ಬೆಂಗಳೂರು ಬುಲ್ಸ್​ಗೆ ಗುಜರಾತ್​ ಸವಾಲು - ಯುಪಿ ಯೋಧ vs ಪುಣೇರಿ ಪಲ್ಟನ್ಸ್

ಬೆಂಗಳೂರು ಬುಲ್ಸ್​ ಅಂಕಪಟ್ಟಿಯಲ್ಲಿ ಗುಜರಾತ್​ 22 ಪಂದ್ಯಗಳನ್ನಾಡಿ 68 ಅಂಕ ಪಡೆದು 4ನೇ ಸ್ಥಾನ ಪಡೆದರೆ, ಬುಲ್ಸ್​ 66 ಅಂಕಗಳೊಂದಿಗೆ 5ನೇ ಸ್ಥಾನ ಪಡೆದಕೊಂಡಿದೆ. ಹಿಂದಿನ 2 ಮುಖಾಮುಖಿಯಲ್ಲಿ ಎರಡೂ ತಂಡಗಳು ತಲಾ ಒಂದು ಜಯ ಮತ್ತು ಸೋಲು ಕಂಡಿವೆ..

PKL 8 Eliminators : UP Yoddha faces Puneri Paltan, Gujarat Giants to take on Bengaluru Bulls
ಎಲಿಮಿನೇಟರ್​ನಲ್ಲಿ ಬೆಂಗಳೂರು ಬುಲ್ಸ್​ಗೆ ಗುಜರಾತ್​ ಸವಾಲು
author img

By

Published : Feb 20, 2022, 4:09 PM IST

ಬೆಂಗಳೂರು : ಆರಂಭದಲ್ಲಿ ಅಬ್ಬರಿಸಿ ಮಧ್ಯಂತರದಲ್ಲಿ ಮುಗ್ಗರಿಸಿ ಕಷ್ಟಪಟ್ಟು ಪ್ಲೇ ಆಫ್​ಗೆ ಪ್ರವೇಶಿಸಿರುವ ಬೆಂಗಳೂರು ಬುಲ್ಸ್ ಸೋಮವಾರ ನಡೆಯಲಿರುವ ಗುಜರಾತ್ ಲಯನ್ಸ್​ ವಿರುದ್ಧ ಎಲಿಮಿನೇಟರ್​​ ಪಂದ್ಯದಲ್ಲಿ ಸೆಣಸಾಡಲಿದೆ.

ಬೆಂಗಳೂರು ಬುಲ್ಸ್​ ಅಂಕಪಟ್ಟಿಯಲ್ಲಿ ಗುಜರಾತ್​ 22 ಪಂದ್ಯಗಳನ್ನಾಡಿ 68 ಅಂಕ ಪಡೆದು 4ನೇ ಸ್ಥಾನ ಪಡೆದರೆ, ಬುಲ್ಸ್​ 66 ಅಂಕಗಳೊಂದಿಗೆ 5ನೇ ಸ್ಥಾನ ಪಡೆದಿದೆ. ಹಿಂದಿನ 2 ಮುಖಾಮುಖಿಯಲ್ಲಿ ಎರಡೂ ತಂಡಗಳು ತಲಾ ಒಂದು ಜಯ ಮತ್ತು ಸೋಲು ಕಂಡಿವೆ.

ಮೊದಲ ಮುಖಾಮುಖಿಯಲ್ಲಿ ಬುಲ್ಸ್​ 46-37ರಲ್ಲಿ ಜಯ ಸಾಧಿಸಿದರೆ, 2ನೇ ಮುಖಾಮುಖಿಯಲ್ಲಿ ಜೈಂಟ್ಸ್​ 40-36ರಲ್ಲಿ ಗೆಲುವಿನ ನಗೆ ಬೀರಿತ್ತು. ಸೋಮವಾರ ನಡೆಯಲಿರುವ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಪುಣೇರಿ ಪಲ್ಟನ್ಸ್​ ವಿರುದ್ಧ ಯುಪಿ ಯೋಧ ಕಣಕ್ಕಿಳಿಯಲಿದೆ.

ಯೋಧ 68 ಅಂಕ ಪಡೆದು 3ನೇ ಸ್ಥಾನ ಪಡೆದುಕೊಂಡಿದ್ದರೆ, ಪಲ್ಟನ್ಸ್​ 66 ಅಂಕ ಪಡೆದು ಕೊನೆಯ ಸ್ಥಾನಿಯಾಗಿ ಪ್ಲೇ ಆಫ್​ ಪ್ರವೇಶಿಸಿದೆ. ಇನ್ನು ಮೊದಲ ಎರಡು ಸ್ಥಾನಗಳನ್ನು ಪಡೆದಿರುವ ಪಾಟ್ನಾ ಪೈರೇಟ್ಸ್(86)​ ಮತ್ತು ದಬಾಂಗ್​ ಡೆಲ್ಲಿ(75) ನೇರವಾಗಿ ಸೆಮಿಫೈನಲ್ ಪ್ರವೇಶಿಸಿವೆ.

ಫೆಬ್ರವರಿ 23ರಂದು ಮೊದಲ ಎಲಿಮಿನೇಟರ್​ ಪಂದ್ಯ ಗೆದ್ದ ತಂಡ ಪಾಟ್ನಾವನ್ನು 2ನೇ ಎಲಿಮಿನೇಟರ್​ ಪಂದ್ಯ ಗೆದ್ದ ತಂಡ ಡೆಲ್ಲಿಯನ್ನು ಎದುರಿಸಲಿದೆ. ಫೆ.25ರಂದು ಫೈನಲ್ ಪಂದ್ಯ ನಡೆಯಲಿದೆ.

ಇದನ್ನೂ ಓದಿ:ವೇತನ ನೀಡಿಲ್ಲವೆಂದು ಆರೋಪಿಸಿದ ಆಸೀಸ್​ ಕ್ರಿಕೆಟಿಗನಿಗೆ ಅಜೀವ ನಿಷೇಧ ಹೇರಿದ ಪಿಸಿಬಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.