ಮುಂಬೈ: ಯಾವುದೇ ಒಬ್ಬ ಕ್ರಿಕೆಟಿಗ ಯಶಸ್ವಿಯಾಗಬೇಕೆಂದರೆ ಟೆಸ್ಟ್ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ತೋರಬೇಕು ಎಂದು ಬಿಸಿಸಿಐ ಅಧ್ಯಕ್ಷ ಹಾಗೂ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
ಕ್ರಿಕೆಟ್ನಲ್ಲಿ ಟೆಸ್ಟ್ ಏಕೆ ಅತ್ಯುತ್ತಮ ಸ್ವರೂಪ ಮತ್ತು ಜನರು ದೀರ್ಘ ಮಾದರಿಯಲ್ಲಿ ರನ್ಗಳಿಸಿದವರನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂಬುವುದನ್ನು ತಮ್ಮ ಮಾತುಗಳಲ್ಲಿ ವಿವರಿಸಿದ್ದಾರೆ.
ನಾನು ಚಿಕ್ಕವನಿದ್ದಾಗ ಕ್ರಿಕೆಟ್ ಆಡಲು ಶುರು ಮಾಡಿದಾಗ, ಟೆಸ್ಟ್ ಕ್ರಿಕೆಟ್ ಅಂತಿಮ ಸ್ವರೂಪವಾಗಿತ್ತು. ನಾನು ಈಗಲೂ ಅದನ್ನೇ ಸರ್ವಶ್ರೇಷ್ಠ ಕ್ರಿಕೆಟ್ ಎಂದು ಭಾವಿಸುತ್ತೇನೆ. ಅದಕ್ಕೆ ಇದನ್ನು 'ಟೆಸ್ಟ್' ಕ್ರಿಕೆಟ್ ಎಂದು ಕರೆಯುತ್ತಾರೆ ಎಂದು ಸ್ಟಾರ್ ಸ್ಪೋರ್ಟ್ಸ್ಗೆ ನೀಡಿದ ಸಂದರ್ಶನದಲ್ಲಿ ಗಂಗೂಲಿ ಹೇಳಿದ್ದಾರೆ.
" ಯಾವುದೇ ಒಬ್ಬ ಕ್ರಿಕೆಟರ್ ಆತ/ಅವಳು ಆಟದಲ್ಲಿ ಯಶಸ್ವಿಯಾಗಬೇಕಾದರೆ ಅಥವಾ ತಮ್ಮ ಚಾಪನ್ನು ಮೂಡಿಸಬೇಕಾದರೆ ಟೆಸ್ಟ್ ಕ್ರಿಕೆಟ್ ಒಂದು ದೊಡ್ಡ ವೇದಿಕೆಯಾಗಿದೆ. ಇಲ್ಲಿ ಚೆನ್ನಾಗಿ ಆಡಿದವರು ಮತ್ತು ರನ್ಗಳಿಸುತ್ತಾರೋ ಅವರನ್ನು ಜನರು ಸದಾಕಾಲ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ನೀವು 40-50 ವರ್ಷಗಳ ಹಿಂದಿನ ಕ್ರಿಕೆಟ್ನ ಎಲ್ಲ ದೊಡ್ಡ ಹೆಸರುಗಳನ್ನು ನೋಡಿ, ಅವರೆಲ್ಲರೂ ಅತ್ಯುತ್ತಮ ಟೆಸ್ಟ್ ದಾಖಲೆಗಳನ್ನು ಹೊಂದಿದ್ದಾರೆ " ಎಂದು ದಾದಾ ತಿಳಿಸಿದ್ದಾರೆ.
ಜೂನ್ 22ಕ್ಕೆ 25 ವರ್ಷಗಳ ಹಿಂದೆ ಗಂಗೂಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕ ಸಿಡಿಸುವ ಮೂಲಕ ಕ್ರಿಕೆಟ್ನಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸಿದ್ದರು. ಅದು ಅವರು ಇಂಗ್ಲೆಂಡ್ ವಿರುದ್ಧ ಕ್ರಿಕೆಟ್ ಕಾಶಿ ಎಂದೇ ಕರೆಯಲ್ಪಡುವ ಲಾರ್ಡ್ಸ್ನಲ್ಲಿ 2ನೇ ಟೆಸ್ಟ್ನ ಮೂರನೇ ದಿನ ಬ್ಯಾಟಿಂಗ್ನಲ್ಲಿ ವಿಜೃಂಬಿಸಿದ್ದರು.
" ಎಲ್ಲರಿಗೂ ಲಾರ್ಡ್ಸ್ನಲ್ಲಿ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನಾಡುವ ಅವಕಾಶ ಸಿಗುವುದಿಲ್ಲ. ನಾನು ಪಾಯಿಂಟ್ನಲ್ಲಿ ಫೀಲ್ಡಿಂಗ್ನಲ್ಲಿ ಮಾಡುತ್ತಿದ್ದೆ. ಸ್ಟೇಡಿಯಂ ಸಂಪೂರ್ಣ ತುಂಬಿತ್ತು. ನನಗೆ ಅದು ಯಾವಾಗಲೂ ಸಂತೋಷ ತರುವ ಮೈದಾನ.
ನನ್ನ ಚೊಚ್ಚಲ ಪಂದ್ಯದ ಕಡೆ ನಾನು ಹಿಂತಿರುಗಿದ ಪ್ರತಿ ಬಾರಿಯೂ ಮೊದಲ ದಿನ ಉದ್ದನೆಯ ಕೋಣೆಯ ಕೆಳಗೆ ನಡೆಯಲು ಭಯಪಟ್ಟಿದ್ದೆ. ಆದರೆ, ಅದೃಷ್ಟವಶಾತ್ ನಾವು ಮೊದಲು ಫೀಲ್ಡಿಂಗ್ ಮಾಡಿದ್ದೆವು. ಇಲ್ಲದಿದ್ದರೆ ನಾನು ಮೊದಲ ದಿನವೇ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕಿತ್ತು "ಎಂದು ಗಂಗೂಲಿ ನೆನಪಿಸಿಕೊಂಡರು.
ಆ ಪಂದ್ಯದಲ್ಲಿ 3ನೇ ದಿನ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಗಂಗೂಲಿ 301 ಎಸೆತಗಳಲ್ಲಿ 130 ರನ್ಗಳಿಸಿ ತಮ್ಮ ಚೊಚ್ಚಲ ಶತಕ ದಾಖಲಿಸಿದ್ದರು. ಇದೇ ಪಂದ್ಯದಲ್ಲಿ ಡೆಬ್ಯೂಟ್ ಮಾಡಿದ್ದ ಕನ್ನಡಿಗ ದ್ರಾವಿಡ್ ಕೂಡ 95 ರನ್ಗಳಿಸಿದ್ದರು.
ಇದನ್ನು ಓದಿ: ಭಾರತ ಕ್ರಿಕೆಟ್‌ಗೆ ಭದ್ರ ಬುನಾದಿ ಹಾಕಿದ 'ಭಲೇ ಜೋಡಿ'ಯ ಪದಾರ್ಪಣೆಗೆ 25 ವರ್ಷ