ETV Bharat / sports

ಅಹರ್ನಿಶಿ ಟೆಸ್ಟ್: 303ಕ್ಕೆ ಭಾರತ ಡಿಕ್ಲೇರ್, ಶ್ರೀಲಂಕಾಗೆ 447ರನ್​ಗಳ ಬೃಹತ್​ ಗುರಿ - ಶ್ರೇಯಸ್​ ಅಯ್ಯರ್

ಮೊದಲ ದಿನ ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 252ಕ್ಕೆ ಆಲೌಟ್ ಆದರೆ, ಇದಕ್ಕುರವಾಗಿ ಶ್ರೀಲಂಕಾ ತಂಡ ಕೇವಲ 109ರನ್​ಗಳಿಗೆ ಆಲೌಟ್​ ಆಗಿತ್ತು. ಇನ್ನು 143 ರನ್​ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ 303 ರನ್​ಗಳಿಸಿ ಡಿಕ್ಲೇರ್ ಘೋಷಿಸಿದೆ.

India vs SL Pink-ball Test
ಭಾರತ vs ಶ್ರೀಲಂಕಾ ಟೆಸ್ಟ್​
author img

By

Published : Mar 13, 2022, 9:40 PM IST

ಬೆಂಗಳೂರು: ರಿಷಭ್​ ಪಂತ್ ಮತ್ತು ಶ್ರೇಯಸ್​ ಅಯ್ಯರ್​ ಅವರ ತ್ವರಿತ ಅರ್ಧಶತಕಗಳ ನೆರವಿನಿಂದ ಭಾರತ ತಂಡ 2ನೇ ಇನ್ನಿಂಗ್ಸ್​ನಲ್ಲಿ 9 ವಿಕೆಟ್​ ಕಳೆದುಕೊಂಡು 303 ರನ್​ಗಳಿಸಿದ್ದ ವೇಳೆ ಡಿಕ್ಲೇರ್​ ಘೋಷಿಸಿಕೊಂಡಿದ್ದು, ಶ್ರೀಲಂಕಾ ತಂಡಕ್ಕೆ 447 ರನ್​ಗಳ ಅಸಾಧಾರಣ ಗುರಿ ನೀಡಿದೆ.

ಮೊದಲ ದಿನ ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 252ಕ್ಕೆ ಆಲೌಟ್ ಆದರೆ, ಇದಕ್ಕುತ್ತರವಾಗಿ ಶ್ರೀಲಂಕಾ ತಂಡ ಕೇವಲ 109ರನ್​ಗಳಿಗೆ ಸರ್ವಪತನಗೊಂಡಿತ್ತು. ಇನ್ನು 143 ರನ್​ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ 303 ರನ್​ಗಳಿಸಿ ಡಿಕ್ಲೇರ್ ಘೋಷಿಸಿದೆ.

ಎರಡನೇ ಇನ್ನಿಂಗ್ಸ್​ ಆರಂಭಿಸಿದ ಭಾರತ ತಂಡ ಮೊದಲ ವಿಕೆಟ್​ಗೆ 42 ರನ್​ ಸೇರಿಸುವಷ್ಟರಲ್ಲಿ ಆರಂಭಿಕ ಮಯಾಂಕ್ ಅಗರ್ವಾಲ್(22) ವಿಕೆಟ್ ಕಳೆದುಕೊಂಡಿತು. ನಂತರ ಬಂದ ವಿಹಾರಿ 2ನೇ ವಿಕೆಟ್​ಗೆ ರೋಹಿತ್ ಶರ್ಮಾ(46) ಜೊತೆಗೆ 56 ರನ್​ ಸೇರಿಸಿದರು. 79 ಎಸೆತಗಳನ್ನು ಎದುರಿಸಿದ ರೋಹಿತ್ 46 ರನ್​ಗಳಿಸಿ ಧನಂಜಯ ಡಿ ಸಿಲ್ವಾಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ 35 ರನ್​ಗಳಿಸಿದ್ದ ವಿಹಾರಿ ಮತ್ತು 13 ರನ್​ಗಳಿಸಿದ್ದ ಕೊಹ್ಲಿ ಸ್ಪಿನ್ನರ್ ಪ್ರವೀಣ್ ಜಯವಿಕ್ರಮ ಬೌಲಿಂಗ್​ನಲ್ಲಿ ಔಟಾಗುವ ಮೂಲಕ ಬೆಂಗಳೂರಿನ ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಶೆ ಮೂಡಿಸಿದರು.

ಆದರೆ ಸ್ಫೋಟಕ ಬ್ಯಾಟಿಂಗ್ ಮಾಡಿದ ರಿಷಭ್​ ಪಂತ್ 31 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್​ ಸಹಿತ 50 ರನ್, ಶ್ರೇಯಸ್ ಅಯ್ಯರ್ 87 ಎಸೆತಗಳಲ್ಲಿ 67ರನ್​ ರನ್​ಗಳಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.

ಶ್ರೀಲಂಕಾ ಪರ ಪ್ರವೀಣ ಜಯವಿಕ್ರಮ 78ಕ್ಕೆ4, ಎಂಬುಲ್ದೇನಿಯಾ 87ಕ್ಕೆ 3, ವಿಶ್ವ ಫರ್ನಾಂಡೊ 48ಕ್ಕೆ1 ಮತ್ತು ಧನಂಜಯ ಡಿ ಸಿಲ್ವಾ 47ಕ್ಕೆ 1 ವಿಕೆಟ್ ಪಡೆದರು.

ಶ್ರೀಲಂಕಾಗೆ ಆರಂಭಿಕ ಆಘಾತ: 447ರನ್​ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡ ಮೊದಲ ಓವರ್​ನಲ್ಲೇ ಲಹಿರು ತಿರಿಮನ್ನೆ(0) ವಿಕೆಟ್ ಕಳೆದುಕೊಂಡಿದೆ. 2ನೇ ದಿನದಂತ್ಯಕ್ಕೆ 7 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು 28 ರನ್​ಗಳಿಸಿದೆ. ಕುಶಾಲ್​ ಮೆಂಡಿಸ್​(16) ಮತ್ತು ನಾಯಕ ಕರುಣರತ್ನೆ(10) 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ.

ಇದನ್ನೂ ಓದಿ:ಕಪಿಲ್ ದೇವ್ ಹೆಸರಿನಲ್ಲಿದ್ದ 40 ವರ್ಷಗಳ ದಾಖಲೆ ಮುರಿದ ರಿಷಭ್ ಪಂತ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.